'ರಾಮಾಯಣ' ಚಿತ್ರಕ್ಕೆ ಎಲ್ಲೆಡೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಸಣ್ಣಪುಟ್ಟ ತಪ್ಪುಗಳನ್ನು ಹೊರತುಪಡಿಸಿ ಸಿನಿಮಾ ಅದ್ಭುತ ಅನುಭವ ನೀಡುತ್ತದೆ ಎಂದು ಬಹುತೇಕರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು 5ಕ್ಕೆ 5 ಅಂಕ ಕೊಡುತ್ತಿದ್ದಾರೆ. ನಿನ್ನೆ(ನೆಂಬರ್ 4) ರಾತ್ರಿಯಿಂದಲೇ ಭಾರತದಲ್ಲಿ ಕೆಲವೆಡೆ ಪ್ರೀಮಿಯರ್ ಶೋಗಳು ಶುರುವಾಯಿತು. ಬೆಳಗ್ಗೆ 6ಗಂಟೆಯಿಂದ ಸಿನಿಮಾ ತೆರೆಗಪ್ಪಳಿಸಿದೆ.
ಈಗಾಗಲೇ ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಚಿತ್ರತಂಡದ ಶ್ರಮವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ರಾವಣನಾಗಿ ಯಶ್ ಆರ್ಭಟಕ್ಕೆ ಕೊಂಚ ಹೆಚ್ಚು ಅಂಕಗಳು ಸಿಕ್ಕಿವೆ. ಮೇಕಿಂಗ್ ಹಾಗೂ ವಿಷ್ಯುವಲ್ಸ್ ಬಗ್ಗೆ ಒಳ್ಳೆ ಮಾತುಗಳು ಕೇಳಿ ಬರ್ತಿದೆ. ವಿಮರ್ಶಕರು ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. 'ರಾಮಾಯಣ' ಟ್ವಿಟ್ಟರ್ ರಿವ್ಯೂ ಮುಂದೆ ಓದಿ.
ಸಿನಿಮಾ ಅಲ್ಲ, ಅನುಭವ
'ರಾಮಾಯಣ' ಕೇವಲ ಒಂದು ಸಿನಿಮಾ ಅಲ್ಲ, ಇದೊಂದು ಅನುಭವ, ಇದನ್ನು ಸಾಧ್ಯವಾದಷ್ಟು ದೊಡ್ಡ ಪರದೆಯ ಮೇಲೆ ವೀಕ್ಷಿಸಲೇಬೇಕು. 5ಕ್ಕೆ 5 ಅಂಕ. ಅತ್ಯಂತ ಮನಮೋಹಕ ದೃಶ್ಯಗಳು, ಅದ್ಭುತವಾದ ಪ್ರಪಂಚ ನಿರ್ಮಾಣ, ಕಣ್ಮನ ಸೆಳೆಯುವ ವಿಎಫ್‌ಎಕ್ಸ್ (VFX), ಬೆರಗುಗೊಳಿಸುವ ಛಾಯಾಗ್ರಹಣ ಮತ್ತು ಕಲ್ಪನೆಗೆ ನಿಲುಕದಷ್ಟು ಬೃಹತ್ ಪ್ರಮಾಣದ ನಿರೂಪಣೆ ಇಲ್ಲಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಆವರೇಜ್ ಸಿನಿಮಾ
