ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಸದ್ದು ಗದ್ದಲ ಹೇಗಿತ್ತು ಎನ್ನುವುದು ಗೊತ್ತೇಯಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿ ವಿವಾದ ಕೂಡ ಎದ್ದಿತ್ತು. ಇದೀಗ 'ಟಾಕ್ಸಿಕ್' ಸೋಲಿನ ಬಗ್ಗೆ ಚಿತ್ರರಂಗದ ಮಂದಿ ಒಬ್ಬೊಬ್ಬರಾಗಿ ಮಾತನಾಡುತ್ತಿದ್ದಾರೆ. ಹಿರಿಯ ನಟ ರಂಗಾಯಣ ರಘು ಬಳಿಕ ನಿರ್ದೇಶಕ ತರುಣ್ ಸುಧೀರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಪ್ರೇಕ್ಷಕರು ಚೆನ್ನಾಗಿಲ್ಲ ಎಂದಮೇಲೆ ಮುಗೀತು.. ನಮ್ಮ ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕು, ಅದು ಬಿಟ್ಟು ಪ್ರೇಕ್ಷಕರನ್ನು ದೂರುವುದು ಸರಿಯಲ್ಲ ಎಂದು ತರುಣ್ ಸುಧೀರ್ ಹೇಳಿದ್ದಾರೆ. ಪ್ರೇಕ್ಷಕರ ತೀರ್ಪು ಅಂತಿಮ.. ಪ್ರೇಕ್ಷಕರು ಯಾವತ್ತು ತಪ್ಪು ಮಾಡಲ್ಲ ಎಂದಿದ್ದಾರೆ. ಆದರೆ ಕೆಲವರು ಇದಕ್ಕೆ ಚಕಾರ ಎತ್ತಿದ್ದಾರೆ. ಪ್ರೇಕ್ಷಕರು ಸಾಕಷ್ಟು ಒಳ್ಳೆ ಸಿನಿಮಾಗಳನ್ನು ಸೋಲಿಸಿದ್ದಾರೆ. ಪ್ರೇಕ್ಷಕರದ್ದು ಕೆಲವೊಮ್ಮೆ ತಪ್ಪಿದೆ ಎಂದು ವಾದಿಸುತ್ತಿದ್ದಾರೆ.
ತರುಣ್ ಸುಧೀರ್ ಹೇಳಿಕೆ ಬಗ್ಗೆ ಕೆಲವರು ವೀಡಿಯೋ ಮಾಡಿ ಕಾಮೆಂಟ್ ಮಾಡಿದ್ದಾರೆ. ಒಳ್ಳೆ ಸಿನಿಮಾಗಳನ್ನು ಪ್ರೇಕ್ಷಕರು ಗೆಲ್ಲಿಸುವಂತೆ ಇದ್ದಿದ್ರೆ 'ಉಳಿದವರು ಕಂಡಂತೆ', 'ಅವನೇ ಶ್ರೀಮನ್ನಾರಾಯಣ', 'ಶಾಂತಿ-ಕ್ರಾಂತಿ', 'ಉಗ್ರಂ', 'ಸ್ವಸ್ತಿಕ್' ರೀತಿಯ ಸಿನಿಮಾಗಳನ್ನು ಯಾಕೆ ಗೆಲ್ಲಿಸಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ಜೋರಾಗಿದೆ.
ಆಗಸ್ಟ್ 26ರಂದು 'ಟಾಕ್ಸಿಕ್' ಸಿನಿಮಾ ತೆರೆಗೆ ಬಂದಿತ್ತು. ಅಂದಾಜು 600 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಯಶ್ ಸಿನಿಮಾ ನಿರ್ಮಿಸಿ ನಟಿಸಿದ್ದರು. ಪ್ಯಾನ್ ಇಂಡಿಯಾ ಅಲ್ಲ ಗ್ಲೋಬಲ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಆದರೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಕೆಲವರಿಗೆ ಅದ್ಭುತ ಸಿನಿಮಾ ಎನಿಸಿ ನಾಲ್ಕೈದು ಬಾರಿ ನೋಡಿದ್ದರು. ಮತ್ತೆ ಕೆಲವರು ಅರ್ಧ ಚಿತ್ರಕ್ಕೆ ಎದ್ದು ಚಿತ್ರಮಂದಿರಗಳಿಂದ ಹೊರ ಬಂದಿದ್ದರು.
As fans, we respect audience opinions, but the audience can be wrong too! #UlidavaruKandanthe, #AvaneSrimannarayana & #Ugram are proof that great cinema doesn't always get the recognition it deserves.
— ಹರ್ಷವರ್ಧನ್ ᵀᵒˣᶦᶜ🃏 (@Haxsha_Rsy) October 10, 2026
Criticism is fair, but writing off a film’s isn’t! #YashBoss #ToxicTheMovie https://t.co/sLSkT84Kic pic.twitter.com/wBpsuPl5Li