ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಿಗೆ ಪ್ರತಿಷ್ಠಿತ ಸೈಮಾ(SIIMA 2026 ) ಅವಾರ್ಡ್ಸ್ ನೀಡಿ ಗೌರವಿಸಲಾಗಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ 4 ಭಾಷೆಯ ವಿಜೇತರು ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದ್ದಾರೆ. ಈ ಬಾರಿ ಬೆಂಗಳೂರಿನಲ್ಲೇ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ನಡೆದಿದೆ. 'ಕಾಂತಾರ- 1' ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
ತೆಲುಗು ನಟರಾದ ನಾಗಚೈತನ್ಯ, ರಾಣಾ ದಗ್ಗುಬಾಟಿ, ನಟಿಯರಾದ ರುಕ್ಮಿಣಿ ವಸಂತ್, ಪ್ರಣೀತಾ ಸುಭಾಷ್ ಸೇರಿದಂತೆ ಸಾಕಷ್ಟು ನಟ-ನಟಿಯರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ನಗರದ ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ರಂಗುರಂಗಿನ ಕಾರ್ಯಕ್ರಮ ನಡೆದಿದೆ. 2025ರಲ್ಲಿ ಆಯಾ ಭಾಷೆಗಳಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ವಿವಿಧ ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನ್ನಡ ವಿಜೇತರ ಪಟ್ಟಿ
ಅತ್ಯುತ್ತಮ ನಟ(ಕ್ರಿಟಿಕ್ಸ್): ವಿನೋದ್ ಪ್ರಭಾಕರ್
ಅತ್ಯುತ್ತಮ ಗಾಯಕ: ಅನುರಾಗ್ ಕುಲಕರ್ಣಿ
ಅತ್ಯುತ್ತಮ ಗೀತಸಾಹಿತ್ಯ; ಪ್ರಮೋದ್ ಮರವಂತೆ
ಅತ್ಯುತ್ತಮ ನಟಿ(ಕ್ರಿಟಿಕ್ಸ್): ಆಶಿಕಾ ರಂಗನಾಥ್
ಅತ್ಯುತ್ತಮ ನಟ ಡೆಬ್ಯೂ: ದುಷ್ಯಂತ್
ಅತ್ಯುತ್ತಮ ಪೋಷಕ ನಟ:ಜೆಪಿ ತುಮ್ಮಿನಾಡ್
ಅತ್ಯುತ್ತಮ ನಟ ಡೆಬ್ಯೂ(ಕ್ರಿಟಿಕ್ಸ್): ಕಿರೀಟಿ
ಅತ್ಯುತ್ತಮ ನಟಿ ಡೆಬ್ಯೂ: ಪ್ರಿಯಾಂಕ ಆಚಾರ್
ಅತ್ಯುತ್ತಮ ಸಂಗೀತ: ಅಜನೀಶ್ ಲೋಕನಾಥ್
ಅತ್ಯುತ್ತಮ ನಿರ್ಮಾಣ ಡೆಬ್ಯೂ: ನಿವೇದಿತಾ ಶಿವರಾಜ್‌ಕುಮಾರ್
ಅತ್ಯುತ್ತಮ ಗಾಯಕಿ: ಸಾನ್ವಿ ಸುದೀಪ್
ಅತ್ಯುತ್ತಮ ನಿರ್ದೇಶಕ ಡೆಬ್ಯೂ: ಜೆಪಿ ತುಮಿನಾಡ್ (ಸು ಫ್ರಂ ಸೋ)
ಅತ್ಯುತ್ತಮ ನಟಿ: ರುಕ್ಮಿಣಿ ವಸಂತ್(ಕಾಂತಾರ- 1)
ವರ್ಷದ ಎಂಟರ್‌ಟೈನರ್: ಶಿವರಾಜ್‌ಕುಮಾರ್