'ಸಿಟಿಲೈಟ್ಸ್', 'ಪ್ರೇಮದ ಊರಲಿ' ಹಾಗೂ 'ಬೇಲ್' ರೀತಿಯ ಸಣ್ಣ ಬಜೆಟ್ ಸಿನಿಮಾಗಳು ಸಖತ್ ಸದ್ದು ಮಾಡ್ತಿವೆ. ನೂರಾರು ಕೋಟಿ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳಿಗಿಂತ ಪ್ರೇಕ್ಷಕರಿಗೆ ಹತ್ತಿರ ಎನಿಸುವ ಇಂತಹ ಸಿನಿಮಾಗಳೇ ವಾಸಿ ಎಂದು ಕೆಲವರು ಹೇಳುತ್ತಿದ್ದಾರೆ. ಇತ್ತೀಚೆಗೆ ಹಿರಿಯ ನಟ ರಂಗಾಯಣ ರಘು ಇದೇ ಮಾತು ಹೇಳಿದ್ದರು. ಇದೀಗ ನಟ ಶಿವರಾಜ್‌ಕುಮಾರ್ ಕೂಡ ಅದಕ್ಕೆ ದನಿಗೂಡಿಸಿದ್ದಾರೆ.
600 ಕೋಟಿ ರೂ. ಬಜೆಟ್ 'ಟಾಕ್ಸಿಕ್' ಸಿನಿಮಾ ಫಲಿತಾಂಶ ಏನಾಯ್ತು ಎನ್ನುವುದು ಗೊತ್ತೇಯಿದೆ. 'ಕೆಜಿಎಫ್' ಸರಣಿ ಗೆಲ್ತು ಅಂತ ಅಂಥದ್ದೇ ಸಿನಿಮಾ ಮಾಡುವ ಪ್ರಯತ್ನ ಸರಿಯಲ್ಲ ಎಂದು ಕೆಲವರು ವಾದಿಸಿದ್ದರು. ರಂಗಾಯಣ ರಘು ನೇರವಾಗಿಯೇ ಈ ವಿಚಾರದಲ್ಲಿ ಯಶ್ ಅವರಿಗೆ ಕಿವಿಮಾತು ಹೇಳಿದ್ದರು. ದೊಡ್ಡ ಸಿನಿಮಾ ಅಂತ ನಾಲ್ಕೈದು ವರ್ಷ ಪ್ರೇಕ್ಷಕರಿಂದ ದೂರಾಗುವುದು ತಪ್ಪು. ಕೊನೆ ಪಕ್ಷ ಸಣ್ಣ ಸಿನಿಮಾಗಳನ್ನು ನಿರ್ಮಿಸಿ ಒಳ್ಳೆ ಪ್ರತಿಭೆಗಳಿಗೆ ಅವಕಾಶ ಕೊಡಿ ಎಂದಿದ್ದರು.
'ಬೇಲ್' ಸಿನಿಮಾ ಪ್ರಚಾರದ ವೇಳೆ ಶಿವರಾಜ್‌ಕುಮಾರ್ ಕೂಡ ಬಜೆಟ್‌ಗಿಂತ ಕಂಟೆಂಟ್ ಮುಖ್ಯ ಎಂದಿದ್ದಾರೆ. "ದೊಡ್ಡ ಬಜೆಟ್ ಸಿನಿಮಾ ಮಾಡಿಬಿಟ್ರೆ ಓಡುತ್ತೆ ಎನ್ನವುದು ಸುಳ್ಳು. ಒಂದು ಕಥೆ ಪ್ರೇಕ್ಷಕರನ್ನು ಸೆಳೆಯಬೇಕು. ಕನ್ನಡ ಸಿನಿಮಾಗಳು ಓಡ್ತಿಲ್ಲ ಎನ್ನುವ ಕಾಲದಲ್ಲಿ 'ವೀಡಿಯೋ', 'ಸಿಟಿಲೈಟ್ಸ್', 'ಪ್ರೇಮದ ಊರಲಿ' ಈಗ 'ಬೇಲ್'.. ಸಬ್ಜೆಕ್ಟ್ ಅರ್ಥಬೇಕು ಪ್ರೇಕ್ಷಕರಿಗೆ.. ಕೆಲವೊಮ್ಮೆ ಒಳ್ಳೆ ಸಿನಿಮಾ ಕೂಡ ಗೆಲ್ಲಲ್ಲ ಅದಕ್ಕೆ ಏನು ಮಾಡೋಕೆ ಆಗಲ್ಲ.. ಹಾಗಂತ ಹೆಚ್ಚು ಹಣ ಸುರಿದ್ರೆ ಓಡುತ್ತೆ ಎನ್ನುವುದು ಭ್ರಮೆ, ಆ ಭ್ರಮೆಯಲ್ಲಿ ಬದುಕಬಾರದು, ರಿಯಾಲಿಟಿಯಲ್ಲಿ ಬದುಕಬೇಕು" ಎಂದಿದ್ದಾರೆ.
ಪ್ರೇಕ್ಷಕರಿಗೆ ಸಿನಿಮಾ ಸುಲಭವಾಗಿ ಅರ್ಥ ಆಗ್ಬೇಕು.. ಅರ್ಥ ಆಗದೇ ಇದ್ರೆ ಕಷ್ಟ.. ಇದು ಅಂತೆ, ಅದು ಅಂತೆ ನಾವು ವಿವರಿಸುವಂತೆ ಇರಬಾರದು.. 'ಬೇಲ್' ಸಿನಿಮಾ ಜನ ನೋಡ್ತಿದ್ದಾರೆ ಅಂದ್ರೆ ಜನರಿಗೆ ಇಷ್ಟವಾಗಿದೆ. ಫ್ಯಾಮಿಲಿ ನೋಡಬಹುದು. ಎಲ್ಲಾ ಪಾತ್ರಗಳಿಗೆ ನ್ಯಾಯ ಒದಗಿಸಬೇಕು" ಎಂದು ಶಿವರಾಜ್‌ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಬಗ್ಗೆ ಶಿವಣ್ಣ ಪರೋಕ್ಷವಾಗಿ ಮಾತನಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.
#Shivanna straight slipper shot to #Yash 😂 yesterday rangayana raghu sir today #Bail main lead shivanna banging he's telling that don't live in delusion, continous back shots for actor yash🤡#Ramayana #KicchaSudeep #BRB #Devaraya #Darshan #Toxic #Bbk13 pic.twitter.com/ovhgzhiWeZ
— Punisher (@_Punisher1) October 8, 2026