ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಪ್ರೇಕ್ಷಕರು ಮಾತ್ರವಲ್ಲದೇ ವಿಮರ್ಶಕರಿಂದಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ರಾವಣನಾಗಿ ಯಶ್ ಅಭಿನಯಕ್ಕೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದಾರೆ. ಈಗಾಗಲೇ 300 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ.
ನಿರ್ದೇಶಕರಾದ ರಾಜಮೌಳಿ ಹಾಗೂ ಶಂಕರ್, ನಟ ಮಹೇಶ್ ಬಾಬು ಈಗಾಗಲೇ 'ರಾಮಾಯಣ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕನ್ನಡ ಸಿನಿಮಾ ತಾರೆಯರು ಕೂಡ 'ರಾಮಾಯಣ' ಸಿನಿಮಾ ನೋಡುತ್ತಿದ್ದಾರೆ. ಆದರೆ ಯಾರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಕೊಡ್ತಿಲ್ಲ. ರಿಷಬ್ ಶೆಟ್ಟಿ ಮಾತ್ರ ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಿತೇಶ್ ಹಾಗೂ ನಮಿತ್, ನೀವು ಈ ಕಾಲಾತೀತ ಮಹಾಕಾವ್ಯಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದೀರಿ. ಇದರ ಪ್ರತಿಯೊಂದು ಭಾಗವನ್ನೂ ನೋಡಿ ಆನಂದಿಸಿದೆ. ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಶಾಂತತೆ ಮತ್ತು ಘನತೆಯನ್ನು ತಂದಿದ್ದಾರೆ. ಇದೊಂದು ಸವಾಲಿನ ಜವಾಬ್ದಾರಿಯಾಗಿದ್ದು, ಅದನ್ನು ಅವರು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದಾರೆ. ಶಕ್ತಿಶಾಲಿ ರಾವಣನ ಪಾತ್ರದಲ್ಲಿ ಯಶ್ ಅವರ ಅಭಿನಯವು ಹೆಮ್ಮೆಪಡುವಂತಹ ವಿಷಯವಾಗಿದೆ. ತೆರೆಯ ಮೇಲೆ ಅವರ ಅಸಾಧಾರಣ ಉಪಸ್ಥಿತಿ ಮತ್ತು ಪಾತ್ರದ ತೀವ್ರತೆಯು ನಮ್ಮನ್ನು ಕೊನೆಯವರೆಗೂ ಕಟ್ಟಿಹಾಕುತ್ತದೆ. ಭವ್ಯತೆ ಹಾಗೂ ಸಂಕೀರ್ಣತೆ ಎರಡನ್ನೂ ಬೇಡುವ ಈ ಪಾತ್ರವನ್ನು ತೆರೆಯ ಮೇಲೆ ನೋಡುವುದೇ ಒಂದು ಅದ್ಭುತ ಅನುಭವ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅವರನ್ನು ನೋಡುವುದು ಸುಂದರವಾಗಿದೆ. ಅವರ ಲಾವಣ್ಯ, ಶಕ್ತಿ ಮತ್ತು ಭಾವನಾತ್ಮಕ ಆಳವು ಪಾತ್ರಕ್ಕೆ ಅಪಾರವಾದ ಆತ್ಮೀಯತೆಯನ್ನು ತುಂಬಿದೆ ಎಂದು ರಿಷಬ್ ಶೆಟ್ಟಿ ಕೊಂಡಾಡಿದ್ದಾರೆ.
ನಟ ಧನಂಜಯ್ ಕೂಡ ಫ್ಯಾಮಿಲಿ ಸಮೇತ 'ರಾಮಾಯಣ' ಸಿನಿಮಾ ನೋಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಲವ್ಲಿ ಸ್ಟಾರ್ ಪ್ರೇಮ್, ನಿರ್ದೇಶಕ ಮಂಸೋರೆ ಸೇರಿದಂತೆ ಸಾಕಷ್ಟು ಮಂದಿ ತಾರೆಯರು ಸಿನಿಮಾ ನೋಡಿದ್ದಾರೆ. ಮಂಸೋರೆ ಪೋಸ್ಟ್ ಮಾಡಿ ಕನ್ನಡಿಗರೆಲ್ಲರೂ ಈ ಸಿನಿಮಾ ನೋಡ್ಲೇಬೇಕು ಎಂದು ಮನವಿ ಮಾಡಿದ್ದಾರೆ. ಸುದೀಪ್, ಶಿವಣ್ಣ, ಉಪೇಂದ್ರ ಸೇರಿದಂತೆ ಸ್ಟಾರ್ ನಟರು ಯಾವಾಗ 'ರಾಮಾಯಣ' ದರ್ಶನ ಮಾಡುತ್ತಾರೆ ಕಾದು ನೋಡಬೇಕಿದೆ.
@niteshtiwari22 and @malhotra_namit, you have done total justice to this timeless epic . Loved watching every bit of it. #RanbirKapoor as Lord Rama brings a sense of calm, grace and dignity to the character. A challenging responsibility, carried with remarkable sincerity.… pic.twitter.com/CiqRcAdsqd
— Rishab Shetty (@shetty_rishab) November 5, 2026