ಆಧುನಿಕ ಪ್ರಪಂಚದಲ್ಲಿ ರಿಲೇಷನ್‌ಶಿಪ್ ಅರ್ಥವೇ ಬದಲಾಗುತ್ತಿದೆ. ಒಬ್ಬ ಪುರುಷ ಓರ್ವ ಮಹಿಳೆಯನ್ನು ಮಾತ್ರ ಮದುವೆ ಆಗಬೇಕು ಎನ್ನುವುದು ಭಾರತದಲ್ಲಿ ಮಾತ್ರ ಇನ್ನು ಆಚರಣೆಯಲ್ಲಿದೆ. ನಿಧಾನವಾಗಿ ಇಲ್ಲಿ ಕೂಡ ಅದೆಲ್ಲಾ ಬದಲಾಗುತ್ತಿದೆ. ಡಿವೋರ್ಸ್, ಸೆಕೆಂಡ್ ಮ್ಯಾರೇಜ್ ಎನ್ನುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಡಿವೋರ್ಸ್ ಬಳಿಕ ಪತಿ ಮುಂದೆ ನಿಂತು ಪತ್ನಿಗೆ ಮತ್ತೊಂದು ಮದುವೆ ಮಾಡಿಸುವ ಘಟನೆಗಳು ನಡೆದಿದೆ. ಹಾಲಿವುಡ್ ನಟ ಟೋಬಿ ಮ್ಯಾಗೈರ್ ಹೀಗೆ ಮಾಡಿದ್ದಾರೆ.

'ಸ್ಪೈಡರ್‌ಮ್ಯಾನ್' ಸರಣಿ ಸಿನಿಮಾಗಳಲ್ಲಿ ನಟಿಸಿದ್ದ ಟೋಬಿ ಮ್ಯಾಗೈರ್ ತಮ್ಮ ಮಾಜಿ ಪತ್ನಿಗೆ ತಾವೇ ಮುಂದೆ ನಿಂತು ಎರಡನೇ ಮದುವೆ ಮಾಡಿಸಿದ್ದಾರೆ. ಡಿರ್ವೋಸ್ ಬಳಿಕ ಒಬ್ಬರ ಮುಖ ಮತ್ತೊಬ್ಬರು ನೋಡಲ್ಲ ಎನ್ನುವುದು ಕೆಲವರ ತೀರ್ಮಾನ. ಡಿವೋರ್ಸ್ ನಂತ್ರ ಸ್ನೇಹಿತರಂತೆ ಇರೋಣ ಎನ್ನುವವರು ಇದ್ದಾರೆ. ಆದರೆ ಪತ್ನಿ ಜೆನ್ನಿಫರ್ ಮೇಯರ್ ಅವರಿಗೆ ಟೋಬಿ ಮುಂದೆ ನಿಂತು ಖ್ಯಾತ ಉದ್ಯಮಿ ಜೆಫ್ ಒಗುನ್ಲೆಸಿ ಜೊತೆ ಮತ್ತೊಂದು ಮದುವೆ ಮಾಡಿಸಿದ್ದಾರೆ. ಆ ಫೋಟೊಗಳು ವೈರಲ್ ಆಗ್ತಿದೆ.

2007ರಲ್ಲಿ ಟೋಬಿ ಮ್ಯಾಗೈರ್ ಹಾಗೂ ಜೆನ್ನಿಫರ್ ಮೇಯರ್ ಮದುವೆ ನಡೆದಿತ್ತು. ಆದರೆ ಭಿನ್ನಾಭಿಪ್ರಾಯಗಳಿಂದ ಕಳೆದ ಕೆಲ ವರ್ಷಗಳಿಂದ ಇಬ್ಬರೂ ದೂರಾಗಿ ಜೀವನ ನಡೆಸುತ್ತಿದ್ದಾರೆ. ಕೆಲವೇ ವಾರಗಳ ಹಿಂದೆ ಡಿವೋರ್ಸ್ ಪಡೆದಿದ್ದರು. ಹವಾಯಿಯ 'ಫೋರ್ ಸೀಸನ್ಸ್ ರೆಸಾರ್ಟ್ ಲನೈ'ನಲ್ಲಿ ಜೆಫ್ ಒಗುನ್ಲೆಸಿ ಹಾಗೂ ಜೆನ್ನಿಫರ್ ಮದುವೆ ನೆರವೇರಿದೆ. ರೇಚಲ್ ಜೋ, ಕೋರ್ಟ್ನಿ ಕಾಕ್ಸ್, ಲಿಯೊನಾರ್ಡೊ ಡಿಕಾಪ್ರಿಯೊ ಮತ್ತು ಅವರ ಗೆಳತಿ ವಿಟ್ಟೋರಿಯಾ ಸೆರೆಟ್ಟಿ ಸೇರಿ ಹಲವರು ಮದುವೆ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು.

ಅಂದಹಾಗೆ ಟೋಬಿ ಮತ್ತು ಜೆನ್ನಿಫರ್ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಡಿವೋರ್ಸ್ ಬಳಿಕ ಇಬ್ಬರೂ ತಮ್ಮ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇನ್ನು ಈಗಾಗಲೇ ಜೆಫ್ ಒಗುನ್ಲೆಸಿ ಹಾಗೂ ಜೆನ್ನಿಫರ್ ಜೋಡಿಗೂ ಒಂದು ಮಗು ಜನಿಸಿದೆ. ಆ ಬಳಿಕವೇ ಇಬ್ಬರೂ ಮದುವೆ ಆಗಿದ್ದಾರೆ. ಸ್ಪೈಡರ್‌ಮನ್‌ ಸರಣಿ ಮಾತ್ರವಲ್ಲ ದಿ ಐಸ್ ಸ್ಟ್ರೋಮ್, ವಂಡರ್ ಬಾಯ್ಸ್, ದಿ ಬಾಸ್ ಬೇಬಿ, ದಿ ಡಿಟೈಲ್ಸ್ ಸೇರಿ ಹಲವು ಸಿನಿಮಾಗಳಲ್ಲಿ ಟೋಬಿ ಮ್ಯಾಗೈರ್ ನಟಿಸಿದ್ದಾರೆ.