ವಿವಾದಾತ್ಮಕ ಹೇಳಿಕೆಗಳಿಂದ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸುದ್ದಿಯಲ್ಲಿ ಇರ್ತಾರೆ. ಒಂದ್ಕಾಲದಲ್ಲಿ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ ವರ್ಮಾ ಈಗ ಸೋಶಿಯಲ್ ಮೀಡಿಯಾಗೆ ಸೀಮಿತ ಆಗಿಬಿಟ್ಟಿದ್ದಾರೆ. 'ಟಾಕ್ಸಿಕ್' ಸಿನಿಮಾ ವ್ಯಂಗ್ಯ ಮಾಡಿ ಟ್ವೀಟ್ ಮಾಡುತ್ತಿದ್ದ ಆರ್‌ಜಿವಿ ಈಗ 'ರಾಮಾಯಣ' ಚಿತ್ರವನ್ನು ಹಾಡಿ ಕೊಂಡಾಡುತ್ತಿದ್ದಾರೆ.
ದಿನಕ್ಕೊಂದು ಟ್ವೀಟ್ ಮಾಡಿ 'ರಾಮಾಯಣ' ಚಿತ್ರದ ಬಗ್ಗೆ ಕಲಾವಿದರ ನಟನೆ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಸಿನಿಮಾ ಕ್ರೇಜ್, ಬಜೆಟ್ ಬಗ್ಗೆ ಕೂಡ ಟ್ವೀಟ್ ಮಾಡಿದ್ದಾರೆ. "'ರಾಮಾಯಣ' ಚಿತ್ರಕ್ಕೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುವ ಕೆಲಸಗಾರರಿಗೆಲ್ಲಾ ನಮ್ಮಮ್ಮ ಟಿಕೆಟ್ ಕೊಡ್ಸಿದ್ದಾರೆ. ನನ್ನ ಸಿನಿಮಾಗಳಿಗೂ ಅವ್ರು ಹೀಗೆ ಮಾಡಲ್ಲ. ಈ ರೀತಿಯ ಸಂಭ್ರಮವು ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಈ ಸಿನಿಮಾ ಮುರಿಯಲು ಕಾರಣವಾಗಿದೆ. 2000 ಕೋಟಿ ರೂಪಾಯಿ ಬಜೆಟ್ ಸಿನಿಮಾ ಗಳಿಸುತ್ತಿರುವುದು ಏನೇನು ಅಲ್ಲ ಎಂದು ಕೆಲವರು ಅಸೂಯೆಪಡುತ್ತಿದ್ದಾರೆ" ಎಂದು ವರ್ಮಾ ಬರೆದುಕೊಂಡಿದ್ದಾರೆ.
ನನಗೆ ಗೊತ್ತಿರುವ ಪ್ರಕಾರ 'ರಾಮಾಯಣ- 1' ಬಜೆಟ್ 800 ಕೋಟಿ ರೂಪಾಯಿಗಿಂತ ಕಮ್ಮಿ ಎಂದು ಆರ್‌ಜಿವಿ ಅಭಿಪ್ರಾಯಪಟ್ಟಿದ್ದಾರೆ. "ಪರಸ್ಪರ ಲಾಭದಾಯಕ ಒಪ್ಪಂದಗಳು, ಜಾಗತಿಕ ತೆರಿಗೆ ವಿನಾಯಿತಿಗಳು ಮತ್ತು ಸಬ್ಸಿಡಿಗಳಂತಹ ಅಂಶಗಳು ಸೇರಿವೆ. ಇದರಿಂದ ವೆಚ್ಚ ಇನ್ನು ಕಮ್ಮಿ ಆಗಿರುತ್ತೆ. ಈ ಚಿತ್ರವನ್ನು ನೋಡಿದರೆ ಇದರ ವೆಚ್ಚ ಅದಕ್ಕಿಂತ ಹೆಚ್ಚಿರಲು ಸಾಧ್ಯವಿಲ್ಲ ಎನ್ನುವುದು ಗೊತ್ತಾಗುತ್ತದೆ. ಎರಡೂ ಭಾಗಗಳ ವೆಚ್ಚ ಒಂದೇ ಆಗಿರುತ್ತದೆ ಎಂದು ಭಾವಿಸುವುದು ಮೂರ್ಖತನ. ಸಿನಿಮಾ ಫಸ್ಟ್ ಹಾಫ್, ಸೆಕೆಂಡ್ ಹಾಫ್ ಬಜೆಟ್ ಸಮ ಎಂದುಕೊಳ್ಳುವಂತಾಗುತ್ತೆ. ಕೆಲ ಸಿನಿಮಾ ಅರ್ಧ ಬಜೆಟ್ ಬರೀ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಖರ್ಚಾಗಿರುತ್ತದೆ" ಎಂದು ವಿವರಿಸಿದ್ದಾರೆ.
'ರಾಮಾಯಣ'ದ ಜಗತ್ತನ್ನು ಸೃಷ್ಟಿಸಲು ಸಾಕಷ್ಟು ವೆಚ್ಚವಾಗಿದೆ. ಇದು ಗೇಮಿಂಗ್ ಸೇರಿದಂತೆ ಭವಿಷ್ಯದ ವಿವಿಧ ಮೂಲಗಳ ಆಸ್ತಿಯಾಗಲಿದೆ. ಇದರಲ್ಲಿ ಚಿತ್ರದ 2ನೇ ಭಾಗಕ್ಕೆ ಸಿದ್ಧತೆಗಳೂ ಸೇರಿವೆ. ಇವೆಲ್ಲವೂ ನಮಿತ್ ಅವರ ದೂರದೃಷ್ಟಿಯ ಯೋಜನೆಗಳ ಭಾಗವಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ವಿಷಯವನ್ನು ಬಹುತೇಕ ಬಾಲಿವುಡ್‌ನವರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ನನಗೆ ಅನ್ನಿಸುತ್ತದೆ ಎಂದು ರಾಮ್ ಗೋಪಾಲ್ ವರ್ಮಾ ವಿವರಿಸಿದ್ದಾರೆ.
ರಾಮ್‌ಗೋಪಾಲ್ ವರ್ಮಾ ಟ್ವೀಟ್ ವೈರಲ್ ಆಗ್ತಿದೆ. Faridoon Shahryar ಪಾಡ್‌ಕಾಸ್ಟ್‌ನಲ್ಲಿ ಕೂಡ 'ರಾಮಾಯಣ' ಸಿನಿಮಾ ಬಗ್ಗೆ ವರ್ಮಾ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ.
Even for the best of my films she din’t do this , but my mother has been buying tickets of @malhotra_namit ‘s #Ramayana for the servants , watch men etc in the building complex she lives , and inspite of this kind of euphoria leading it to breaking all box office records and…
— Ram Gopal Varma (@RGVzoomin) November 15, 2026