ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ನಟನೆಯ 'ದಾದಾ ಆನ್ ಹಾಲಿಡೇ' ಸಿನಿಮಾ ಸೆಟ್ಟೇರಿದೆ. ಇತ್ತೀಚೆಗೆ(ನವೆಂಬರ್ 27) ಒರಾಯನ್ ಮಾನ್‌ನಲ್ಲಿ ಚಿತ್ರದ ಟೈಟಲ್ ಟೀಸರ್ ಲಾಂಚ್ ಕಾರ್ಯಕ್ರಮ ನಡೀತು. ಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಕಿಚ್ಚನನ್ನು ನೋಡಲು ಆಗಮಿಸಿದ್ದರು.
ಒರಾಯನ್ ಮಾಲ್ ಥಿಯೇಟರ್ ಆಡಿಟೋರಿಯಂ ಒಳಗೆ ಟೀಸರ್ ಲಾಂಚ್ ಕಾರ್ಯಕ್ರಮ ನಡೀತು. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರಿಂದ ಕೊಂಚ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎಲ್ಲಾ ಅಭಿಮಾನಿಗಳಿಗೂ ಕಾರ್ಯಕ್ರಮ ನೇರವಾಗಿ ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದರು. ಅಂದುಕೊಂಡ ಸಮಯಕ್ಕಿಂತ ತಡವಾಗಿ ಕಾರ್ಯಕ್ರಮ ಶುರುವಾಗಿತ್ತು. ಸಿಎಂ ಆಗಮನ ಹಿನ್ನೆಲೆ ಬಿಗಿಭದ್ರತೆ ಒದಗಿಸಲಾಗಿತ್ತು. ಹಾಗಾಗಿ ಹೊರಗೆ ಕಾಯುತ್ತಿದ್ದ ಅಭಿಮಾನಿಗಳನ್ನು ಸುದೀಪ್ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಕೊನೆಪಕ್ಷ ಅವರತ್ತ ಹೋಗಲು ಅವಕಾಶ ಸಿಕ್ಕಿರಲಿಲ್ಲ. ಇದಕ್ಕೆ ಕ್ಷಮೆ ಕೇಳಿದ್ದಾರೆ.
ಕಾರ್ಯಕ್ರಮದಿಂದ ನೇರವಾಗಿ ಹೊರಗೆ ಬಂದು ಕಾರು ಏರಿ ಹೊರಟುಬಿಟ್ಟರು. ಈ ಬಗ್ಗೆ ಅಭಿಮಾನಿಯೊಬ್ಬರು ಬೇಸರ ವ್ಯಕ್ತಪಡಿಸಿ ಟ್ವಿಟರ್‌ನಲ್ಲಿ ಪತ್ರ ಬರೆದಿದ್ದಾರೆ. ಅದು ಕಿಚ್ಚನ ಗಮನಕ್ಕೆ ಬಂದಿದ್ದು ಸುದೀಪ್ ಸಹ ಅಭಿಮಾನಿಗಳನ್ನು ಭೇಟಿ ಆಗಲು ಸಾಧ್ಯವಾಗದ್ದಕ್ಕೆ ಕ್ಷಮೆ ಕೇಳಿದ್ದಾರೆ. "ನಿಮ್ಮ ಭಾವನೆಗಳನ್ನು ಬರೆದು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು. ನಿಮ್ಮೆಲ್ಲರೊಂದಿಗೆ ಮಾತನಾಡಲು ಅಥವಾ ಬೆರೆಯಲು ಸಾಧ್ಯವಾಗಲಿಲ್ಲವಲ್ಲ ಎಂದು ನನಗೆ ನಿಜವಾಗಿಯೂ ತುಂಬಾ ಬೇಸರವಾಗಿದೆ" ಎಂದಿದ್ದಾರೆ.
ಕಾರ್ಯಕ್ರಮವು ಸಂಜೆ 6:30ರ ಸುಮಾರಿಗೆ ಪ್ರಾರಂಭವಾಗಬೇಕಿತ್ತು. ನಾನು ಸುಮಾರು 7:30 ರ ಹೊತ್ತಿಗೆ ಹೊರಬಂದು, ನಿಮ್ಮೆಲ್ಲರನ್ನು ನೋಡಿ, ಒಂದೆರಡು ಮಾತುಗಳನ್ನಾಡಿ ಅಲ್ಲಿಂದ ತೆರಳಬೇಕೆಂದುಕೊಂಡಿದ್ದೆ. ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಭದ್ರತಾ ನಿಯಮಗಳ ಪ್ರಕಾರ ಎಲ್ಲರನ್ನೂ ಅಲ್ಲಿಂದ ಸ್ಥಳಾಂತರಿಸಲಾಗಿತ್ತು ಎಂದು ತಿಳಿದು ನನಗೆ ಆಶ್ಚರ್ಯವಾಯಿತು. ನಾನು ಥಿಯೇಟರ್ ಒಳಗೆ ಇದ್ದಾಗ ಈ ಬೆಳವಣಿಗೆ ನಡೆದಿದ್ದು ನನಗೆ ತಿಳಿದಿರಲಿಲ್ಲ. ಇದು ನಿಜಕ್ಕೂ ತುಂಬಾ ಬೇಸರ ತಂದ ವಿಷಯ. ನನ್ನ ಪ್ರೀತಿಯ ಅಭಿಮಾನಿಗಳನ್ನು ಭೇಟಿಯಾಗದೆ ನಾನು 'ಓರಿಯನ್' (Orion) ನಿಂದ ಹೊರಹೋಗಲು ಸಾಧ್ಯವೇ ಇಲ್ಲ. ನಿಮ್ಮೆಲ್ಲರ ಜೈಕಾರ, ಪ್ರೀತಿಗಿಂತ ಮಿಗಿಲಾದ ಸಂತೋಷ ಬೇರೊಂದಿಲ್ಲ. ಕ್ಷಮಿಸಿ... ಏಕೆಂದರೆ ಇದು ನನ್ನ ಕೈಮೀರಿದ ವಿಷಯವಾಗಿತ್ತು. ಎಂದು ಸುದೀಪ್ ಪ್ರತಿಕ್ರಿಯಿಸಿದ್ದಾರೆ.
Very sweet of you to have penned ur feelings and I truely and whole heartedly feel bad for not being able to interact with you all.
— Kichcha Sudeepa (@KicchaSudeep) November 28, 2026
The truth: Launch was to happen by 6.30pm.. and i was to walk out by 7.30pm odd.. see you all,, speak few words and leave the venue, and tats… https://t.co/PffwUXnwub