ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಅಮೆರಿಕಾದಲ್ಲಿ ಪ್ರೀಮಿಯರ್ ಶೋ ನಡೆದಿದೆ. ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಖ್ಯಾತ ಸಿನಿಮಾ ವಿಮರ್ಶಕ, ಬಾಲಿವುಡ್ ಬಾಕ್ಸಾಫೀಸ್ ಪಂಡಿತ ತರಣ್ ಆದರ್ಶ್ ತಮ್ಮ ರಿವ್ಯೂ ಬರೆದಿದ್ದಾರೆ. 5ಕ್ಕೆ 5 ಅಂಕ ಕೊಟ್ಟಿದ್ದಾರೆ.
ಅದ್ಭುತ ಸಿನಿಮಾ
ತರಣ್ ಆದರ್ಶ್ 'ರಾಮಾಯಣ' ಸಿನಿಮಾ ನೋಡಿ ಅದ್ಭುತ ಸಿನಿಮಾ ಎಂದು ಉದ್ಘಾರ ತೆಗೆದಿದ್ದಾರೆ. ಜೈ ಶ್ರೀರಾಮ್... ಭಾರತೀಯ ತೆರೆಯ ಮೇಲೆ ಇಷ್ಟೊಂದು ಭವ್ಯವಾದ ದೃಶ್ಯವನ್ನು ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ... ಬಿಗ್ ಕ್ಯಾನ್ವಾಸ್, ದೃಶ್ಯ ವೈಭವ, ಭಾವನೆಗಳು ಮತ್ತು ಆತ್ಮ ರಾಮಾಯಣದಲ್ಲಿ ಇವೆಲ್ಲವೂ ಇವೆ... ಇದೊಂದು ನಿಜಕ್ಕೂ ಬೆರಗುಗೊಳಿಸುವ ಅನುಭವ.. ಕೋಟ್ಯಂತರ ಜನರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ರಾಮಾಯಣ ಕಾವ್ಯಾಕ್ಕೆ ನ್ಯಾಯ ಒದಗಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಭಾರತೀಯ ಸಂಸ್ಕೃತಿಯ ವೈಭವವನ್ನು ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ಗೆಲುವನ್ನು ಎತ್ತಿಹಿಡಿಯುವಂತಹ ಅದ್ಭುತ ಚಲನಚಿತ್ರವನ್ನು ನಿತೇಶ್ ತಿವಾರಿ ಕಟ್ಟಿಕೊಟ್ಟಿದ್ದಾರೆ. ಬಿಗಿಯಾದ ಚಿತ್ರಕಥೆ ಮತ್ತು ಆಕರ್ಷಕ ನಿರೂಪಣೆಯು ಪ್ರೇಕ್ಷಕರನ್ನು ಕೊನೆಯವರೆಗೂ ಕಟ್ಟಿಹಾಕುತ್ತದೆ..ಅದ್ಭುತ ದೃಶ್ಯವೈಭವ ಮಾತ್ರವಲ್ಲ ಭಾವನಾತ್ಮಕವಾಗಿ ಕೂಡ ಸಿನಿಮಾ ಕನೆಕ್ಟ್ ಆಗುತ್ತೆ. ಬ್ರಹ್ಮ ಮತ್ತು ರಾವಣನ ನಡುವಿನ ಸನ್ನಿವೇಶ, ರಾವಣನು ಲಂಕೆಯ ಮೇಲೆ ಅಧಿಪತ್ಯ ಸಾಧಿಸುವುದು, ಶ್ರೀರಾಮ ಮತ್ತು ರಾಕ್ಷಸರ ನಡುವೆ ಅರಣ್ಯದಲ್ಲಿ ನಡೆಯುವ ಹೋರಾಟ. ಸೀತಾ ಸ್ವಯಂವರ, ರಾಮ ವನವಾಸಕ್ಕೆ ಹೊರಡುವ ಸನ್ನಿವೇಶ, ರಾವಣ ಹಾಗೂ ವಿದ್ಯುತ್ಜಿಹ್ವನ ನಡುವಿನ ಸಾಹಸ ಸನ್ನಿವೇಶ, ಶೂರ್ಪಣಖಾ ಪ್ರಸಂಗ, ಕೊನೆಗೆ ರಾವಣ ಹಾಗೂ ಜಟಾಯು ಯುದ್ಧ ಹೀಗೆ ಸಿನಿಮಾ ಸಾಗುತ್ತದೆ.
ರೆಹಮಾನ್ ಸಂಗೀತದ ಹಾಡುಗಳು ಕಥೆಯೊಂದಿಗೆ ಸುಂದರವಾಗಿ ಬೆರೆತುಹೋಗಿದ್ದು, ಭಾವನಾತ್ಮಕವಾಗಿ ಸಿನಿಮಾ ನಿಮಗೆ ಅದ್ಭುತ ಅನುಭವ ನೀಡುತ್ತದೆ ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ತರಣ್ ಹೀಗೆ 5ಕ್ಕೆ 5 ಅಂಕ ಕೊಟ್ಟಿರುವುದು ನೋಡಿ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಯಾವೆಲ್ಲಾ ಸಿನಿಮಾಗಳನ್ನು ಹೀಗೆ ಅವರು ಕೊಂಡಾಡಿದ್ದರು ಎಂದು ಹುಡುಕಾಡುತ್ತಿದ್ದಾರೆ.
'ಶೋಲೆ', 'ಮೊಘಲ್ ಎ ಅಜಮ್', 'ಅವೆಂಜರ್ ಎಂಡ್ ಗೇಮ್', 'ರೋಬೊ 2.0', 'ಅವತಾರ್ ವೇ ಆಫ್ ವಾಟರ್', 'ಸ್ಪೈಡರ್ ಮ್ಯಾನ್ ನೋ ವೇ ಟು ಹೋಮ್' ಚಿತ್ರಗಳಿಗೆ ತರಣ್ ಆದರ್ಶ್ ಹೀಗೆ 5ಕ್ಕೆ 5 ಅಂಕ ಕೊಟ್ಟು ರಿವ್ಯೂ ಮಾಡಿದ್ದರು.
#OneWordReview...#Ramayana: SPECTACULAR.
— taran adarsh (@taran_adarsh) October 31, 2026
Rating: ⭐⭐⭐⭐⭐#JaiShriRam... You haven't witnessed anything as MAGNIFICENT on the #Indian screen before... Scale. Visuals. Emotions. And SOUL – #Ramayana has it all... A truly STUNNING cinematic experience. #RamayanaReview
Does… pic.twitter.com/b9WVJEfrgZ