ತೆಲುಗು ನಟಿ ಸಮಂತಾ ಹಾಗೂ ರಾಜ್ ನಿರುಮೊರು ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ತಿಂಗಳು ಸಮಂತಾಗೆ ಹೆರಿಗೆಯಾಗಲಿದೆ. 9 ತಿಂಗಳ ಗರ್ಭಿಣಿ ಸಮಂತಾ ವರ್ಕೌಟ್‌ ಮಾತ್ರ ಬಿಟ್ಟಿಲ್ಲ. ಅದು ಸುಲಭದ ವ್ಯಾಯಾಮ ಅಲ್ಲವೇ ಅಲ್ಲ. ಇಂತಹ ಸಮಯದಲ್ಲೂ ಬಹಳ ಕಷ್ಟದ ವ್ಯಾಯಾಮಗಳನ್ನು ಮಾಡ್ತಿದ್ದಾರೆ.

ಫಿಟ್‌ನೆಸ್ ಫ್ರೀಕ್ ಆಗಿರುವ ಸ್ಯಾಮ್ ಸಿನಿಮಾ ಇರಲಿ ಬಿಡಲಿ ವರ್ಕೌಟ್ ತಪ್ಪಿಸಲ್ಲ. ಮಯೋಸೈಟಿಸ್ ಸಮಸ್ಯೆಗೆ ತುತ್ತಾದ ಬಳಿಕ ಡಯೆಟ್, ವರ್ಕೌಟ್ ಮತ್ತಷ್ಟು ಹೆಚ್ಚಿಸಿದ್ದರು. ಕೊನೆಯದಾಗಿ 'ಮಾ ಇಂಟಿ ಬಂಗಾರಂ' ಚಿತ್ರದಲ್ಲಿ ನಟಿಸಿದ್ದರು. ಫ್ಯಾಮಿಲಿ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಮುಂದೆ ಸೀಕ್ವೆಲ್ ಕೂಡ ಮಾಡುವುದಾಗಿ ಹೇಳಿದ್ದಾರೆ. ಇದೆಲ್ಲದರ ನಡುವೆ ತಾಯ್ತನದ ಖುಷಿಯಾಗಿ ಸಮಂತಾ ಕಾಯುತ್ತಿದ್ದಾರೆ.

'ಮಾ ಇಂಟಿ ಬಂಗಾರಂ' ಸಿನಿಮಾ ಪ್ರಚಾರದ ಸಮಯದಲ್ಲೇ ಸಮಂತಾ ಗರ್ಭಿಣಿ ಆಗಿರುವ ವಿಚಾರ ಗೊತ್ತಾಗಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜ್ ನಿಡುಮೊರು ಜೊತೆ ಇಶಾ ಫೌಂಡೇಷನ್‌ನಲ್ಲಿ ಆಕೆ ಹಸೆಮಣೆ ಏರಿದ್ದರು. ಇದೀಗ ವರ್ಷ ತುಂಬುವ ಮುನ್ನ ತಾಯಿ ಆಗುತ್ತಿದ್ದಾರೆ. ಮೊದಲ ತಿಂಗಳ ಗರ್ಭಿಣಿಯಾಗಿದ್ದಾಗ ಶುರುವಾದ ವರ್ಕೌಟ್, 9 ತಿಂಗಳು ತುಂಬಿದ ಬಳಿಕ ಕೂಡ ಮುಂದುವರೆದಿದೆ ಎಂದು ವೀಡಿಯೋ ಮಾಡಿ ಸಮಂತಾ ಹಂಚಿಕೊಂಡಿದ್ದಾರೆ. ದೊಡ್ಡ ಡಂಬಲ್ ಹಿಡಿದು ಸ್ಯಾಮ್ ಲೆಗ್ ವರ್ಕೌಟ್ ಮಾಡಿರುವುದನ್ನು ನೋಡಬಹುದು.

ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಸಮಂತಾಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದು ಬಹಳ ಸ್ಫೂರ್ತಿದಾಯಕ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಆದಷ್ಟು ಬೇಗ ಮುದ್ದುಕಂದಮ್ಮ ನಿಮ್ಮ ಮಡಿಲು ತುಂಬಲಿ ಎಂದು ಹಾರೈಸುತ್ತಿದ್ದಾರೆ.