'ದಿ ವಿಲನ್' ಬಳಿಕ ಸುದೀಪ್ ಹಾಗೂ ಪ್ರೇಮ್ ಕಾಂಬಿನೇಷನ್ ಸಿನಿಮಾ ಘೋಷಣೆ ಆಗಿದೆ. ಇನ್ನೆರಡು ಚಿತ್ರಗಳಲ್ಲಿ ಟೀಸರ್ ಸಮೇತ ಸಿನಿಮಾ ಟೈಟಲ್ ಅನಾವರಣ ಆಗಲಿದೆ. ಆ ಬಗ್ಗೆ ಕುತೂಹಲ ಮೂಡುವಂತೆ ಚಿತ್ರತಂಡ ಅಪ್ಡೇಟ್ ಕೊಡ್ತಾ ಬರ್ತಿದೆ.
ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದಲ್ಲಿ ಕೂಡ ಸುದೀಪ್ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಕ್ಲೈಮ್ಯಾಕ್ಸ್ನ ಸಣ್ಣ ಝಲಕ್ನಲ್ಲಿ ದರ್ಶನ ಕೊಟ್ಟಿದ್ದರು. 'ಕೆಡಿ' ಚಿತ್ರದ ಸೀಕ್ವೆಲ್ನಲ್ಲಿ ಕಿಚ್ಚ ಅಬ್ಬರಿಸೋದು ಪಕ್ಕಾ ಆಗಿದೆ. ಅದಕ್ಕೂ ಪ್ರೇಮ್ ಹಾಗೂ ಸುದೀಪ್ ಕ್ರೇಜಿ ಕಾಂಬಿನೇಷನ್ ಸಿನಿಮಾ ಮೂಡಿ ಬರಲಿದೆ. ಸಿನಿಮಾ ಟೈಟಲ್ ಏನಪ್ಪಾ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಕೆಲವರು ಈಗಾಗಲೇ ಟೈಟಲ್ ಗೆಸ್ ಮಾಡುತ್ತಿದ್ದಾರೆ.
ಪಾಸ್ಪೋರ್ಟ್ ಮೇಲೆ ಸನ್ಗ್ಲಾಸ್ ಇಟ್ಟು ಥೀಮ್ ಪೋಸ್ಟರ್ವೊಂದನ್ನು ಪ್ರೇಮ್ ಬಿಟ್ಟಿದ್ದರು. ಇದೀಗ ಟೈಟಲ್ ಟೀಸರ್ ಸೆನ್ಸಾರ್ ಆಗಿರುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. 3.14 ಸೆಕೆಂಡ್ ಟೀಸರ್ ಇದಾಗಿರಲಿದೆ. 'ದಾದಾ ಆನ್ ಹಾಲಿಡೇಸ್' ಎನ್ನುವುದು ಸಿನಿಮಾ ಟೈಟಲ್ ಎಂದು ಸಾಕಷ್ಟು ಜನ ಗೆಸ್ ಮಾಡುತ್ತಿದ್ದಾರೆ. ಇದೇ ನಿಜವಾದ ಟೈಟಲ್ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ಅಂಬರೀಷ್ ನಟನೆಯ ಸೂಪರ್ ಹಿಟ್ 'ಒಲವಿನ ಉಡುಗೊರೆ' ಟೈಟಲ್ನಲ್ಲಿ ಸಿನಿಮಾ ಮಾಡ್ತಿದ್ದಾರಾ ಎಂದು ಕೆಲವರು ಊಹಿಸುತ್ತಿದ್ದಾರೆ.'ವೀರ ಮದಕರಿ' ಚಿತ್ರದಲ್ಲಿ 'ಮುತ್ತತ್ತಿ ಸತ್ಯರಾಜು' ಎಂಬ ಪಾತ್ರದಲ್ಲಿ ನಟಿಸಿದ್ದರು. ಅದೇ ಪಾತ್ರದ ಹೆಸರನ್ನು ಮುಂದಿನ ಚಿತ್ರಕ್ಕೆ ಪ್ರೇಮ್ ಟೈಟಲ್ ಮಾಡಿ ಇಟ್ಟಿರಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ 'ದಾದಾ ಆನ್ ಹಾಲಿಡೇಸ್' ಎನ್ನುವುದಕ್ಕೆ ಬಹುತೇಕರ ವೋಟ್ ಹಾಕುತ್ತಿದ್ದಾರೆ.
ಟೈಟಲ್ಗೆ ತಕ್ಕಂತೆ ವಿದೇಶದಲ್ಲಿ ಸಿನಿಮಾ ಚಿತ್ರೀಕರಣ ಹೆಚ್ಚು ನಡೆಯುವ ಸಾಧ್ಯತೆಯಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಮ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ರಕ್ಷಿತಾ ಪ್ರೇಮ್ ಕೂಡ ಸಿನಿಮಾ ನಿರ್ಮಾಣಕ್ಕೆ ಕೈಜೋಡಿಸಲಿದ್ದಾರೆ. ಆನಂದ್ ಆಡಿಯೋ ಸಂಸ್ಥೆ ಆಡಿಯೋ ರೈಟ್ಸ್ ಮಾರಾಟವಾಗಿದೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕೆ ಇರಲಿದೆ.