ನಟಿ ಸಮಂತಾ ಹಾಗೂ ರಾಜ್ ನಿಡುಮೊರು ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಸ್ಯಾಮ್ ಸೀಮಂತ ಕಾರ್ಯಕ್ರಮ ಕೂಡ ನಡೆದಿದೆ. ಇಶಾ ಫೌಂಡೇಶನ್ ಆಶ್ರಮದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಶಾಸ್ತ್ರ ನಡೆದಿದೆ. ಫೋಟೊ, ವೀಡಿಯೋಗಳ ಸಮೇತ ಈ ಬಗ್ಗೆ ಸಮಂತಾ ಹಂಚಿಕೊಂಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಇಶಾ ಫೌಂಡೇಶನ್‌ನಲ್ಲೇ ಅವರ ಮದುವೆ ಸಹ ನಡೆದಿತ್ತು.
ಕೆಲ ವರ್ಷಗಳಿಂದ ಸಮಂತಾ ಇಶಾ ಫೌಂಡೇಶನ್‌ಗೆ ಹೆಚ್ಚು ಭೇಟಿ ನೀಡುತ್ತಿದ್ದಾರೆ. ಭೂತ ಶುದ್ದಿ ಸಂಪ್ರದಾಯದಂತೆ ಆಕೆ ಮದುವೆಯಾಗಿದ್ದರು. ಇಶಾ ಜನನಿ ಯೋಗ ಶಾಸ್ತ್ರದಲ್ಲಿ ಕೂಡ ಭಾಗಿ ಆಗಿದ್ದರು. ಈಗ ಅಲ್ಲೇ ಸೀಮಂತ ನಡೆದಿದೆ. ಹಳದಿ-ಕಂದು ಬಣ್ಣದ ಉಡುಪಿನಲ್ಲಿ ಸ್ಯಾಮ್ ಕಾಣಿಸಿಕೊಂಡಿದ್ದಾರೆ. ಕತ್ತಿನಲ್ಲಿ ಮಲ್ಲಿಗೆ ಹಾರ, ಹಣೆಯಲ್ಲಿ ಅರಿಶಿನ-ಕುಂಕುಮ ಧರಿಸಿದ್ದರು. ಮುತ್ತೈದೆಯರು ಅರಿಶಿನ ಹಚ್ಚಿ, ಗಾಜಿನ ಬಳೆಗಳನ್ನು ತೊಡಿಸಿದ್ದಾರೆ.
ಪತಿ ರಾಜ್ ನಿಡುಮೊರು ಕೂಡ ಅರಿಶಿನ ಹಚ್ಚಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. 'ಮಾ ಇಂಟಿ ಬಂಗಾರಂ' ಸಿನಿಮಾ ಚಿತ್ರೀಕರಣದ ನಡೆವೆಯೇ ಸಮಂತಾಗೆ ತಾವು ಗರ್ಭಿಣಿ ಆಗಿರುವ ಸಂಗತಿ ಗೊತ್ತಾಗಿತ್ತು. ಬಳಿಕ ಸಿನಿಮಾ ಸಕ್ಸಸ್ ಸಂಭ್ರಮದ ವೇಳೆ ಅಭಿಮಾನಿಗಳ ಜೊತೆ ಈ ವಿಚಾರವನ್ನು ಹಂಚಿಕೊಂಡಿದ್ದರು. ಶೀಘ್ರದಲ್ಲೇ ಹೆರಿಗೆಯಾಗಲಿದೆ.