ಪತಿ ಯುವರಾಜ್‌ಕುಮಾರ್ ವಿರುದ್ಧ ಶ್ರೀದೇವಿ ಭೈರಪ್ಪ ಮತ್ತೆ ಗುಡುಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾಲು ಸಾಲು ಪೋಸ್ಟ್ ಮಾಡಿ ಚರ್ಚೆ ಹುಟ್ಟು ಹಾಕಿದ್ದಾರೆ. "ನಿಮ್ಮಣ್ಣ ಡಿವೋರ್ಸ್ ಆಗ್ದೆ ಅವಳ ಜೊತೆ ಇದ್ದಾರಲ್ಲ" ಎಂದು ಕಾಮೆಂಟ್ ಮಾಡಿ ಗಮನ ಸೆಳೆದಿದ್ದರು. ನನ್ನ ಪತಿಯ ಫೋನ್‌ನಲ್ಲಿ ಅವಳ ಫೋಟೊಗಳನ್ನು ನೋಡ್ದೆ. ಅವತ್ತೇ ಆತನ ನಿಜಬಣ್ಣ ಗೊತ್ತಾಯ್ತು ಎಂದು ಬರೆದುಕೊಂಡಿದ್ದರು.

ಈಗಾಗಲೇ ಯುವರಾಜ್‌ಕುಮಾರ್ ಪತ್ನಿಯಿಂದ ಡಿವೋರ್ಸ್ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರೂ ಬೇರೆ ಬೇರೆ ವಾಸಿಸುತ್ತಿದ್ದಾರೆ. ಬೇರೆ ಹುಡುಗಿ ಜೊತೆ ಯುವಗೆ ಸಂಬಂಧ ಇದೆ ಎಂದು ಬಹಿರಂಗವಾಗಿ ಶ್ರೀದೇವಿ ಆರೋಪ ಮಾಡುತ್ತಿದ್ದಾರೆ. ಅರೇ, ಇಷ್ಟೆಲ್ಲಾ ಆದ್ಮೇಲೆ ಇನ್ನು ಡಿವೋರ್ಸ್ ಕೊಡೊಕೆ ಶ್ರೀದೇವಿ ಸಿದ್ಧರಿಲ್ಲ ಎನ್ನುವ ಪ್ರಶ್ನೆ ಕೆಲವರನ್ನು ಕಾಡ್ತಿದೆ. ಅದಕ್ಕೆ ಸ್ವತಃ ಆಕೆ ಉತ್ತರ ಕೊಟ್ಟಿದ್ದಾರೆ.

ಆತ ಇನ್ನೂ ಯಾಕೆ ಬೇಕು ? ಅವನಿಗಾಗಿ ಇನ್ನೂ ಯಾಕೆ ಹೋರಾಡಲು ಬಯಸುತ್ತೀರಾ ? ಸೆಟ್ಲ್‌ಮೆಂಟ್ ಮಾಡ್ಕೊಂಡು ಕೊಡಬಹುದಲ್ವಾ? ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ರಿಪ್ಲೇ ಮಾಡಿರುವ ಶ್ರೀದೇವಿ ಭೈರಪ್ಪ "ನನ್ನ ವಿರುದ್ಧ ಮಧ್ಯಮಗಳಲ್ಲಿ ಅವರು ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವಂತೆ ನಾನು ಕೇಳಿದ್ದೇನೆ, ಅವ್ರು ಅದನ್ನು ಸಾಬೀತುಪಡಿಸುವವರೆಗೆ ಡಿವೋರ್ಸ್ ಕೊಡಲ್ಲ" ಎಂದು ಹೇಳಿದ್ದಾರೆ. ಯುವ ರಾಜ್‌ಕುಮಾರ್ ಪರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿರುವ ವಕೀಲ ಸಿರಿಲ್ ಪ್ರಸಾದ್‌ ಶ್ರೀದೇವಿ ಭೈರಪ್ಪ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹಣಕಾಸು ಅಕ್ರಮ, ಅನೈತಿಕ ಸಂಬಂಧದ ಆರೋಪ ಕೂಡ ಹೊರಿಸಿದ್ದರು. ಆಕೆಗೆ ಬೇರೆ ವ್ಯಕ್ತಿ ಜೊತೆ ಸಂಬಂಧವಿದೆ, ರಾತ್ರಿ ವೇಳೆ ಬಾಯ್‌ಫ್ರೆಂಡ್ ಮನೆಗೆ ಹೋಗುತ್ತಿದ್ರು ಎಂದು ದೂರಿದ್ದರು. ಇದೇ ವಿಚಾರಕ್ಕೆ ಶ್ರೀದೇವಿ ಸ್ಪಷ್ಟನೆ ಕೇಳುತ್ತಿದ್ದಾರೆ.

ಇಂತಹ ಸಮಯದಲ್ಲಿ ಅಪ್ಪು ಸರ್ ಇದ್ದಿದ್ದರೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಿದ್ದರು ಎನ್ನುವ ಮತ್ತೊಬ್ಬರ ಕಾಮೆಂಟ್ ನೋಡಿ.. ಕಂಡಿತ "ಅವ್ರು ನನ್ನ ಬೆಂಬಲಕ್ಕೆ ನಿಲ್ಲುತ್ತಿದ್ರು" ಎಂದು ಶ್ರೀದೇವಿ ರಿಪ್ಲೇ ಮಾಡಿದ್ದಾರೆ.

ಆ ಹುಡುಗಿಯ ಹೆಸರನ್ನು ಬಹಿರಂಗಪಡಿಸಿ.. ಆಕೆಗೂ ನಾಚಿಕೆ ಆಗಲಿ ಎನ್ನುವ ಮತ್ತೊಬ್ಬರ ಕಾಮೆಂಟ್‌ಗೆ "ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ನಮ್ಮ ಕಾನೂನು ಅದನ್ನು ಅನುಮತಿಸುವುದಿಲ್ಲ" ಎಂದು ಶ್ರೀದೇವಿ ಪ್ರತಿಕ್ರಿಯಿಸಿದ್ದಾರೆ.