ಬಾಲಿವುಡ್ ನಟ ಸಲ್ಮಾನ್ ಖಾನ್ ಬಿಗ್‌ಬಾಸ್ ವೇದಿಕೆಯಲ್ಲಿ ಎದೆ ಹಿಡಿದುಕೊಂಡು ಬಿದ್ದಿದ್ದಾರೆ. ಬಿಗ್‌ಬಾಸ್ ಹಿಂದಿ ಸೀಸನ್ 20 ಕಾರ್ಯಕ್ರಮವನ್ನು ಸಲ್ಲು ನಿರೂಪಣೆ ಮಾಡುತ್ತಿದ್ದಾರೆ. ವೀಕೆಂಡ್ ಶೋ ಪ್ರೋಮೊಗಳ ಮೂಲಕ ಕುತೂಹಲ ಮೂಡಿಸುತ್ತದೆ. ಆದರೆ ಈ ವೀಕೆಂಡ್ ವೇದಿಕೆಯಲ್ಲಿ ನಡೆದ ಕೆಲ ವಿಚಾರಗಳು ಭಾರೀ ಸದ್ದು ಮಾಡ್ತಿದೆ.

ಸಲ್ಮಾನ್ ಖಾನ್ ವೇದಿಕೆಯಲ್ಲೇ ಶರ್ಟ್ ಬಿಚ್ಚಿ ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ತೋರಿಸಿದ್ದಾರೆ. ಟ್ರೋಲ್ ಮಾಡುವವರಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಇನ್ನು ಎದೆ ನೋವು ಬಂದಂತೆ ವೇದಿಕೆಯಲ್ಲಿ ಸಲ್ಲು ಮಲಗಿದ್ದ ಪ್ರೋಮೊ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಲ್ಲು ಸ್ಪಷ್ಟನೆ ಕೊಟ್ಟಿದ್ದಾರೆ. ಅದು ಬಿಗ್‌ಬಾಸ್ ಶೋಗಾಗಿ ಮಾಡಿದ್ದು. ಪ್ರೋಮೊದಲ್ಲಿ ಅದನ್ನು ಬಳಸಬಾರದಿತ್ತು ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಟ-ನಟಿಯರ ವಯಸ್ಸು ಹಾಗೂ ಫಿಟ್‌ನೆಸ್ ಬಗ್ಗೆ ಬಾಡಿಶೇಮಿಂಗ್ ಮಾಡುವವರ ವಿರುದ್ಧ ಸಲ್ಮಾನ್ ಖಾನ್ ಗರಂ ಆಗಿದ್ದರು. ಮಾತನಾಡುತ್ತಾ ಭಾವುಕರಾಗಿದ್ದ ಸಲ್ಲು ವೇದಿಕೆಯಲ್ಲೇ ಶರ್ಟ್ ಬಿಚ್ಚಿ ಫಿಟ್‌ನೆಸ್ ಹೇಗಿದೆ ಎಂದು ತೋರಿಸಿದ್ರು. ಬಳಿಕ ಎದೆ ಹಿಡಿದುಕೊಂಡು ಅಸ್ವಸ್ಥರಾಗಿ ಅಲ್ಲೇ ಕುಳಿತುಬಿಟ್ಟರು. ಇದನ್ನು ನೋಡಿ ಒಂದು ಕ್ಷಣ ಮನೆ ಒಳಗಿದ್ದ ಸ್ಪರ್ಧಿಗಳು, ವೇದಿಕೆ ಮುಂಭಾಗದಲ್ಲಿದ್ದ ಜನ ಕೂಡ ಅವಕ್ಕಾಗಿದ್ದರು.

ಸಲ್ಮಾನ್ ಖಾನ್‌ಗೆ ನಿಜವಾಗಿ ಎದೆ ನೋವು ಕಾಣಿಸಿಕೊಳ್ತಾ ಎಂದು ಅಭಿಮಾನಿಗಳು ಗೊಂದಲಕ್ಕೀಡಾಗಿದ್ದರು. ಈ ಬಗ್ಗೆ ಸಲ್ಮಾನ್ ಖಾನ್ ಪೋಸ್ಟ್ ಮಾಡಿದ್ದಾರೆ. "ದೇವರ ದಯೆಯಿಂದ ನಾನು ಆರೋಗ್ಯವಾಗಿದ್ದೀನಿ. ಬಿಗ್ ಬಾಸ್ ಪ್ರೊಮೊವನ್ನು ಆ ರೀತಿ ಕಟ್ ಮಾಡಬಾರದಿತ್ತು. ಮನೆಯಲ್ಲಿದ್ದ ಸ್ಪರ್ಧಿ ಕಾಜಿ ತನ್ನ ಆರೋಗ್ಯ ಸಮಸ್ಯೆಯನ್ನು ಮನರಂಜನೆಗೆ ಬಳಸಿ ನಾಟಕ ಮಾಡಿದ್ದ. ಅದು ತಪ್ಪು ಎಂದು ಅತನಿಗೆ ಮನವರಿಕೆ ಮಾಡಲು ನಾನು ಹಾಗೆ ನಟಿಸಿದೆ. ಆದ್ರೆ ಪ್ರೊಮೊವನ್ನು ತಪ್ಪು ರೀತಿಯಲ್ಲಿ ಎಡಿಟ್‌ ಮಾಡಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ..