ಬಾಲಿವುಡ್ ನಟ ಸಲ್ಮಾನ್ ಖಾನ್ ಮದುವೆಯಾಗದೇ ಬ್ರಹ್ಮಚಾರಿ ಆಗಿಯೇ ಉಳಿದುಬಿಟ್ಟಿದ್ದಾರೆ. ವಯಸ್ಸು 60 ದಾಟಿದ್ರು ಬಿಟೌನ್ ಭಾಯ್ಜಾನ್ ಮದುವೆ ಗೋಜಿಗೆ ಹೋಗಲಿಲ್ಲ. ಇನ್ನು ಸಲ್ಲು ಲವ್ವಿ ಡವ್ವಿಗೆ ಲೆಕ್ಕವಿಲ್ಲ. ಸಾಕಷ್ಟು ನಟ-ನಟಿಯರು ಜೊತೆ ಅಫೇರ್ ಇತ್ತು. ಸದ್ಯ 'ಕಾಫಿ ವಿತ್ ಕರಣ್' ಸೀಸನ್ 9ರಲ್ಲಿ ಸಲ್ಮಾನ್ ಖಾನ್ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ನೀವು ಇನ್ನೂ ವರ್ಜಿನ್ ಆಗಿದ್ದೀರಾ? ಎನ್ನುವ ಪ್ರಶ್ನೆ ಎದುರಾಗಿದೆ.
ಪ್ರತಿ ಬಾರಿ ಈ ಶೋನಲ್ಲಿ ಕರಣ್ ವಿವಾದಾತ್ಮಕ ಪ್ರಶ್ನೆಗಳಿಂದ ಚರ್ಚೆ ಹುಟ್ಟುಹಾಕುತ್ತಾರೆ. ಈ ಹಿಂದೆ ಕೂಡ ಕೆಲ ನಟ-ನಟಿಯರಿಗೆ ಇಂಥದ್ದೇ ಪ್ರಶ್ನೆಗಳನ್ನು ಕೇಳಿದ್ದರು. ಈ ಹಿಂದೆ ಸಲ್ಲುಗೆ ಇದೇ ಪ್ರಶ್ನೆ ಕೇಳಿದ್ದ ಕರಣ್ ಮತ್ತೆ ಆ ಪ್ರಶ್ನೆ ಕೇಳುತ್ತಿದ್ದಂತೆ "ಕಂಟ್ರೋಲ್, ಯಾ ಬ್ರದರ್, ಕಂಟ್ರೋಲ್" ಎಂದು ಪ್ರತಿಕ್ರಿಯಿಸಿ ಸುಮ್ಮನಾಗಿದ್ದಾರೆ. ಅಂದಹಾಗೆ ಇದು 'ಕಾಫಿ ವಿತ್ ಕರಣ್' ಕೊನೆಯ ಸರಣಿ.
ಸಾಕಷ್ಟು ಇಂಟ್ರೆಸ್ಟಿಂಗ್ ಪ್ರಶ್ನೆಗಳನ್ನು ಸಲ್ಲುಗೆ ಕರಣ್ ಕೇಳಿದ್ದು ಅದಕ್ಕೆ ತಮ್ಮದೇ ಶೈಲಿಯಲ್ಲಿ ಅವರು ಉತ್ತರಿಸಿದ್ದಾರೆ. ಸದ್ಯ ಪ್ರೋಮೊ ಮಾತ್ರ ಬಿಡುಗಡೆ ಆಗಿದೆ. ಕಂಪ್ಲೀಟ್ ಶೋ ನೋಡಲು ಅಭಿಮಾನಿಗಳು ಕಾಯುವಂತಾಗಿದೆ. ಈ ಶೋ ಇಲ್ಲಿ ಮುಗಿಯಬಾರದು ಎಂದು ಕೂಡ ಸಲ್ಮಾನ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಲ್ಲು ಬಳಿಕ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ದಂಪತಿ, ಆಲಿಯಾ ಭಟ್ ಹಾಗೂ ಶಾಹಿನ್ ಭಟ್, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ, ವರುಣ್ ಧವನ್ ಹಾಗೂ ಜಾನ್ವಿ ಕಪೂರ್ ಹೀಗೆ ಸಾಕಷ್ಟು ತಾರೆಯರು ಈ ಸೀಸನ್ನಲ್ಲಿ ಅತಿಥಿಗಳಾಗಿ ಬರಲಿದ್ದಾರೆ.
ಇದೇ ಬುಧವಾರ (ಅಕ್ಟೋಬರ್ 14) ಸಲ್ಮಾನ್ ಖಾನ್ ಕಾಣಿಸಿಕೊಂಡಿರುವ ಮೊದಲ ಎಪಿಸೋಡ್ ಸ್ಟ್ರೀಮಿಂಗ್ ಆಗಲಿದೆ. ಈ ಬಾರಿ ಶೋಗೆ ಬರುವ ಅತಿಥಿಗಳಿಗೆ ಕರಣ್ ಜೋಹರ್ ಏನೆಲ್ಲಾ ಪ್ರಶ್ನೆಗಳನ್ನು ಕೇಳ್ತಾರೆ ಅದಕ್ಕೆ ಏನೆಲ್ಲಾ ಉತ್ತರ ಬರಬಹುದು ಎನ್ನುವ ಕುತೂಹಲ ಮೂಡಿದೆ. ಸಾಮಾನ್ಯವಾಗಿ ಬಾಲಿವುಡ್ ತಾರೆಯರು ಈ ಶೋನಲ್ಲಿ ಭಾಗವಹಿಸಿದ್ದಾರೆ. ಆದರೆ ದಕ್ಷಿಣದಿಂದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಕೂಡ ಹಾಜರಾಗುತ್ತಿರುವುದು ವಿಶೇಷ.
ಸಲ್ಲುಮಿಯಾ ಸೋಲಿನ ಸುಳಿಗೆ ಸಿಲುಕಿದ್ದಾರೆ. ಅವರು ನಟಿಸೋ ಸಿನಿಮಾಗಳು ಮೊದಲಿನ ರೀತಿ ಸದ್ದು ಮಾಡ್ತಿಲ್ಲ. 'ಮಾತೃಭೂಮಿ' ಎಂಬ ಸಿನಿಮಾ ಮೂಲಕ ಕಂಬ್ಯಾಕ್ ಮಾಡೋಕೆ ಸಿದ್ಧತೆ ನಡೆಸುತ್ತಿದ್ದಾರೆ. 'ಮಾನ್ಸ್ಟರ್' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.
The real hamper? Bhai on the couch 😎☕️
— JioHotstar Reality (@HotstarReality) October 13, 2026
Catch the first episode of the last season tomorrow at 7 PM, only on The Peacock Hub On JioHotstar.#KWKS9OnJioHotstar #KaranJohar @AdarPoonawalla @apoorvamehta18 @aneeshabaig #NishantNayak @manumaharshi @Dharmatic_ pic.twitter.com/vUsP6fXqJl