ಇಂಗ್ಲೀಷ್ ಸಿನಿಮಾ ಹಾಗೂ ವೆಬ್ ಸೀರಿಸ್‌ನಲ್ಲಿ ಹಸಿಬಿಸಿ ದೃಶ್ಯಗಳು, ಸೆ*ಕ್ಸ್ ದೃಶ್ಯಗಳು ಸರ್ವೇಸಾಮಾನ್ಯ. ಖ್ಯಾತ ನಟ-ನಟಿಯರೇ ಇಂತಹ ದೃಶ್ಯಗಳಲ್ಲಿ ಮೈಚಳಿ ಬಿಟ್ಟು ನಟಿಸ್ತಾರೆ. ಇತ್ತೀಚೆಗೆ ಭಾರತದ ಕೆಲ ವೆಬ್ ಸೀರಿಸ್‌ಗಳಲ್ಲಿ ಕೂಡ ಬಿಂದಾಸ್ ದೃಶ್ಯಗಳನ್ನು ನೋಡುತ್ತಿದ್ದೇವೆ. 4 ವರ್ಚಗಳ ಹಿಂದೆ ಬಂದಿದ್ದ Se*x/Life ವೆಬ್‌ ಸೀರಿಸ್‌ನಲ್ಲಿ ಎಷ್ಟರಮಟ್ಟಿಗೆ ಹಸಿಬಿಸಿ ದೃಶ್ಯಗಳಿತ್ತು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಇಂತಹ ದೃಶ್ಯಗಳನ್ನು ಹೇಗೆ ಚಿತ್ರೀಕರಿಸುತ್ತಾರೆ ಎನ್ನುವ ಅನುಮಾನ ಕೆಲವರಿಗಿದೆ.

ನಿಜವಾಗಿಯೂ ನಟ- ನಟಿಯರು ಸಂಭೋ*ಗ ಮಾಡುವಂತ ದೃಶ್ಯಗಳಲ್ಲಿ ನಟಿಸ್ತಾರಾ? ನಟಿಯರು ಇದಕ್ಕೆ ಹೇಗೆ ಸಹಕರಿಸ್ತಾರೆ ? ಹತ್ತಾರು ಜನ ತಂತ್ರಜ್ಞರ ಸಮ್ಮುಖದಲ್ಲಿ ಕ್ಯಾಮರಾ ಎದುರು ಇಂತಹ ಸನ್ನಿವೇಶಗಳಲ್ಲಿ ನಟಿಸುವುದು ಅಷ್ಟು ಸುಲಭನಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತದೆ. ಇಂತಹ ದೃಶ್ಯಗಳನ್ನು ಹೇಗೆ ಚಿತ್ರೀಕರಿಸುತ್ತಾರೆ ಎಂದು Se*x/Life ವೆಬ್‌ ಸೀರಿಸ್ ನಟಿ ಸಾರಾ ಶಾಹಿ ಹೇಳಿದ್ದಾರೆ. ಅಂತಹ ದೃಶ್ಯಗಳಲ್ಲಿ ನಟಿಸೋದು ಸಖತ್ ಕ್ರೇಜಿ ಎಂದು 'ಆಫ್ ದಿ ವೈನ್' (Off The Vine)ಸಂದರ್ಶನದದಲ್ಲಿ ಆಕೆ ಹೇಳಿದ್ದ ವೀಡಿಯೋ ಈಗ ವೈರಲ್ ಆಗ್ತಿದೆ.

ಸೆ*ಕ್ಸ್‌ ದೃಶ್ಯಗಳಲ್ಲಿ ನಟಿಸುವಾಗ ಆತಂಕ ಅಥವಾ ಮುಜುಗರವನ್ನು ಆದಷ್ಟು ಮರೆಮಾಚಲು ಮದ್ಯ ಸೇವಿಸಬೇಕಾಗುತ್ತದೆ. ಅಂದ್ರೆ ನಟ, ನಟಿ ಕೆಲವೊಮ್ಮೆ ಮದ್ಯ ಸೇವಿಸಿ ಇಂತಹ ದೃಶ್ಯಗಳನ್ನು ನಟಿಸ್ತೀವಿ ಎಂದು ನಟಿ ಸಾರಾ ಶಾಹಿ ಹೇಳಿದ್ದಾರೆ. "ನನಗೆ ಎದುರಿನ ನಟ ಹ್ಯಾಂಡ್ಸಮ್‌ ಅನ್ನಿಸದೇ ಇದ್ದರೆ ನಾನು ಅಂತಹ ದೃಶ್ಯಗಳಲ್ಲಿ ಬೇರೊಬ್ಬರನ್ನು ಕಲ್ಪಿಸಿಕೊಂಡು ನಟಿಸುತ್ತೇನೆ ಎಂದು ಖುಲ್ಲಂಖುಲ್ಲಾಗಿ ಹೇಳಿದ್ದಾರೆ.

ಸಂಭೋ*ಗ ಮಾಡುವಂತ ದೃಶ್ಯಗಳ ಚಿತ್ರೀಕರಣದ ವೇಳೆ ಮಾಡುವ ಟ್ರಿಕ್‌ ಬಗ್ಗೆ ಕೂಡ ನಟಿ ಸಾರಾ ಮಾತನಾಡಿದ್ದಾರೆ. "ಉದಾಹರಣೆಗೆ ನಟನೊಬ್ಬ ಹಿಂದಿನಿಂದ ನನ್ನನ್ನು ಬೋಗಿಸುವಂತಹ ದೃಶ್ಯ ಇದೆ ಅಂದ್ಕೊಳ್ಳಿ.. ಆಗ ನಾವು ಗಾಳಿ ತುಂಬದ ಯೋಗ ಬಾಲ್ ಅನ್ನು ಬಳಸುತ್ತಿದ್ದೆವು. ಅದನ್ನು ಕೆಳಭಾಗದಲ್ಲಿ ಇಟ್ಟುಕೊಳ್ಳುತ್ತಿದ್ದೆ. ಆ ನಟ ಕ್ರಿಯೆ ನಡೆಸುವಾಗ ನನಗೆ ಅವರ ಸ್ಪರ್ಶದ ಬದಲಿಗೆ ಆ ಯೋಗ ಬಾಲ್‌ನ ಒತ್ತಡ ಅಥವಾ ಸ್ಪರ್ಶ ಮಾತ್ರವೇ ಅನುಭವಕ್ಕೆ ಬರುತ್ತದೆ" ಎಂದಿದ್ದಾರೆ. ಕೂಡಲೇ ನಿರೂಪಕಿ ಕೈಟ್ಲಿನ್ "ಏಯ್, ಇದು ಒಳ್ಳೆ ಐಡಿಯಾ ಎನ್ನುತ್ತಿದ್ದಂತೆ ಹೌದು, ಇದೊಂದು ಒಳ್ಳೆ ಐಡಿಯಾ ಅಲ್ವಾ? ಇದು ಸಾರಾ ದನಿಗೂಡಿಸಿದ್ದಾರೆ.