ರ್ಯಾಪರ್ ಚಂದನ್ ಶೆಟ್ಟಿ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ. ಹೊಸ ರ್ಯಾಪ್ ಸಾಂಗ್ ಮೂಲಕ ಚಂದು ಗಮನ ಸೆಳೆದಿದ್ದಾರೆ. ಬಿಂದಾಸ್ ಡ್ಯಾನ್ಸ್ ನಂಬರ್‌ನಲ್ಲಿ ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. 'ಹಾರ್ಟ್ ಬ್ರೇಕಿಂಗ್' ಎಂದು 'ಏನೇ ನಿನ್ನ ಮೈಮಾಟದಾಟ' ಎಂದು ಚಂದನ್ ಕಮಾಲ್ ಮಾಡಿದ್ದಾರೆ.

ಬಿಗ್‌ಬಾಸ್ ಶೋನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಭಾಗವಹಿಸಿದ್ದು ಬಳಿಕ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಬಹಳ ಬೇಗ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಹಾಗಾಗಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಡಿವೋರ್ಸ್ ಬಳಿಕ ನಿವೇದಿತಾ ಸೋಶಿಯಲ್ ಮೀಡಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಬಿಂದಾಸ್ ವೀಡಿಯೋಗಳಲ್ಲಿ ಮೈಮಾಟ ಪ್ರದರ್ಶನ ಮಾಡುತ್ತಾ ಗಮನ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ.

ಸದ್ಯ ಚಂದನ್ ಶೆಟ್ಟಿ ಹೊಸ ರ್ಯಾಪ್ ಸಾಂಗ್ ನಿವೇದಿತಾಗೆ ಟಾಂಗ್ ಕೊಡುವಂತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 'ಏನೇ ನಿನ್ನ ಮೈಮಾಟದಾಟ' ಎಂದು ಶುರುವಾಗುವ ಹಾಡಿನ ಸಾಹಿತ್ಯದಲ್ಲಿ ಪರೋಕ್ಷವಾಗಿ ನಿವ್ವಿಗೆ ಕೌಂಟರ್ ಕೊಟ್ಟಿದ್ದಾರೆ ಎಂದು ಚರ್ಚೆ ನಡೀತಿದೆ. ಹಾಡು ಶುರುವಾಗುವ ಮುನ್ನ "ಈ ಹಾಡಿನ ಸಾಹಿತ್ಯವು ಸಂಪೂರ್ಣವಾಗಿ ಕಾಲ್ಪನಿಕವಾಗಿದ್ದು, ಯಾವುದೇ ನಿರ್ದಿಷ್ಟ ವ್ಯಕ್ತಿ, ಘಟನೆ ಅಥವಾ ಸಂದರ್ಭವನ್ನು ಉದ್ದೇಶಿಸಿ ರಚಿಸಲ್ಪಟ್ಟಿರುವುದಿಲ್ಲ ಹಾಗೂ ಯಾರ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಉದ್ದೇಶವೂ ಹೊಂದಿಲ್ಲ. ಹಾಡಿನ ಯಾವುದೇ ಅಂಶವು ಯಾರಾದರೂ ವ್ಯಕ್ತಿ ಅಥವಾ ನೈಜ ಘಟನೆಗೆ ಹೋಲಿಕೆ ಹೊಂದಿದರೆ, ಅದು ಸಂಪೂರ್ಣವಾಗಿ ಕಾಕತಾಳೀಯವೆಂದು ಪರಿಗಣಿಸಬೇಕು. ಈ ಕೃತಿ ಕೇವಲ ಮನರಂಜನಾ ಉದ್ದೇಶಕ್ಕಾಗಿ ರಚಿಸಲಾಗಿದೆ" ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಆದರೂ ನಿವೇದಿತಾ ಜೊತೆಗೆ ಹಾಡನ್ನು ಹೋಲಿಸಿ ಕೆಲವರು ಕಾಮೆಂಟ್ ಮಾಡ್ತಿದ್ದಾರೆ

"ಏನೇ ನಿನ್ನ ಮೈಮಾಟದಾಟ, ಇನ್ ಏಳು ಜನುಮಕ್ಕೂ ಕಲಿಸಿಯ ಪಾಠ... ನೀ ಹೋದಮೇಲೆ ನಾ ಸೋತಿಲ್ಲ, ಬದಲಾದೆ! ನನ್ನ ಪ್ರೀತಿ ಸೋತಿರಬಹುದು ಆದರೆ ನಾ ಸೋತಿಲ್ಲ" ಎನ್ನುವ ಹಾಡಿನ ಸಾಲುಗಳು ಎಲ್ಲರ ಗಮನ ಸೆಳೆದಿದೆ. ಸ್ವತಃ ಚಂದನ್ ಶೆಟ್ಟಿ ಸಾಹಿತ್ಯ ಬರೆದು ಮ್ಯೂಸಿಕ್ ಮಾಡಿ ಹಾಡು ಹಾಡಿದ್ದಾರೆ. ತಮ್ಮದೇ ನಿರ್ದೇಶನದಲ್ಲಿ ಚಿತ್ರೀಕರಣ ಮಾಡಿದ್ದಾರೆ. 'ಚಾಕ್ಲೇಟ್ ಗರ್ಲ್' ಬಳಿಕ ಚಂದನ್ ಆಲ್ಬಮ್ ಸಾಂಗ್ಸ್ ಯಾವುದು ಕೂಡ ದೊಡ್ಡದಾಗಿ ಹಿಟ್ ಆಗಿರಲಿಲ್ಲ. ಆದರೆ 'ಏನೇ ನಿನ್ನ ಮೈಮಾಟದಾಟ' ಸಾಕಷ್ಟು ಜನರಿಗೆ ಇಷ್ಟವಾಗಿದೆ.