ಭಾಷಾ ವಿಚಾರವಾಗಿ ಸೆಲೆಬ್ರೆಟಿಗಳು ನೀಡುವ ಹೇಳಿಕೆ ಕೆಲವೊಮ್ಮೆ ಭಾರೀ ಚರ್ಚೆ ಹುಟ್ಟು ಹಾಕುತ್ತವೆ. "ತಮಿಳಿನಿಂದ ಕನ್ನಡ ಹುಟ್ಟಿದ್ದು" ಎಂದು ಕಮಲ್ ಹಾಸನ್ ಹೇಳಿದ್ದ ಭಾರೀ ವಿವಾದ ಸೃಷ್ಟಿಸಿದ್ದು ಗೊತ್ತೇಯಿದೆ. ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಿ ಶಿವಣ್ಣ ಬಳಿಕ ತಪ್ಪು ಸರಿಪಡಿಸಿಕೊಂಡಿದ್ದು ಗೊತ್ತೇಯಿದೆ. ಬೆಂಗಳೂರಿನಲ್ಲಿ ತೆಲುಗರು ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ ಎಂದು ತೆಲುಗು ನಿರೂಪಕಿ ಸುಮಾ ಹೇಳಿರುವುದು ಈಗ ವೈರಲ್ ಆಗ್ತಿದೆ.
ತೆಲುಗಿನ 'ಅನಕಪಲ್ಲಿ' ಎಂಬ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಬೆಂಗಳೂರು ಮೂಲದ ನಟಿ ಸಂಧ್ಯಾ ವಸಿಷ್ಠ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಸುಮಾ ನಿರೂಪಣೆಯ ಸಂದರ್ಶನವೊಂದರಲ್ಲಿ ಆಕೆ ಭಾಗಿ ಆಗಿದ್ದರು. ತಮ್ಮ ಹಿನ್ನೆಲೆ ಬಗ್ಗೆ ಹೇಳುವಾಗ ಸಂಧ್ಯಾ ನಮ್ಮ ಮೂಲ ಆಂಧ್ರ. ಈಗ ಬೆಂಗಳೂರಿನಲ್ಲಿ ನೆಲೆಸಿದ್ದೇವೆ ಎಂದಿದ್ದಾರೆ. ಕೂಡಲೇ ನಿರೂಪಕಿ ಸುಮಾ "ಬೆಂಗಳೂರಿನಲ್ಲಿ ತೆಲುಗು ಜನ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಚೆನ್ನೈ, ಕೇರಳಕ್ಕಿಂತ ಬೆಂಗಳೂರಿನಲ್ಲಿ ನನ್ನನ್ನು ಹೆಚ್ಚು ಗುರ್ತಿಸ್ತಾರೆ.. ಹೆಚ್ಚು ಶೋಗಳನ್ನು ನೋಡ್ತಾರೆ ಅನ್ಸತ್ತೆ" ಎಂದಿದ್ದಾರೆ.
ಸಂಧ್ಯಾ ವಸಿಷ್ಠ ಮಾತನಾಡಿ "ಹೌದು.. ಬೆಂಗಳೂರಿನಲ್ಲಿ ತೆಲುಗು ಮಾತನಾಡುವವರ ಸಂಖ್ಯೆ ಜಾಸ್ತಿಯಿದೆ.. ತೆಲುಗು ಸಿನಿಮಾಗಳನ್ನು ಅಲ್ಲಿನ ಜನ ದೊಡ್ಡದಾಗಿ ಸ್ವೀಕರಿಸುತ್ತಾರೆ" ಎಂದಿರುವುದು ವೈರಲ್ ಆಗ್ತಿದೆ. ಈ ಬಗ್ಗೆ ಪರ-ವಿರೋಧ ಚರ್ಚೆ ಶುರುವಾಗಿದೆ. ನೀವು ಹೇಳುತ್ತಿರುವ ಮಟ್ಟದಲ್ಲಿ ತೆಲುಗು ಜನ ಬೆಂಗಳೂರಿನಲ್ಲಿ ಇಲ್ಲ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.
'ಟಾಕ್ಸಿಕ್' ಸಿನಿಮಾ ಸೋಲಿಗೆ ತೆಲುಗು ಪಿಆರ್ ಕಾರಣ ಎಂದು ಕನ್ನಡಿಗರು ಆರೋಪಿಸಿ ತೆಲುಗು ಸಿನಿಮಾಗಳ ಬಗ್ಗೆಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆ ನಿರೂಪಕಿ ಸುಮಾ ಹಾಗೂ ನಟಿ ಸಂಧ್ಯಾ ವಸಿಷ್ಠ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಕಿಚ್ಚು ಹಚ್ಚಿದೆ.
Exactly what this girl said is true, BENGALURU is completely TELUGU dominated, even Kannadigas watch shows like Suma Adda , Suma is more popular than Rukmini Vasanth right now, Many learn telugu watching Suma garu shows and pre release events🔥🔥🔥 pic.twitter.com/VLauhOITI4
— నేనొచ్చేశా (@TeluguMaverick) October 13, 2026