ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ನಗರದ 59ನೇ ಸಿಸಿಹೆಚ್ ಕೋರ್ಟ್ನಲ್ಲಿ ನಡೀತಿದೆ. ಪ್ರಕರಣ ಸಂಬಂಧ ಪ್ರತ್ಯಕ್ಷ್ಯ ಸಾಕ್ಷಿ ಪುನೀತ್ ಎಂಬಾತ ವಿಚಾರಣೆ ವೇಳೆ ಉಲ್ಟಾ ಹೊಡೆದಿರುವುದು ಭಾರೀ ಕುತೂಹಲ ಮೂಡಿಸಿದೆ.
ಪಟ್ಟಣಗೆರೆ ಶೆಡ್ ಬಳಿ ಏನೆಲ್ಲಾ ಆಯ್ತು ಎನ್ನುವುದಕ್ಕೆ ಪುನೀತ್ ಪ್ರತ್ಯಕ್ಷ್ಯ ಸಾಕ್ಷಿ ಆಗಿದ್ದನು. ಅವತ್ತು ಶೆಡ್ ಬಳಿ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ ಯಾವುದೇ ಆರೋಪಿಗಳು ಬಂದಿರಲಿಲ್ಲ ಎಂದು ಎಂದಿದ್ದಾನೆ. ಇನ್ನು ಪುನೀತ್ ಕೋರ್ಟ್ನಲ್ಲಿ ಸಾಕ್ಷಿ ಹೇಳುವಾಗ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಅವರಲ್ಲಿ ಯಾರೊಬ್ಬರನ್ನು ನಾನು ಘಟನಾ ಸ್ಥಳದಲ್ಲಿ ನೋಡಿರಲಿಲ್ಲ ಎಂದಿರುವುದ ಭಾರೀ ತಿರುವು ನೀಡಿದೆ.
ಪುನೀತ್ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಎನಿಸಿಕೊಂಡಿದ್ದ. ಈತ ವಿಚಾರಣೆಗೆ ಗೈರಾದ ಕಾರಣ ಆತನ ವಿರುದ್ಧ ಸಮನ್ಸ್ ಜಾರಿ ಮಾಡಿ, ಬಂಧನದ ವಾರೆಂಟ್ ಹೊರಡಿಸಲಾಗಿತ್ತು. ಈಗ ಆತ ವಿಚಾರಣೆಗೆ ಹಾಜರಾಗಿ ಭಿನ್ನ ಹೇಳಿಕೆ ನೀಡಿದ್ದಾನೆ. ನಿನ್ನೆ(ಅಕ್ಟೋಬರ್ 27) ಪ್ರತ್ಯಕ್ಷ ಸಾಕ್ಷಿಯಾಗಿದ್ದ ಪುನೀತ್ ಕೋರ್ಟ್ ವಿಚಾರಣೆಗೆ ಗೈರಾಗಿದ್ದ. ಹಾಗಾಗಿ ಬೆಂಗಳೂರಿನ 24ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಸಾಕ್ಷಿ ಪುನೀತ್ ವಿರುದ್ಧ ಜಾಮೀನು ರಹಿತ ವಾರೆಂಟ್ ನೀಡಿತ್ತು. ಇಂದು ವಿಚಾರಣೆಗೆ ಹಾಜರಾಗಿ ಉಲ್ಟಾ ಹೊಡೆದಿದ್ದಾನೆ. ಇದನ್ನು ನೋಡಿ ಕೇಸ್ ಬಿದ್ದು ಹೋಗುತ್ತದೆ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸ್ತಿದ್ದಾರೆ.
ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿರುವ ಪುನೀತ್ 'ಡಿ ಕಂಪನಿ' ಫ್ಯಾನ್ ಪೇಜ್ ಅಡ್ಮಿನ್ ಕೂಡ ಆಗಿದ್ದ ಎನ್ನಲಾಗ್ತಿದೆ. ಈ ಹಿಂದೆ ನ್ಯಾಯಾಧೀಶರ ಮುಂದೆ ಸಿಆರ್ಪಿಸಿ 164ರ ಅಡಿಯಲ್ಲಿ ನೀಡಿದ್ದ ಹೇಳಿಕೆ ನೀಡಿದ್ದ ಪುನೀತ್ ಇದೀಗ ತಮ್ಮ ಹೇಳಿಕೆ ಬದಲಿಸಿದ್ದಾನೆ. ಹಾಗಾಗಿ ಕೋರ್ಟ್ನಲ್ಲಿ ಆತನನ್ನು ಪ್ರತಿಕೂಲ ಸಾಕ್ಷಿ ಪರಿಗಣಿಸಲಾಗಿದೆ. ಮುಂದೆ ಇನ್ನು ಯಾರೆಲ್ಲಾ ಹೀಗೆ ಉಲ್ಟಾ ಹೊಡೆದು ವಿಚಾರಣೆಗೆ ತಿರುವು ಕೊಡ್ತಾರೆ ಕಾದು ನೋಡಬೇಕಿದೆ.