ಬಿಗ್‌ಬಾಸ್ ಫೇಮ್ ಸ್ಪಂದನಾ ಸೋಮಣ್ಣ ಮದುವೆಗೆ ಸಿದ್ಧತೆ ನಡೀತಿದೆ. ಇತ್ತೀಚೆಗೆ ಆಕೆ ತಮ್ಮ ಪ್ರೀತಿಯ ವಿಷಯ ಹಂಚಿಕೊಂಡಿದ್ದರು. ಪ್ಯಾರಿಸ್‌ನಲ್ಲಿ ವರುಣ್ ಮುನಿರಾಜು ಪ್ರಪೋಸ್ ಮಾಡಿದ್ದ ಫೋಟೊಗಳನ್ನು ಹಂಚಿಕೊಂಡಿದ್ದರು. ಇಬ್ಬರು ಮದುವೆ ಆಗುತ್ತಿರುವುದಾಗಿ ಹೇಳಿದ್ದರು.
ಇದೀಗ ವೀಡಿಯೋ ಮಾಡಿ ಮಾತನಾಡಿರುವ ಸ್ಪಂದನಾ ತಮ್ಮಿಬ್ಬರ ಪರಿಚಯ, ಸ್ನೇಹ ಹಾಗೂ ಪ್ರೀತಿ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ರು, ಆ ಸಮಯದಲ್ಲಿ ಪರಿಚಯವೇ ಇರಲಿಲ್ಲ. ಕೋವಿಡ್ ಸಮಯದಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಇಬ್ಬರ ಪರಿಚಯ, ಸ್ನೇಹ ಶುರುವಾಯ್ತು ಎಂದು ಸ್ಪಂದನಾ ನೆನಪಿಸಿಕೊಂಡಿದ್ದಾರೆ.
"ನಾಬಿಬ್ಬರು ಕಾಲೇಜಿನಲ್ಲಿ ಮಾತಾಡಿರಲಿಲ್ಲ. ಕೋವಿಡ್ ಸಮಯದಲ್ಲಿ ಪರಿಚಯವಾಯ್ತು. ಆರು ವರ್ಷಗಳ ಕಾಲ ಬಹಳ ಲಾಂಗ್ ಡಿಸ್ಟೆನ್ಸ್ ಇತ್ತು..ಆತ ವಿದೇಶದಲ್ಲಿದ್ದ.. ಪದೇ ಪದೆ ಭೇಟಿ ಸಾಧ್ಯವಾಗುತ್ತಿರಲಿಲ್ಲ. ನಾನು ಯಾರು, ಏನು, ನನ್ನ ಐಡೆಂಟಿಟಿ ಏನು ಎಂದು ಗೊತ್ತಿಲ್ಲದ ಸಮಯದಲ್ಲಿ ಪರಿಚಯವಾಯ್ತು. ನಾನು ಬಣ್ಣದಲೋಕದಲ್ಲಿ ಗುರ್ತಿಸಿಕೊಳ್ಳಲು ಕಷ್ಟಪಡುತ್ತಿದ್ದೆ. ಆಗ ವರುಣ್ ಬೆಂಬಲಕ್ಕೆ ನಿಂತರು ಎಂದು ಸ್ಪಂದನಾ ಮೆಲುಕು ಹಾಕಿದ್ದಾರೆ.
ನಾನು ಆಡಿಷನ್ ಅದು ಇದು ಎಂದು ಓಡಾಡುತ್ತಿದ್ದ ಸಮಯದಲ್ಲಿ ಅವ್ನು ಎಂಎಸ್ ಮುಗಿಸಿದ್ದ. ಕೆಲಸಕ್ಕಾಗಿ ನೆದರ್‌ಲ್ಯಾಂಡ್ ಹೋಗಬೇಕಿತ್ತು.. ಕೋವಿಡ್ ಕಾರಣ ಅದು ಸಾಧ್ಯವಾಗುತ್ತಿರಲಿಲ್ಲ. ಮುಂದೇನು ಎನ್ನುವ ಗೊಂದಲದಲ್ಲಿ ಇದ್ದಾಗ ಇಬ್ಬರು ಮೀಟ್ ಮಾಡಿದ್ದು. 'ಕರಿಮಣಿ' ಧಾರಾವಾಹಿ ಆಡಿಷನ್‌ಗೂ ವರುಣ್ ನನ್ನನ್ನು ಕರ್ಕೊಂಡ್ ಬಂದಿದ್ದ. ನನ್ನ ಆಪ್ತರಿಗೂ ಈ ವಿಷಯ ಗೊತ್ತಿರಲಿಲ್ಲ. ನಾವು ಡೇಟಿಂಗ್ ಶುರು ಮಾಡಿದ ಮೂರ್ನಾಲ್ಕು ತಿಂಗಳಿಗೂ ವೀಸಾ ಸಿಕ್ಕಿ ವರುಣ್ ವಿದೇಶಕ್ಕೆ ಹೋದ. ನನ್ನ ಪ್ರತಿ ಹುಟ್ಟುಹಬ್ಬಕ್ಕೆ ಇಲ್ಲಿದೆ ಬರ್ತಿದ್ದ ಎಂದು ಭಾವಿಪತಿ ಬಗ್ಗೆ ವಿವರಿಸಿದ್ದಾರೆ.
ಬಹಳ ಶೀಘ್ರದಲ್ಲೇ ಕೆಲವೇ ದಿನಗಳಲ್ಲಿ ನಮ್ಮ ಮದುವೆ ಎಂದು ಸ್ಪಂದನಾ ತಿಳಿಸಿದ್ದಾರೆ. ಬಿಗ್‌ಬಾಸ್ 12ರಲ್ಲಿ 98 ದಿನಗಳ ಕಾಲ ಸ್ಪಂದನಾ ದೊಡ್ಮನೆ ಒಳಗೆ ಇದ್ದರು. ಬಿಗ್‌ಬಾಸ್ ಮನೆಯಲ್ಲಿ ಇದ್ದಾಗ 100 ದಿನಗಳ ಕಾಲ ಫೋನ್ ಇಲ್ಲದೇ ಅವನ ಜೊತೆ ಮಾತನಾಡಲು ಸಾಧ್ಯವಾಗದೇ ಕಷ್ಟಪಟ್ಟಿದ್ವಿ. ಐಫಿಲ್ ಟವರ್ ಮುಂದೆ ಫೋಟೊಶೂಟ್ ಮಾಡುವಾಗ ಅನುಮಾನ ಇತ್ತು. ಅವ್ನು ಕ್ಯಾಮರಾ ಮುಂದೆ ಪ್ರಪೋಸ್ ಮಾಡಲ್ಲ ಎಂದುಕೊಂಡಿದ್ದೆ. ಆದ್ರೆ ಬಹಳ ಚೆನ್ನಾಗಿ ಆಯ್ತು ಎಂದು ವಿವರಿಸಿದ್ದಾರೆ.