ಬಾಲಿವುಡ್ ತಾರೆಯರು ಬಹಳ ಸಡಗರ ಸಂಭ್ರಮದಿಂದ ಗಣೇಶ ಹಬ್ಬ ಆಚರಿಸಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಸ್ಟಾರ್ ನಟರೆಲ್ಲಾ ಮತ ಭೇದವಿಲ್ಲದೇ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸುತ್ತಾರೆ. ಬಾಲಿವುಡ್ ನಟ ಸೈಫ್ ಅಲಿಖಾನ್ ಮನೆಯಲ್ಲೂ ಈ ಬಾರಿ ಗಜಮುಖನನ್ನು ಪ್ರತಿಷ್ಠಾಪಿಸಿ ಪ್ರಾರ್ಥಿಸಿದ್ದಾರೆ. ಅದರ ಸಣ್ಣ ಝಲಕ್ ಅನ್ನು ಕರೀನಾ ಕಪೂರ್ ಹಂಚಿಕೊಂಡಿದ್ದಾರೆ.
ವಿನಾಯಕ ಮೂರ್ತಿಯನ್ನು ತಂದು ಮನೆಯಲ್ಲಿ ಪ್ರತಿಷ್ಠಾಪಿಸಿ ಸೈಫ್- ಕರೀನಾ ದಂಪತಿ ಸಡಗರ ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ. ಅಷ್ಟೇ ಅಲ್ಲ ಅಪ್ಪ ಸೈಫ್ ಅಲಿಖಾನ್ ಜೊತೆ ಸೇರಿ ಮಗ ಜೆಹ್ ಮಣ್ಣಿನಿಂದ ಪುಟ್ಟ ಗಣಪತಿ ಮೂರ್ತಿ ತಯಾರಿಸಿದ್ದಾನೆ. ಕರೀನಾ ಆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಟಿಯರಾದ ಅನನ್ಯಾ ಪಾಂಡೆ, ಶಾರ್ವರಿ, ಕಾಜಲ್, ನಟರಾದ ಸುನೀಲ್ ಶೆಟ್ಟಿ, ಸೋನು ಸೂದ್, ಜಾಕಿಶ್ರಾಫ್, ರಿತೇಶ್- ಜೆನಿಲಿಯಾ ದಂಪತಿ ಸೇರಿದಂತೆ ಬಾಲಿವುಡ್ ತಾರೆಯರ ಮನೆಗಳಲ್ಲಿ ಗಣೇಶ ಹಬ್ಬದ ಸಡಗರ ಕಳೆಕಟ್ಟಿತ್ತು. ನಟಿ ಕಾಜಲ್ ಮಗಳು ಕೊಟ್ಟ ಸೀರೆಯನ್ನು ಉಟ್ಟು ಹಿರಿ ಹಿರಿ ಹಿಗ್ಗಿದ್ದಾರೆ.