ರಾವಣನಾಗಿ ಯಶ್ ಎಲ್ಲರ ಗಮನ ಸೆಳೆಯುತ್ತಾರೆ. ಅವರ ಸನ್ನಿವೇಶಗಳು ಅದ್ಭುತ. ಅತ್ಯುತ್ತಮ ಸಿಜಿ, ದೃಶ್ಯಗಳು. ಆ ಕ್ಲೈಮ್ಯಾಕ್ಸ್ ಜಟಾಯು ಸನ್ನಿವೇಶ ವಾವ್. ರಣಬೀರ್-ಸೀತಾ ದೃಶ್ಯಗಳಲ್ಲಿ ಎಮೋಷನ್ ಮಿಸ್ ಆಗಿದೆ. ಲಕ್ಷ್ಮಣ ಪಾತ್ರ ಚೆನ್ನಾಗಿದೆ. ಸಂಗೀತ ನಿರಾಸೆ ಮೂಡಿಸುತ್ತದೆ. ಪ್ರಸಿದ್ಧ ಕಥೆ, ರೋಮಾಂಚನಕಾರಿಯಲ್ಲದ ದೀರ್ಘ ನಾಟಕವು ಹೆಚ್ಚಿನ ಭಾಗಗಳಲ್ಲಿ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಭವ್ಯ ನಿರ್ಮಾಣ ಮತ್ತು ಆತ್ಮವಿಲ್ಲದ ನಿರೂಪಣೆ. ಒಟ್ಟಾರೆ ಆವರೇಜ್ ಸಿನಿಮಾ ಎಂದು ಕಿಸ್ಟ್ರೋಫರ್ ಕನಕರಾಜ್ ಎಂಬುವವರು ಬರೆದುಕೊಂಡಿದ್ದಾರೆ.
ಯಶ್ ನಟನೆ ಸೂಪರ್
ರಾಮಾಯಣ 4.5/5 - ನೋಡಲೇಬೇಕಾದ ಅದ್ಭುತ ಚಿತ್ರ.. ಅತ್ಯುತ್ತಮ ತಾರಾಗಣ, ಭಾವನಾತ್ಮಕವಾಗಿ ಮೈಜುಮ್ಮೆನಿಸುವ ಕ್ಷಣಗಳು, ಕಣ್ಮನ ಸೆಳೆಯುವ ದೃಶ್ಯಗಳು, ಪ್ರಭಾವಶಾಲಿ ಸಂಭಾಷಣೆಗಳು, ಅದ್ಭುತ ಸಾಹಸ ದೃಶ್ಯಗಳು ಮತ್ತು ವಿಎಫ್‌ಎಕ್ಸ್ (VFX), ಅತ್ಯುತ್ತಮ 3D, ತಮಿಳು ಡಬ್ಬಿಂಗ್ ಚಿಂದಿ.. ಯಶ್ ಮಂತ್ರಮುಗ್ಧಗೊಳಿಸುವ, ರೋಮಾಂಚಕ ಅಭಿನಯ. ರಣ್‌ಬೀರ್ ಕಪೂರ್ ರಾಜಗಾಂಭೀರ್ಯ, ಆಕರ್ಷಕ ಅಭಿನಯ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಂತ್ರಿಕವಾಗಿ ಅದ್ಭುತ ಚಿತ್ರ
ಫಸ್ಟ್ ಹಾಫ್ ಚೆನ್ನಾಗಿದೆ. ಸೆಕೆಂಡ್ ಹಾಫ್ ಚಿತ್ರಕಥೆ ಎಳೆದಾಡಿದಂತೆ ಭಾಸವಾಗುತ್ತದೆ. ವನವಾಸ ಎಪಿಸೋಡ್ ಚೆನ್ನಾಗಿಲ್ಲ. ಆದರೆ ತಾಂತ್ರಿಕವಾಗಿ ಪರದೆಯ ಮೇಲೆ ತುಂಬಾ ಚೆನ್ನಾಗಿದೆ. ನಿಧಾನ ಚಿತ್ರಕಥೆ ಮತ್ತು ಹಿನ್ನೆಲೆ ಸಂಗೀತ ಮೈನಸ್. ಒಟ್ಟಾರೆಯಾಗಿ ದೃಶ್ಯ ಅನುಭವಕ್ಕಾಗಿ ನೋಡಬಹುದಾದ ಸಿನಿಮಾ. ರೇಟಿಂಗ್ 2.75/5 ಎನ್ನುವುದು ಇನ್ನೊಬ್ಬರ ಟ್ವೀಟ್.
