ರಾಕಿಂಗ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಗ್ಗೆ ನಟಿ ರಿಷಿಕಾ ಸಿಂಗ್ ತಮ್ಮದೇ ಶೈಲಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಯಶ್ ಇಂತಹ ಸಿನಿಮಾ ಮಾಡಿ ತಪ್ಪು ಮಾಡಿದ್ರು ಎನ್ನುವ ಅರ್ಥದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು 'ಟಾಕ್ಸಿಕ್' ಸಿನಿಮಾ ಫಲಿತಾಂಶ ಹಾಗೂ ನೆಗೆಟಿವ್ ಟ್ರೋಲ್ಸ್ ಬಗ್ಗೆ ಯಶ್ ತಾಯಿ ಪುಷ್ಪಾ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದ್ದರು. ಇದೀಗ ಪುಷ್ಪಾ ಅವರಿಗೂ ರಿಷಿಕಾ ಸಿಂಗ್ ಟಾಂಗ್ ಕೊಟ್ಟಿದ್ದಾರೆ.
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಗಳು ರಿಷಿಕಾ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಿಷಿಕಾ ಇತ್ತೀಚೆಗೆ 'ಟಾಕ್ಸಿಕ್' ಸಿನಿಮಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಟ್ರೈಲರ್ ರಿಲೀಸ್ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಮಾತನಾಡಿದ್ದರು. ಇದಕ್ಕೆ ಯಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದರು. ಬಳಿಕ ಇನ್‌ಸ್ಟಾಗ್ರಾಮ್ ಲೈವ್ ಬಂದು ಆಕೆ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದರು.
ಇದೀಗ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ಸುದ್ದಿಗೋಷ್ಠಿ ಬೆನ್ನಲ್ಲೇ ರಿಷಿಕಾ ಸಿಂಗ್ ಹೊಸ ವೀಡಿಯೋ ಹಂಚಿಕೊಂಡಿದ್ದಾರೆ. ಸೆ*.. ವೈಲೆ*..ಸೆ*.. ವೈಲೆ*.. ಅದ್ರಲ್ಲಿ ತಪ್ಪೇನು ಇಲ್ಲ ಬಿಡಿ.. ತಾಯಿ ಬಂದು ಮೀಡಿಯಾ ಮುಂದೆ ಕಿರಿಕಿರಿ.. ಕಲೆನಾ ಜಾತಿ ಮತದಲ್ಲಿ ಅಳಿತ್ತಿದ್ದಾರೆ ಕಣ್ರೀ.. ಈ ಮಹಾತಾಯಿ ಹೇಳುವುದೆಲ್ಲಾ ಸಿದ್ಧಾಂತ.. ಮಾಡುವುದೆಲ್ಲಾ ರಾದ್ಧಾಂತ ಕಣ್ರೀ.. ಕನ್ನಡ ಚಿತ್ರರಂಗಕ್ಕೆ ನಮ್ಮ ಸೇವೆ ನಿರಂತರ.. ಬೇರೆ ಭಾಷೆಯಲ್ಲಿ ಸ್ಟಾರ್ ಆಗುವುದು ಅದು ಅನಾಚಾರ.. ಸ್ವಲ್ಪ ತಿಳ್ಕೊಳ್ಳಿಮಾ ಆಚಾರ ವಿಚಾರ.. ಸ್ಟಾರ್ಸ್ ಬೆಂಬಲ, ಒಬ್ಬರಿಂದ್ಲೂ ಗುಡ್‌ಲಕ್ ವಿಶಸ್ ಬರಲಿಲ್ಲ.. ಸಿನ್ಮಾ ತೆರೆಕಾಣುವ ಮುನ್ನ ಇವ್ರೆಲ್ಲಾ ಎಲ್ಲಿ ಹೋಗಿದ್ರೋ ಕೇಳಿ ಒಂದ್ಸಲ್ಲ.. ಈಗ ಸೋಲಿನ ಬೆಂಕಿಗೆ ಸಪೋರ್ಟ್ ಅಂತ ತುಪ್ಪ ಸುರಿಯುವ ನಾಟಕ.. ನೀವೇನಲ್ಲ ಸಾಚಾ.. ಇದನ್ನೆಲ್ಲಾ ತುಂಬಾ ನೋಡಿದ್ದೀವಿ ಬಿಡು ಮಚ್ಚಾ" ಎಂದು ರಿಷಿಕಾ ಹೇಳಿರುವುದು ವೈರಲ್ ಆಗ್ತಿದೆ.