ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಧರ್ಮನ್' ಸಿನಿಮಾ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಐತಿಹಾಸಿಕ ಸೋಮನಾಥಪುರ ಸುತ್ತಾಮುತ್ತ ಚಿತ್ರದ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗ್ತಿದೆ. ತಲೈವಾ ಜೊತೆಗೆ ತೆಲುಗು ನಟ ರಾಮ್ ಪೋತಿನೇನಿ ಹಾಗೂ ನಟಿ ರಾಶಿ ಖನ್ನಾ ಕೂಡ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಇದೀಗ ಶ್ರೀಲೀಲಾ ಸಹ ತಂಡ ಸೇರಿಕೊಂಡಿದ್ದಾರೆ.
ಅಶ್ವಥ್ ಮಾರಿಮುತ್ತು ನಿರ್ದೇಶನದ 'ಧರ್ಮನ್' ಚಿತ್ರ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಕಮಲ್ ಹಾಸನ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅನಿರುದ್ದ್ ರವಿಚಂದರ್ ಸಂಗೀತ ಇರಲಿದೆ. ಚಿತ್ರದಲ್ಲಿ ಡೆಡ್ಲಿ ಡಾಕ್ಟರ್ ಆಗಿ ರಜನಿಕಾಂತ್ ಬಣ್ಣ ಹಚ್ಚಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ಚಿತ್ರೀಕರಣ ನಡೀತಿದೆ. ಶ್ರೀಲೀಲಾ ಕೂಡ ಚಿತ್ರದಲ್ಲಿ ನಟಿಸ್ತಾರೆ ಎನ್ನುವ ಮಾತುಗಳು ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಈಗ ಅದು ನಿಜವಾಗಿದೆ. ಲಂಗಾ ದಾವಣಿ ತೊಟ್ಟು 'ಧರ್ಮನ್' ಸಿನಿಮಾ ಸೆಟ್‌ನಲ್ಲಿ ಶ್ರೀಲೀಲಾ ಕಾಣಿಸಿಕೊಂಡಿರುವ ವೀಡಿಯೋ ವೈರಲ್ ಆಗ್ತಿದೆ.
ಅರಮನೆ ನಗರಿ ಅಂದ್ರೆ ತಲೈವಾಗೆ ಬಹಳ ಅಚ್ಚುಮೆಚ್ಚು. ದಳಪತಿ, ಲಿಂಗ ಸೇರಿ ರಜನಿಕಾಂತ್ ನಟನೆಯ ಕೆಲ ಸಿನಿಮಾಗಳು ಕರ್ನಾಟಕದಲ್ಲಿ ಚಿತ್ರೀಕರಣವಾಗಿದೆ. ಇನ್ನು ಇತ್ತೀಚೆಗೆ ವಿಷ್ಣುವರ್ಧನ್ ಕುಟುಂಬ ಸದಸ್ಯರು ಕೂಡ ರಜನಿಕಾಂತ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದರು. ತಲೈವಾ ಆಟೋ ಏರಿ ಚಿತ್ರೀಕರಣದ ಜಾಗಕ್ಕೆ ಬಂದಿದ್ದ ವೀಡಿಯೋ ವೈರಲ್ ಆಗಿತ್ತು. ಇಂದು(ಸೆಪ್ಟೆಂಬರ್ 30) ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರಜನಿಕಾಂತ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ಕೆಲ ದಿನ 'ಧರ್ಮನ್' ಚಿತ್ರತಂಡ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದೆ.
Is Actress #Sreeleela in Dharman 😲😲😲♥️♥️😍💥💥🔥🔥#Dharman #Jailer2 pic.twitter.com/1FHLVl6x7W
— Thalaivar 🔥 🔥 (@thalaivar75) September 30, 2026