ತಮಿಳುನಾಡು ಮೂಲದ ನಟಿ ಸಾಯಿ ಪಲ್ಲವಿ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರ್ತಿಸಿಕೊಂಡಿದ್ದಾರೆ. 'ರಾಮಾಯಣ' ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಆಕೆಯ ಕೆಲ ಸಿನಿಮಾಗಳು ಡಬ್ ಆಗಿ ಬಿಡುಗಡೆಯಾಗಿದೆ. 'ರಾಮಾಯಣ' ಚಿತ್ರದಲ್ಲಿ ಸೀತೆಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಚಿತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಬಡಗ ಸಮುದಾಯಕ್ಕೆ ಸೇರಿದವರು ಸಾಯಿ ಪಲ್ಲವಿ. ತಮಿಳು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಹೆಜ್ಜೆ ಹಾಕುತ್ತಿದ್ದ ಚೆಲುವೆ ತಮಿಳಿನಲ್ಲಿ ಒಂದೆರಡು ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು. ಬಳಿಕ ಮಲಯಾಳಂನ 'ಪ್ರೇಮಂ' ಚಿತ್ರದ ಮೂಲಕ ಮೋಡಿ ಮಾಡಿದ್ದರು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಗೆದ್ದರು. ತೆಲುಗಿನ 'ಜಯಮ್ಮು ನಿಶ್ಚಯಮುರಾ' ಸಂದರ್ಶನ ಕಾರ್ಯಕ್ರಮದಲ್ಲಿ ಸಾಯಿ ಪಲ್ಲವಿ ಭಾಗವಹಿಸಿದ್ದಾರೆ. ಜಗಪತಿ ಬಾಬು ನಿರೂಪಣೆ ಮಾಡುವ ಕಾರ್ಯಕ್ರಮ ಇದು. ಈ ವೇಳೆ ಸಾಯಿಪಲ್ಲವಿ ಯಾವೆಲ್ಲಾ ಭಾಷೆ ಮಾತನಾಡುತ್ತಾರೆ ಎನ್ನುವ ಪ್ರಶ್ನೆ ಎದುರಾಗಿದೆ.
ಸಾಯಿ ಪಲ್ಲವಿ ಮಾತನಾಡಿ ಬಡಗ ಭಾಷೆ ಮಾತನಾಡ್ತೀನಿ. ತಮಿಳು ಗೊತ್ತು. ತೆಲುಗು ಹಾಗೂ ಮಲಯಾಳಂ ಒಂದು ಹಂತಕ್ಕೆ ಮಾತನಾಡಬಲ್ಲೆ ಎಂದಿದ್ದಾರೆ. ಯಾವುದಾದರೂ ಒಂದು ಸಾಲನ್ನು ಎಲ್ಲಾ ಭಾಷೆಗಳಲ್ಲಿ ಹೇಳಿ ಅಂದಾಗ ಸಾಯಿ ಪಲ್ಲವಿ ಒಂದೊಂದೇ ಭಾಷೆಯಲ್ಲಿ ಹೇಳಿದ್ದಾರೆ. ಕೊನೆಗೆ ನಿರೂಪಕ ಜಗಪತಿ ಬಾಬು "ಕನ್ನಡದಲ್ಲಿ" ಎನ್ನುತ್ತಿದ್ದಂತೆ.. ಸಾಯಿ ಪಲ್ಲವಿ "ಐ ಡೋಂಟ್ ನೋ" ಎಂದು ಬಹಳ ಆಟಿಟ್ಯೂಡ್‌ನಿಂದ ಹೇಳಿದ್ದಾರೆ. ನೆನಪಿಟ್ಟುಕೊಳ್ಳಿ "ಐ ಡೋಂಟ್ ನೋ" ಎಂದು ಜಗಪತಿ ಬಾಬು ದನಿಗೂಡಿಸಿದ್ದಾರೆ. ಈ ವೀಡಿಯೋ ವೈರಲ್ ಆಗ್ತಿದೆ.
ಸಾಯಿ ಪಲ್ಲವಿಗೆ ಕನ್ನಡ ಗೊತ್ತಿಲ್ಲ ಓಕೆ. ಆದರೆ ಅದನ್ನು ಹೇಳುವ ಪರಿ ಯಾಕೋ ಅತಿಯಾಯ್ತು.. ಕನ್ನಡ ಗೊತ್ತಿಲ್ಲ, ಕಲಿತ್ತೀನಿ ಎಂದು ಹೇಳಿದ್ದರು ಪರವಾಗಿಲ್ಲ. ಬಹಳ ಉಡಾಫೆಯಾಗಿ ಮಾತನಾಡಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೇ ವಿಚಾರವನ್ನು ಇಟ್ಟುಕೊಂಡು ಪರಭಾಷಾ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಬಡಗ ಹಾಗೂ ಕನ್ನಡಕ್ಕೆ ಹತ್ತಿರದ ನಂಟಿದೆ. ಹಾಗಾಗಿ "ಒಲ್ಲೆಂಗೆ ಇದ್ದಿಯಾ" ಎನ್ನುವುದು ಹೆಚ್ಚು ಕಮ್ಮಿ ಕನ್ನಡಕ್ಕೆ ಹತ್ತಿರವಾಗಿದೆ. ಹಾಗಾಗಿ ಆಕೆ ಕನ್ನಡ ಕಲಿಯುವುದು ಕೂಡ ಸುಲಭ. ಆಕೆ ಕಲಿಯಲಿ ಬಿಡಲಿ ಆದರೆ ಆ ಜಂಭದ ಮಾತು ಬೇಕಿರಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
Kannada is probably the easiest other language for her to pick up as a Badaga speaker.
— Sree Harsha (@AapathBandhava) October 19, 2026
Its totally her choice which language she speaks but her answer felt arrogant when Kannada topic came up pic.twitter.com/hmrCNDTxT9