ಡೈನಾಮಿಕ್ ಸ್ಟಾರ್ ದೇವರಾಜ್ ಕಿರಿಪುತ್ರ ಪ್ರಣಾಮ್ ಹಾಗೂ ನಮಿತಾ ಗೋಪಾಲ್ ಮದುವೆ ದಿನಾಂಕ ನಿಶ್ಚಯವಾಗಿದೆ. ನವೆಂಬರ್ 1ರಂದು ಜೋಡಿ ಹಸೆಮಣೆ ಏರಲಿದೆ. ಇದು ಲವ್ ಕಮಲ್ ಅರೇಂಜ್ಡ್ ಮ್ಯಾರೇಜ್. ಈಗಾಗಲೇ ದೇವರಾಜ್ ದಂಪತಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮಗನ ಮಗುವಿಗೆ ಆಮಂತ್ರಣ ನೀಡಿದ್ದಾರೆ.

ಆಗಸ್ಟ್ 26ರಂದು ಬೆಂಗಳೂರಿನ ಹೋಟೆಲ್‌ನಲ್ಲಿ ಪ್ರಣಾಮ್ ಹಾಗೂ ನಮಿತಾ ಗೋಪಾಲ್ ಮದುವೆ ನಿಶ್ಚಿತಾರ್ಥ ಬಹಳ ಅದ್ಧೂರಿಯಾಗಿ ನೆರವೇರಿತ್ತು. ದೇವರಾಜ್ ಅವರ ಆತ್ಮೀಯ ಸ್ನೇಹಿತ ಗೋಪಾಲ್ ಅವರ ಮಗಳು ನಮಿತಾ. ಚಿಕ್ಕಂದಿನಿಂದ ಒಬ್ಬರನ್ನೊಬ್ಬರು ನೋಡಿ ಬೆಳೆದವರು. ಸ್ನೇಹಿತರು ಈಗ ಸಂಬಂಧಿಕರಾಗುತ್ತಿದ್ದಾರೆ. ಗೋಪಾಲ್ ಅಂಕಲ್ ಫ್ಯಾಮಿಲಿ ಮಕ್ಕಳು, ನಾವು ಎಲ್ಲರೂ ಒಟ್ಟಿಗೆ ಆಡಿ ಬೆಳೆದವರು. ಇದು ಲವ್ ಮ್ಯಾರೇಜ್ ಅಂತ ಕೂಡ ಹೇಳೋಕೆ ಆಗಲ್ಲ, ಅರೇಂಜ್ಡ್ ಮ್ಯಾರೇಜ್ ಅಂತ ಕೂಡ ಹೇಳೋಕೆ ಆಗಲ್ಲ.

ನಮಿತಾ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಹೋಗಿದ್ದರು. ಆಕೆ ಅಲ್ಲಿಂದ ಬಂದ ಮೇಲೆ ಮದುವೆ ಮಾತುಕತೆ ನಡೀತು. ಮೊದಲಿನಿಂದ ನನಗೆ ನಮಿತಾ, ನಮಿತಾಗೆ ನಾನು ಎನ್ನುವಂತೆ ಹಿರಿಯರು ಭಾವಿಸಿದ್ದರು. ಕೊನೆಗೆ ಮಾತುಕತೆ ಮಾಡಿ ಮದುವೆ ಆಗುವ ತೀರ್ಮಾನಕ್ಕೆ ಬಂದೆವು ಎಂದು ನ್ಯೂಸೋ ನ್ಯೂಸು ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಪ್ರಣಾಮ್ ಹೇಳಿಕೊಂಡಿದ್ದಾರೆ.