ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' ಸಿನಿಮಾ ದಾಖಲೆಗಳ ಪರ್ವ ಮುಂದುವರೆದಿದೆ. ವಿಶ್ವದಾದ್ಯಂತ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಇನ್ನು ಹಲವು ದೇಶಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಕರ್ನಾಟಕದಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡಿ ಸಿನಿಮಾ ಗಮನ ಸೆಳೆದಿದೆ.

11 ದಿನಕ್ಕೆ ಸಿನಿಮಾ 1300 ಕೋಟಿ ರೂ. ಗಡಿ ದಾಟಿದೆ. ಎರಡನೇ ವಾರಾಂತ್ಯದಲ್ಲೇ 185 ಕೋಟಿ ಕೊಳ್ಳೆ ಹೊಡೆದಿದೆ. ಭಾರತದಲ್ಲಿ ಮಾತ್ರ 760.60 ಕೋಟಿ ರೂ. ಗಳಿಕೆ ಕಂಡು 'ರಾಮಾಯಣ' ಸಿನಿಮಾ ಸಂಚಲನ ಸೃಷ್ಟಿಸಿದೆ. ಒಟ್ಟು ಈವರೆಗೆ ವಿಶ್ವದಾದ್ಯಂತ 1,384.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಅಂದಾಜಿಸಲಾಗ್ತಿದೆ.

'RRR' ದಾಖಲೆ ಉಡೀಸ್

ರಾಜಮೌಳಿ ನಿರ್ದೇಶನದ ಮಲ್ಟಿಸ್ಟಾರರ್ 'RRR' ಸಿನಿಮಾ 1300 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು. ಕೇವಲ 11 ದಿನದಲ್ಲಿ ಈ ದಾಖಲೆ ಹಿಂದಿಕ್ಕಿ 'ರಾಮಾಯಣ' ಸಿನಿಮಾ ಮುನ್ನುಗ್ಗುತ್ತಿದೆ. ವಾರಾಂತ್ಯದಲ್ಲಿ ಮಾತ್ರವಲ್ಲ ವಾರದ ದಿನಗಳಲ್ಲಿ ಕೂಡ ಸಿನಿಮಾ ಭರ್ಜರಿ ಗಳಿಕೆ ಕಾಣುತ್ತಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಅತಿಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಈಗ ಆರನೇ ಸ್ಥಾನಕ್ಕೇರಿದೆ. ಇವತ್ತೇ 'ಧುರಂಧರ್' ಸಿನಿಮಾ ದಾಖಲೆ ಹಿಂದಿಕ್ಕಲಿದೆ.

ಕರ್ನಾಟಕದಲ್ಲಿ ದಾಖಲೆ

ರಾಜ್ಯದಲ್ಲಿ ಅತಿಹೆಚ್ಚು ಗಳಿಕೆ ಕಂಡ ಬಾಲಿವುಡ್ ಸಿನಿಮಾಗಳ ಪಟ್ಟಿಯಲ್ಲಿ 'ರಾಮಾಯಣ' ಮೊದಲ ಸ್ಥಾನಕ್ಕೇರಿದೆ. 'ಧುರಂಧರ್- 2' ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿತ್ತು. ಯಶ್ ನಟಿಸಿರುವುದು ಸಿನಿಮಾ ಕನ್ನಡಕ್ಕೆ ಡಬ್ ಆಗಿರುವುದು ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಿಸಿದೆ. ಇನ್ನು ಲಿಪ್ ಸಿಂಕ್ ಆಗಿ ಡಬ್ಬಿಂಗ್ ಗುಣಮಟ್ಟ ಚೆನ್ನಾಗಿರುವುದು ಕೂಡ ಕನ್ನಡದಲ್ಲೇ ಹೆಚ್ಚು ಜನ ಸಿನಿಮಾ ನೀಡುವಂತೆ ಮಾಡಿದೆ. ಕನ್ನಡ ವರ್ಷನ್ 75 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಓಟಿಟಿಗೆ ಯಾವಾಗ ?

'ರಾಮಾಯಣ' ಸಿನಿಮಾ ಎರಡು ತಿಂಗಳು ಓಟಿಟಿಗೆ ಬರಲ್ಲ. ಸಂಕ್ರಾಂತಿ ವೇಳೆಗೆ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ. ಸದ್ಯಕ್ಕೆ ಓಟಿಟಿ ರೈಟ್ಸ್ ಡೀಲ್ ನಡೆದಿಲ್ಲ ಎಂದು ತೆಲುಗು ವಿತರಕ ದಿಲ್ ರಾಜು ಸ್ಪಷ್ಟನೆ ನೀಡಿದ್ದಾರೆ.