ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ನಾನಾ ಕಾರಣಕ್ಕೆ ಸುದ್ದಿ ಆಗಿತ್ತು. ಮುಖ್ಯವಾಗಿ ನಾಯಕಿ ಜಾನ್ವಿ ಕಪೂರ್ ಪಾತ್ರ ಪೋಷಣೆ, ಆಕೆಯನ್ನು ತೆರೆಮೇಲೆ ತೋರಿಸಿದ ಪರಿ ವಿವಾದಕ್ಕೀಡಾಗಿತ್ತು. ಈ ಬಗ್ಗೆ ನಿರ್ದೇಶಕರು ಕ್ಷಮೆ ಕೋರಿ ಅದನ್ನು ಎಡಿಟ್ ಕೂಡ ಮಾಡಿದ್ದರು. ಈ ಬಗ್ಗೆ ಜಾನ್ವಿ ಕಪೂರ್ ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು. ಇದೀಗ ಶ್ರುತಿ ಹಾಸನ್ ಮಾತನಾಡಿದ್ದಾರೆ.
'ಪೆದ್ದಿ' ಚಿತ್ರದ ಐಟಂ ಸಾಂಗ್‌ನಲ್ಲಿ ಶ್ರುತಿ ಹಾಸನ್ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದರು. ಸಂದರ್ಶನವೊಂದರಲ್ಲಿ ಆಕೆ ಮಾತನಾಡಿದ್ದಾರೆ. ಜಾನ್ವಿ ಕಪೂರ್ ವಿವಾದದ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದಾರೆ. ಆದರೆ ಐಟಂ ಸಾಂಗ್‌ಗಳಲ್ಲಿ ಕುಣಿಯುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಗಲಾಟ್ಟಾ ಪ್ಲಸ್ ಸಂದರ್ಶನದಲ್ಲಿ ಆಕೆ ಮಾತನಾಡಿದ್ದು "ನಾನು ಜಾನ್ವಿ ಜೊತೆಗೆ ಒಂದು ಹಾಡಿನ ಚಿತ್ರೀಕರಣದಲ್ಲಿ ಕೆಲಸ ಮಾಡಿದ್ದಾಗಿ ತಿಳಿಸಿದರು. ಅಲ್ಲದೆ, ಮತ್ತೊಬ್ಬ ನಟಿಯ ವೈಯಕ್ತಿಕ ಅನುಭವದ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ" ಎಂದಿದ್ದಾರೆ.
ಚಿತ್ರೀಕರಣಗಳ ಸಂದರ್ಭದಲ್ಲಿ ಇಂತಹ ಸನ್ನಿವೇಶಗಳನ್ನು ತಾನು ಹೇಗೆ ನಿಭಾಯಿಸುತ್ತೇನೆ ಎನ್ನುವುದನ್ನು ಶ್ರುತಿ ಹೇಳಿದ್ದಾರೆ. "ನನ್ನ ತಂಡವು ಯಾವಾಗಲೂ ಈ ಬಗ್ಗೆ ಜಾಗ್ರತೆ ವಹಿಸುತ್ತದೆ, ಚಿತ್ರೀಕರಣಗೊಳ್ಳುತ್ತಿರುವ ದೃಶ್ಯಗಳ ಮೇಲೆ ನಿಗಾ ಇಟ್ಟಿರುತ್ತದೆ. ಅದು ಹಾಡಿನ ದೃಶ್ಯವಿರಲಿ ಅಥವಾ ಸಾಹಸ ದೃಶ್ಯವಿರಲಿ, ಏನಾದರೂ ಸರಿಯಾಗಿ ಕಾಣುತ್ತಿಲ್ಲವೆಂದಾದರೆ ತಂಡ ತಕ್ಷಣ ಗಮನಕ್ಕೆ ತರುತ್ತದೆ. ಎಲ್ಲರೂ ಎಚ್ಚರಿಕೆಯಿಂದ ಇದ್ದರೂ, ಕೆಲವೊಮ್ಮೆ ತಪ್ಪುಗಳು ಸಂಭವಿಸಬಹುದು, ತೆರೆಯ ಮೇಲೆ ಮಹಿಳೆಯರನ್ನು ಹೇಗೆ ತೋರಿಸಲಾಗುತ್ತದೆ ಎಂಬುದರ ಕುರಿತು ಈಗ ಜನರಲ್ಲಿ ಹೆಚ್ಚಿನ ಅರಿವು ಮೂಡಿದೆ. ಎಂಟು ವರ್ಷಗಳ ಹಿಂದೆ ಇಂತಹ ಚರ್ಚೆಗಳು ಸಾಮಾನ್ಯವಾಗಿರಲಿಲ್ಲ, ಆದರೆ ಇಂದು ಪರಿಸ್ಥಿತಿ ಬದಲಾಗುತ್ತಿದೆ ಎಂದಿದ್ದಾರೆ.
ಐಟಂ ಸಾಂಗ್ ಮಾಡುವ ಬಗ್ಗೆ ಶ್ರುತಿ ಮಾತನಾಡಿ "ಡ್ಯಾನ್ಸ್ ಮಾಡೋದು ನನಗೆ ತುಂಬಾ ಇಷ್ಟ. ಸೊಗಸಾಗಿ ಡ್ರೆಸ್ ಮಾಡಿಕೊಂಡು ನನಗಿಷ್ಟ..ನನ್ನ ದೃಷ್ಟಿಕೋನದಲ್ಲಿ ನೃತ್ಯ ಎನ್ನುವುದು ಸ್ವಾತಂತ್ರ್ಯದ ಸಂಕೇತ. ನಾನು ಎಂದಿಗೂ ಯಾರನ್ನೂ ಮೆಚ್ಚಿಸಲು ಅಥವಾ ಒತ್ತಾಯಕ್ಕೆ ಮಣಿದು ಇಂತಹ ಹಾಡುಗಳಿಗೆ ಹೆಜ್ಜೆ ಹಾಕಲ್ಲ" ಎಂದಿದ್ದಾರೆ. 'ಪೆದ್ದಿ' ಚಿತ್ರದ 'ಹೆಲ್ಲಲ್ಲಲ್ಲೋ' ಹಾಡಿಗೆ ಚರಣ್, ಜಾನ್ವಿ, ಶ್ರುತಿ ಬಿಂದಾಸ್ ಆಗಿ ಕುಣಿದಿದ್ದು ಗೊತ್ತೇಯಿದೆ.
Respect to #ShrutiHaasan for her maturity and class! 💥👌
— VJ (@Rockyy__420) November 23, 2026
A perfect slipper shot to #Janhvi Kapoor's ungrateful attitude! 🔥
Everything is backfiring now. Well deserved! 💯 pic.twitter.com/u75szlerFD