ಶೈನ್ ಶೆಟ್ಟಿ ನಿರ್ಮಿಸಿ ನಟಿಸಿರುವ 'ಶಂಕರಾಭರಣ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಈಗಾಗಲೇ ಕೆಲವೆಡೆ ಪ್ರೀಮಿಯರ್ ಶೋಗಳು ಶುರುವಾಗಿ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿದೆ. ಸಿನಿಮಾ ನೋಡಿದವರು ಈ ವರ್ಷದ ಮತ್ತೊಂದು ಹಿಟ್ ಗ್ಯಾರಂಟಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಹಾರರ್, ಕಾಮಿಡಿ ಅಂಶಗಳನ್ನು ಒಳಗೊಂಡಿರುವ 'ಶಂಕರಾಭರಣ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಚೀನಾ ಚಿತ್ರೋತ್ಸವದಲ್ಲಿ ಕೂಡ ಸಿನಿಮಾ ಪ್ರದರ್ಶನ ಕಂಡಿತ್ತು. 'ಶಂಕರಾಭರಣ' ಎಂಬ ಖಾಸಗಿ ಬಸ್ ಡ್ರೈವರ್ ಕಥೆಯಿದು. ಆತನ ಜೀವನದಲ್ಲಿ ನಡೆಯುವ ಸಿಹಿ, ಕಹಿ ಘಟನೆಗಳೇ ಸಿನಿಮಾ ರೂಪ ಪಡೆದುಕೊಂಡಿದೆ. ಕರಾವಳಿ ಸುತ್ತಾಮುತ್ತಾ ಭಾಗದಲ್ಲಿ ಸಾಗುವ ಕಥೆಯನ್ನೇ ಅದೇ ಭಾಗದಲ್ಲಿ ಕಟ್ಟಿಕೊಡಲಾಗಿದೆ.
ಚಿತ್ರದಲ್ಲಿ ಬಳಸಿರುವ 'ಶಂಕರಾಭರಣ' ಬಸ್ನಲ್ಲೇ ಶೈನ್ ಶೆಟ್ಟಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ಸಿನಿಮಾ ಸಿನಿಮಾ ಪ್ರಚಾರ ಮಾಡಿದ್ದರು. ತಮ್ಮ ಜೀವನದಲ್ಲಿ ನೋಡಿದ ಘಟನೆಗಳನ್ನೇ ಅವರು ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ತನ್ವಿ ರಾಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಕೃತಿ ಶೆಟ್ಟಿ, ಅನೀಲ್ ಕುಮಾರ್ ಚೌಹ್ಹಾಣ್ , ಅರ್ಜುನ್ ಕಜೆ ಸೇರಿ ಹಲವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ನಟಿ ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಪತ್ನಿ ಕೃತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ.
ದಿವಾಕರ್ ಶೆಟ್ಟಿ ಎಂಬುವವರ ಜೊತೆ ಸೇರಿ ಶೈನ್ ಶೆಟ್ಟಿ 'ಶಂಕರಾಭರಣ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಇದು. ಸಂಪತ್ ಕುಮಾರ್ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಸಾಲ ಮಾಡಿ ಬಸ್ ಕೊಂಡುಕೊಳ್ಳುವ ಖಾಸಗಿ ಬಸ್ ಓನರ್ಗಳ ಕಷ್ಟಗಳು, ಡ್ರೈವರ್ ಆಗಿ ಏನೆಲ್ಲ ಕಷ್ಟಗಳನ್ನು ಚಿತ್ರದಲ್ಲಿ ಎಳೆಎಳೆಯಾಗಿ ತೆರೆದಿಡಲಾಗಿದೆ. ಈಗಾಗಲೇ ಸಿನಿಮಾ ನೋಡಿದವರು ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಅಂಶಗಳನ್ನು ಮೆಚ್ಚಿಕೊಂಡಿದ್ದಾರೆ.
ಮಂಗಳೂರು ಹಾಗೂ ಮೈಸೂರಿನಲ್ಲಿ ಪ್ರೀಮಿಯರ್ ಶೋಗಳು ನಡೆದಿದೆ. ಬೆಂಗಳೂರಿನಲ್ಲಿ ಇಂದು(ನವೆಂಬರ್ 19) ಕೂಡ ಒಂದಷ್ಟು ಶೋಗಳನ್ನು ಆಯೋಜಿಸಲಾಗಿದೆ. 'ಪ್ರೇಮದ ಊರಲಿ' ಸಕ್ಸಸ್ ಹೊಸಬರ ಚಿತ್ರಕ್ಕೂ ಪ್ರೇಕ್ಷಕರ ಬೆಂಬಲ ಸಿಗುತ್ತದೆ ಎನ್ನುವುದನ್ನು ಸಾಬೀತುಮಾಡಿದೆ. ಹಾಗಾಗಿ 'ಶಂಕರಾಭರಣ' ಕೂಡ ಗೆಲ್ಲುವ ನಿರೀಕ್ಷೆ ಹೆಚ್ಚಾಗಿದೆ.
ಶೈನ್ ಶೆಟ್ಟಿ ನಟನೆಯ ಶಂಕರಾಭರಣ ಮಂಗಳೂರು ಪ್ರೀಮಿಯರ್ ಶೋ ರೆಸ್ಪಾನ್ಸ್... #Shineshetty #shanakarabharana pic.twitter.com/08yOSojeFw
— Cinesamachara 🌊 (@cinesamachara26) November 19, 2026