ಎರಡನೇ ವಾರ 'ರಾಮಾಯಣ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ಹಲವು ದಾಖಲೆ ಹಿಂದಿಕ್ಕಿ ಸಿನಿಮಾ ಮುನ್ನುಗ್ಗುತ್ತಿದೆ. ಶೀಘ್ರದಲ್ಲೇ ಯಶ್ ನಟನೆಯ 'ಕೆಜಿಎಫ್- 2' ಸಿನಿಮಾ ದಾಖಲೆ ಕೂಡ ಧೂಳಿಪಟ ಆಗಲಿದೆ.

ಈಗಾಗಲೇ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿದೆ. ಅತಿಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ 'ರಾಮಾಯಣ' ಸಿನಿಮಾ 11ನೇ ಸ್ಥಾನಕ್ಕೇರಿದೆ. ಇನ್ನು ಮೊದಲ 8 ದಿನಕ್ಕೆ 1060 ಕೋಟಿ ರೂ. ಕೊಳ್ಳೆ ಹೊಡೆದಿರುವುದಾಗಿ ಚರ್ಚೆ ನಡೀತಿದೆ.

ಚಿತ್ರತಂಡದಿಂದ ಮಾಹಿತಿ

1000 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಪೋಸ್ಟರ್ ರಿಲೀಸ್ ಆಗಿದೆ. "ಭಾರತದಿಂದ ಜಗತ್ತಿನೆಡೆಗೆ, ಈ ಪಯಣ ಮುಂದುವರಿಯುತ್ತದೆ. ನೀವು ನೀಡಿದ ಅಪಾರ ಪ್ರೀತಿಗೆ ಧನ್ಯವಾದಗಳು. ಇದು ರಾಮನ ಯುಗದ ಆರಂಭ" ಎಂದು ಚಿತ್ರತಂಡ ಪೋಸ್ಟ್ ಮಾಡಿದೆ.

ಕರ್ನಾಟಕದಲ್ಲಿ 100 ಕೋಟಿ ರೂ.

ವಿಶ್ವದಾದ್ಯಂತ ಚಿತ್ರ 1000 ಕೋಟಿ ರೂ. ಗಳಿಸುತ್ತಿದ್ದಂತೆ ಕರ್ನಾಟದಲ್ಲಿ ಸಿನಿಮಾ 100 ಕೋಟಿ ರೂ. ಗಡಿ ದಾಟಿ ಮುನ್ನುಗ್ಗುತ್ತಿದೆ. ಕನ್ನಡ ವರ್ಷನ್ ಗಳಿಕೆ ಮಾತ್ರ 50 ಕೋಟಿ ರೂ. ಕ್ಲಬ್ ತಲುಪಿದೆ. ಫ್ಯಾಮಿಲಿ ಸಮೇತ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ದೀಪಾವಳಿ ರಜಾ ದಿನಗಳು ಮಾತ್ರವಲ್ಲ ವಾರದ ದಿನಗಳಲ್ಲಿ ಕೂಡ ಸಿನಿಮಾ ದರ್ಬಾರ್ ಮುಂದುವರೆದಿದೆ.

11ನೇ ಸ್ಥಾನ

ಅತಿಹೆಚ್ಚು ಕಲೆಕ್ಷನ್ ಮಾಡಿರುವ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ 'ಅನಿಮಲ್' ಚಿತ್ರವನ್ನು ಹಿಂದಿಕ್ಕಿ 'ರಾಮಾಯಣ' ಮೇಲೇರಿದೆ. ವಿಕಿಪಿಡಿಯ ವರದಿ ಪ್ರಕಾರ 917.82 ಕೋಟಿ ರೂ. ಗಳಿಕೆ ಕಂಡಿದ್ದ 'ಅನಿಮಲ್' ಚಿತ್ರದ ಈಗ 12ನೇ ಸ್ಥಾನದಲ್ಲಿದೆ. 1,968 ಕೋಟಿ ರೂ. ಕೊಳ್ಳೆ ಹೊಡೆದಿದ್ದ 'ದಂಗಲ್' ಸಿನಿಮಾ ಮೊದಲ ಸ್ಥಾನದಲ್ಲಿದೆ. ಇವತ್ತು ಪಟ್ಟಿಯಲ್ಲಿ ಪ್ರಭಾಸ್ ನಟನೆಯ ಕಲ್ಕಿ 2898 AD ಹಾಗೂ ಶಾರುಖ್ ಖಾನ್ ನಟನೆಯ 'ಪಠಾಣ್' ಚಿತ್ರಗಳನ್ನು 'ರಾಮಾಯಣ' ಹಿಂದಿಕ್ಕಲಿದೆ.