ಚಲಾ ನಿರ್ದೇಶನದಲ್ಲಿ ಪ್ರಮೋದ್ ನಟನೆಯ 'ಹಲ್ಕಾ ಡಾನ್' ಸಿನಿಮಾ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮೊದಲ ನೋಟದಲ್ಲೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಮಿಂಚಿದ್ದು ಮತ್ತೊಂದು ಪ್ರಮುಖ ಪಾತ್ರದಲ್ಲಿ ರೂಪೇಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಸಾಯಿಕುಮಾರ್ ಫ್ಯಾನ್ 'ಹಲ್ಕಾ ಡಾನ್' ಆಗಿ ಪ್ರಮೋದ್ ಕಮಾಲ್ ಮಾಡೋಕೆ ಬರ್ತಿದ್ದಾರೆ. ಫನ್, ಆಕ್ಷನ್ ಹೀಗೆ ಕಂಪ್ಲೀಟ್ ಎಂಟರ್‌ಟೈನರ್ ಪ್ಯಾಕೇಜ್ ಜೊತೆ ಸಿನಿಮಾ ಬರ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ತುಳು ಭಾಷೆಗಳಿಗೆ ಸಿನಿಮಾ ಡಬ್ ಆಗಿ ಬಿಡುಗಡೆ ಆಗ್ತಿದೆ. ಹಾಗಾಗಿ ತೆಲುಗು ಟೀಸರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಟೀಸರ್‌ನಲ್ಲೇ ಪ್ರಮೋದ್ ನಟನೆಗೆ ಸಿನಿರಸಿಕರು ಫಿದಾ ಆಗಿದ್ದಾರೆ.

ಟೀಸರ್‌ನಲ್ಲಿ ಪ್ರಮೋದ್ ಲುಕ್, ಬಾಡಿ ಲ್ಯಾಂಗ್ವೇಜ್ ಮತ್ತು ಮ್ಯಾನರಿಸಂ ಹಿಂದೆಂದಿಗಿಂತಲೂ ಸಖತ್ ಡಿಫರೆಂಟ್ ಆಗಿದೆ. 'ರತ್ನನ್ ಪ್ರಪಂಚ' ಚಿತ್ರದ ಉಡಾಳ್ ಬಾಬು ರಾವ್ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 'ವೀನಸ್ ಎಂಟರ್‌ಟೈನರ್ಸ್' ಬ್ಯಾನರ್ ಅಡಿಯಲ್ಲಿ ಶ್ರೀಕಾಂತ್ ಕೆ.ಪಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಾಧವ್ ಸಿರಾನ್ ಹಾಗೂ ಮ್ಯಾಸಿಸ್ ಪ್ರೊಡಕ್ಷನ್ಸ್ ಸಂಸ್ಥೆಗಳು ಕೈಜೋಡಿಸಿವೆ.

ಡಾನ್ ಆಗಿ ಪ್ರಮೋದ್ ಡೈಲಾಗ್ ಡೆಲಿವರಿ ಮಜವಾಗಿದೆ. ನಾಯಕಿ ಅಮೃತಾ ಅಯ್ಯಂಗಾರ್ ಹೇಳಿರುವ ಡೈಲಾಗ್ ಕೂಡ ಗಮನ ಸೆಳೆದಿದೆ. ವಿ. ಹರಿಕೃಷ್ಣ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು 'ಹಲ್ಕಾ ಡಾನ್' ಟೀಸರ್ ಬಿಜಿಎಂ ಮಜವಾಗಿದೆ. ಟೀಸರ್ ಟೆಸ್ಟ್‌ನಲ್ಲಿ ಚಿತ್ರತಂಡ ಪಾಸ್ ಆಗಿದೆ. ಸಿನಿಮಾ ಬೇಗ ರಿಲೀಸ್ ಮಾಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.

ಹಳೇ ಲವ್ವರ್‌ನ ಕಿಡ್ನ್ಯಾಪ್ ಮಾಡೋಕೆ ಬಂದ ಡಾನ್ ಕಥೆ ಏನೆಲ್ಲಾ ಆಗುತ್ತೆ ಎನ್ನುವುದು 'ಹಲ್ಕಾ ಡಾನ್' ಚಿತ್ರದಲ್ಲಿ ಹೇಳಿರುವಂತೆ ಕಾಣ್ತಿದೆ. ಬಹಳ ತಮಾಷೆಯಾಗಿ ಶುರುವಾಗುವ ಟೀಸರ್ ಮುಂದೆ ಚಿತ್ರದ ಬಗ್ಗೆ ಕುತೂಹಲ ಮೂಡಿಸುವಂತಿದೆ. ಪ್ರಮೋದ್ ಕ್ಲೈಮ್ಯಾಕ್ಸ್ ಪಂಚ್ ಕೂಡ ಸಖತ್ತಾಗಿದೆ.