ದೊಡ್ಡ ಪರದೆಯಲ್ಲೇ ನೋಡಬೇಕು
ರಾಮಾಯಣ ಪಾರ್ಟ್— 1 ದೊಡ್ಡ ಪರದೆಯ ಮೇಲೆ ನೋಡಲೇಬೇಕಾದ ಚಿತ್ರ. ಇದರ ದೃಶ್ಯ ವೈಭವ ಮತ್ತು ನಿರ್ಮಾಣ ಶೈಲಿ ಅದ್ಭುತವಾಗಿದೆ. VFX ಮತ್ತು CGI ತಂತ್ರಜ್ಞಾನವು ಅತ್ಯುನ್ನತ ಮಟ್ಟದಲ್ಲಿದ್ದು, ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡವನ್ನು ಸೃಷ್ಟಿಸಿದೆ. ಅಷ್ಟೇ ಅಲ್ಲ, ಇದೊಂದು ಪೌರಾಣಿಕ ಕಥೆಯಾಗಿದ್ದು, ಜಗತ್ತಿನಾದ್ಯಂತದ ಪ್ರೇಕ್ಷಕರಿಗೆ ಇನ್ನೂ ಹೆಚ್ಚು ಪರಿಚಯವಾಗಬೇಕಿದೆ ಎನ್ನುವುದು ಮಗದೊಬ್ಬರ ವಿಶ್ಲೇಷಣೆ.
ಒಮ್ಮೆ ನೋಡಲೇಬೇಕು
ರಾಮಾಯಣ (4/5) - ತಂಡದ ಅದ್ಭುತ ಪ್ರಯತ್ನ. ಚಿತ್ರಮಂದಿರದ ಅನುಭವ ಅತ್ಯುನ್ನತ ಮಟ್ಟದಲ್ಲಿದೆ. ಮೊದಲ 30 ನಿಮಿಷಗಳು ಅಕ್ಷರಶಃ ಬೆಂಕಿ.. ರಾವಣನ ಪಾತ್ರದಲ್ಲಿ ಯಶ್ ಅವರ ಅಭಿನಯ ಅದ್ಭುತ. ಚಿತ್ರದ ಮೇಕಿಂಗ್, ಲಿಪ್-ಸಿಂಕ್ ಮತ್ತು ಗ್ರಾಫಿಕ್ಸ್ ಅತ್ಯುತ್ತಮವಾಗಿವೆ. ಖಂಡಿತವಾಗಿಯೂ ಒಮ್ಮೆ ನೋಡಲೇಬೇಕಾದ ಸಿನಿಮಾ ಎಂದು ಶ್ರೀದೇವಿ ಶ್ರೀಧರ್ ಎಂಬುವವರು ಬರೆದುಕೊಂಡಿದ್ದಾರೆ.
#Ramayana - Yash as Ravana steals the show. His Seq r terrific. Outstanding CG, Visuals; That Climax Jatayu Seq is Wow. Ranbir-Sita Episodes fail to bring emotion. Laxman Gud. Music is biggest letdown. Well Known Story, Unexciting Lengthy Drama tests patience at most parts. Grand…
— Christopher Kanagaraj (@Chrissuccess) November 5, 2026
#Ramayana (Tamil) 4/5 What an effort from the team👍 Theatrical experience at its peak .. First 30 mints is 🔥🔥🔥 with an awesome @TheNameIsYash as Ravana .. The making & lip sync is commendable and the graphics are top class. Def a one time watch 👍 #RanbirKapoor… pic.twitter.com/3C2S7K9Oqd
— sridevi sreedhar (@sridevisreedhar) November 4, 2026
#Ramayana good first half👍 followed by dragged second half screenplay slow vanavas episodes not landed properly👎action blocks dragged👎but technically on screen very good👍 slow screenplay and bgm are minus no highs👎 overall a decent watch for visual experience 2.75/5
— తేజ (@teja1409) November 5, 2026