ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಇನ್ನೆರಡು ವಾರಗಳಲ್ಲಿ ಬಿಡುಗಡೆ ಆಗಲಿದೆ. ದಸರಾ ಸಂಭ್ರಮದಲ್ಲೇ ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ. ಸದ್ಯ ಚಿತ್ರದ ಪ್ರೀ ರಿಲೀಸ್ ಬ್ಯುಸಿನೆಸ್ ಜೋರಾಗಿದೆ. ಆಂಧ್ರ, ತೆಲಂಗಾಣ, ಕೇರಳಂ ಹಾಗೂ ಉತ್ತರ ಭಾರತದಲ್ಲಿ ಸಿನಿಮಾ ವಿತರಕರು ಯಾರು ಎನ್ನುವುದು ಖಚಿತವಾಗಿದೆ.
ಬಹುಕೋಟಿ ವೆಚ್ಚದಲ್ಲಿ ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ತೆರೆಗೆ ಬರಲಿದೆ. ಸೀತಾಪಹರಣದವರೆಗಿನ ಕಥೆಯನ್ನು ಮೊದಲ ಭಾಗದಲ್ಲಿ ಕಟ್ಟಿಕೊಡಲಾಗ್ತಿದೆ. ಈಗಾಗಲೇ ಟ್ರೈಲರ್, ಸಾಂಗ್ಸ್ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಇದು ನಮ್ಮ ಕಥೆ, ಶ್ರೀರಾಮನ ಗಾಥೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಹಾಗಾಗ ದೇಶವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.
ವಿತರಕರು ಯಾರು ?
ದೊಡ್ಡ ಸಿನಿಮಾಗಳಿಗೆ ಆಯಾ ರಾಜ್ಯಗಳಲ್ಲಿ ವಿತರಕರು ಯಾರು ಎನ್ನುವುದು ಮುಖ್ಯವಾಗುತ್ತದೆ. ಭರ್ಜರಿ ವ್ಯಾಪಾರಕ್ಕೂ ಇದು ಅಗತ್ಯ. ದೊಡ್ಡ ಸಂಸ್ಥೆಗಳು ರೈಟ್ಸ್ ಕೊಂಡುಕೊಂಡರೆ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಪ್ರಯತ್ನ ಮಾಡುತ್ತಾರೆ. ಆಂಧ್ರ, ತೆಲಂಗಾಣದಲ್ಲಿ ದಿಲ್ ರಾಜು ಒಡೆತನದ SVC ಸಂಸ್ಥೆ ಸಿನಿಮಾ ಬಿಡುಗಡೆ ಮಾಡಲಿದೆ. ಅದೇ ರೀತಿ ಕರಣ್ ಜೋಹರ್ ನೇತೃತ್ವದ ಧರ್ಮ್ ಪ್ರೊಡಕ್ಷನ್ಸ್ ಸಂಸ್ಥೆ ಉತ್ತರ ಭಾರತದಲ್ಲಿ ಸಿನಿಮಾ ಬಿಡುಗಡೆ ಮಾಡಲಿದೆ. ಕೇರಳಂನಲ್ಲಿ AVA ಸಂಸ್ಥೆ ಭರ್ಜರಿಗೆ ಬೆಲೆಗೆ ರೈಟ್ಸ್ ಸ್ವಂತ ಮಾಡಿಕೊಂಡಿದೆ.
ಕರ್ನಾಟಕದಲ್ಲಿ ಯಾರು ?
ಕೆವಿಎನ್ ಪ್ರೊಡಕ್ಷನ್ ಜೊತೆ ಸೇರಿ ಯಶ್ ತಮ್ಮ ಮಾನ್ಸ್ಟರ್ ಮೈಂಡ್ಸ್ ಕ್ರಿಯೇಷನ್ ಸಂಸ್ಥೆ ಮೂಲಕ ಕರ್ನಾಟಕದಲ್ಲಿ 'ರಾಮಾಯಣ' ಸಿನಿಮಾ ಬಿಡುಗಡೆ ಮಾಡಲಿದೆ. ಸೋನಿ ಪಿಕ್ಚರ್ಸ್ ಸಂಸ್ಥೆ ವಿದೇಶಗಳಲ್ಲಿ ನಮ್ಮ ಪೌರಾಣಿಕ ಕಥಾಹಂದರದ ಚಿತ್ರವನ್ನು ತೆರೆಗೆ ತರಲಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ನವೆಂಬರ್ 5ರಂದು ತೆರೆಮೇಲೆ ಈ ದೃಶ್ಯಕಾವ್ಯಾ ಅನಾವರಣ ಆಗಲಿದೆ.
ಪ್ರೀ ರಿಲೀಸ್ ಈವೆಂಟ್
ಇತ್ತೀಚೆಗೆ ಬೆಂಗಳೂರಿನಲ್ಲಿ 'ರಾಮಾಯಣ' ಚಿತ್ರದ ಈವೆಂಟ್ ಮಾಡಿ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದರು. ಇವತ್ತು(ಅಕ್ಟೋಬರ್ 19) ಹೈದರಾಬಾದ್ನಲ್ಲಿ ಪ್ರೀ ರಿಲೀಸ್ ಈವೆಂಟ್ ನಡೀತಿದೆ. ಈಗಾಗಲೇ ಚಿತ್ರತಂಡ ಅಲ್ಲಿಗೆ ಹೊರಟಿದೆ. ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.