ವಿಜಯಲಕ್ಷ್ಮಿ ದರ್ಶನ್ ಹಾಗೂ ಧನ್ವೀರ್ ಗೌಡ ಜಟಾಪಟಿ ನಡುವೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಎಂಟ್ರಿ ಕೊಟ್ಟಿದ್ದಾರೆ. ಈ ಸಂಘರ್ಷದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಫೇಸ್‌ಬುಕ್ ಲೈವ್ ಬಂದು ಹಂಚಿಕೊಂಡಿದ್ದಾರೆ. ವಿಜಯಲಕ್ಷ್ಮಿ ದರ್ಶನ್‌ ಅವರಿಗೂ ತಿಳಿ ಹೇಳಿದ್ದಾರೆ. ಜೈಲಿನಲ್ಲಿ ಕೂತು ದರ್ಶನ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ ಎಂದು ಆರೋಪಿಸಿದ್ದಾರೆ. ಇದೆಲ್ಲದರ ನಡುವೆ ಕೆಲವ್ರು ದುಡ್ಡ ತಗೊಂಡು ಡಿ ಬಾಸ್ ಡಿಬಾಸ್ ಅಂತ ಕೂಗ್ತಾರೆ ಎಂದಿದ್ದಾರೆ.

ದೊಡ್ಡ ದೊಡ್ಡ ಕಾರ್ಯಕ್ರಮಕ್ರಗಳಲ್ಲಿ ಕೆಲವರು ಡಿ ಬಾಸ್ ಡಿಬಾಸ್ ಎಂದು ಕೂಗಿದ್ದನ್ನೂ ನೋಡಿದ್ದೇವೆ. ಸಿಎಂ ಡಿಕೆ ಶಿವಕುಮಾರ್ ಅವರು ಭಾಗವಹಿಸುವ ವೇದಿಕೆಗಳಲ್ಲಿ ಕೂಡ ಇದು ಕಂಡುಬಂದಿದೆ. ಸಿಎಂ ವೇದಿಕೆಯಲ್ಲಿ ಮಾತನಾಡಲು ಶುರು ಮಾಡುತ್ತಿದ್ದಂತೆ ಡಿ ಬಾಸ್ ಡಿಬಾಸ್ ಕೂಗಿ ಅಡ್ಡಿಪಡಿಸುವ ಪ್ರಯತ್ನ ಮಾಡಿರುವುದು ಇದೆ. ಈ ವಿಚಾರದ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಮಾತನಾಡಿದ್ದಾರೆ. ರಾಮನಗರದಲ್ಲಿ ನಡೆದ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದ ವೇದಿಕೆಯಲ್ಲಿ ನಡೆದ ಘಟನೆಯನ್ನು ಪ್ರಸ್ತಾಪಿಸಿದ್ದಾರೆ.

ಎರಡು ತಿಂಗಳ ಹಿಂದೆ ಸಿಎಂ ವೇದಿಕೆಯಲ್ಲಿ ಮಾತನಾಡುತ್ತಿದ್ದಂತೆ ಡಿ ಬಾಸ್ ಡಿ ಬಾಸ್ ಕೆಲವರು ನಿರಂತರವಾಗಿ ಕೂಗಿದ್ದರು. ಸಿಎಂಗೆ ಮಾತನಾಡಲು ಬಿಡಲಿಲ್ಲ. ಜೈಕಾರ ನಿಲ್ಲದ ಕಾರಣ "ನಮಸ್ಕಾರ, ಆಯ್ತು ನಿಮ್ಮ ಭಾವನೆ ಅರ್ಥವಾಗಿದೆ, ಡಿ ಬಾಸ್ ಬಗ್ಗೆ ಮಾತನಾಡುತ್ತಿದ್ದೀರಿ, ಇಂತಹ ವಿಷಯ ಸಾರ್ವಜನಿಕವಾಗಿ ಮಾತನಾಡುವುದಕ್ಕೆ ಆಗುವುದಿಲ್ಲ. ತಾಳ್ಮೆಯಿಂದ ಇರಿ" ಎಂದು ಹೇಳಿದ್ದರು.

ಈ ಬಗ್ಗೆ ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ್ ನಾನು ಎವಿಡೆನ್ಸ್ ಇಟ್ಕೊಂಡು ಮಾತನಾಡ್ತಿದ್ದೀನಿ. ಅವತ್ತು ಹೀಗೆ ಕೂಗಿದವರ ಬಗ್ಗೆ ಸಿಎಂ ನೋಡಿ ವಿಚಾರಣೆ ನಡೆಸಿದ್ದಾರೆ. ಅದ್ರಲ್ಲಿ ಕೆಲವರನ್ನು ಹುಡುಕಿ ನೋಡಿದಾಗ "ಸ್ವಾಮಿ ಹಿಂಗೆ ಕೂಗಿದ್ರೆ ಸಂಬಳ ಕೊಡ್ತಾರೆ.. ಸಂಬಳಕ್ಕೆ ಕೂಗೋದು ಸ್ವಾಮಿ, ಸಂಬಳದ ಬಹುಪರಾಕ್, ಡಿಸ್ಟರ್ಬ್ ಮಾಡ್ತಿರೋದೇ ನಾವು ಅಂತ ಒಪ್ಪಿಕೊಂಡಿದ್ದಾರಂತೆ" ಎಂದು ತಿಳಿಸಿದ್ದಾರೆ.

ಇನ್ನು ಚಕ್ರವರ್ತಿ ಚಂದ್ರಚೂಡ್ ಫೇಸ್‌ಬುಕ್ ಲೈವ್ ಬಗ್ಗೆ ದರ್ಶನ್ ಅಭಿಮಾನಿಗಳು ಕೆಂಡವಾಗಿದ್ದಾರೆ. ನಮ್ ಬಾಸ್ ಫ್ಯಾಮಿಲಿ ವಿಷಯ ಇವ್ರು ಯಾಕೆ ಮಾತನಾಡ್ತಾರೆ. ಸುದೀಪ್ ಅವರೇ ನಿಮ್ಮ ಆಪ್ತನಿಗೆ ಸುಮ್ಮನಿರಲು ಹೇಳಿ. ಇದೆಲ್ಲಾ ಬೇಡ ಎಂದು ಸುದೀಪ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡುತ್ತಿದ್ದಾರೆ.