ರೇಣುಕಾಸ್ವಾಮಿ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ದರ್ಶನ್‌ಗೆ ಸಂಕಷ್ಟ ಹೆಚ್ಚುತ್ತಲೇ ಇದೆ. ಈಗಾಗಲೇ 14ನೇ ಆರೋಪಿ ಪ್ರದೋಶ್ ತಾವು ಅಪ್ರೂವರ್ (ಮಾಫಿ ಸಾಕ್ಷಿ) ಆಗುವುದಾಗಿ ನ್ಯಾಯಲಯದ ಮುಂದೆ ಹೇಳಿರುವುದು ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಂತಾಗಿದೆ. ಮಾಫಿ ಸಾಕ್ಷಿ ತಡೆ ಹಿಡಿಯುವಂತೆ ದರ್ಶನ್ ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗುತ್ತಿದೆ. ಪ್ರದೋಷ್ ಮಾಫಿ ಸಾಕ್ಷಿಗೆ ನ್ಯಾಯಾಲಯ ಒಪ್ಪಿಗೆ ಸೂಚಿಸಿರುವುದು ದರ್ಶನ್‌ಗೆ ನುಂಗಲಾರದ ತುತ್ತಾಗಿದೆ.

59ನೇ ಸಿಸಿಹೆಚ್ ಕೋರ್ಟ್ ಕೋರ್ಟ್ ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿಯನ್ನು ಅಂಗೀಕರಿಸಿದೆ. ದರ್ಶನ್ ಪರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಆದೇಶ ಹೊರಡಿಸಿದ್ದಾರೆ. ಮಾಫಿ ಸಾಕ್ಷಿಗೆ ನಿಮಗೆ ಒಪ್ಪಿಗೆ ಇದ್ಯಾ ಎಂದು ನ್ಯಾಯಾಲಯದಲ್ಲಿ ಪ್ರದೋಶ್‌ಗೆ ನ್ಯಾಯಾಲಯದಲ್ಲಿ ಪ್ರಶ್ನೆ ಎದುರಾಗಿದೆ. ಹೌದು ಎಂದು ಪ್ರದೋಷ್ ಪ್ರತಿಕ್ರಿಯಿಸಿದ್ದಾರೆ. ಅಸೂಯೆ, ಷಡ್ಯಂತ್ರ ಮಾಡಿ ಪೊಲೀಸರು ಪ್ರದೋಶ್ ವಿರುದ್ಧ ಎನ್‌ಸಿಆರ್ ದಾಖಲಿಸಿದ್ದಾರೆ. ಹಾಗಾಗಿ ಮಾಫಿ ಸಾಕ್ಷಿ ಮುಂದೂಡಬೇಕು ಎಂದು ದರ್ಶನ್ ಪರ ವಕೀಲರು ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದರು. ಅದಕ್ಕೆ ನ್ಯಾಯಾಲಯ ಒಪ್ಪಿಲ್ಲ. ಬದಲಿಗೆ 59ನೇ ಸಿಸಿಹೆಚ್ ಕೋರ್ಟ್ ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿಯನ್ನು ಮತ್ತೆ ಒಪ್ಪಿದೆ.

ಮತ್ತೊಂದೆಡೆ ವಿಚಾರಣೆಗೆ ಖುದ್ದು ಹಾಜರಿಗೆ ಮನವಿ ಮಾಡಿ ದರ್ಶನ್ ವಕೀಲರ ಮೂಲಕ ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕೋರ್ಟ್ ಮೂರು ಆಯ್ಕೆ ಕೊಟ್ಟಿತ್ತು. ವೀಡಿಯೋ ಕಾನ್ಫರೆನ್ಸ್‌ ಅನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ. ಎರಡನೇಯದಾಗಿ ಪ್ರಕರಣದ ವಿಚಾರಣೆಯನ್ನು ಪರಪ್ಪನ ಅಗ್ರಹಾರ ಜೈಲು ನ್ಯಾಯಾಲಯದಲ್ಲಿ ನಡೆಸುವುದು. ಮೂರನೆಯದಾಗಿ ಪ್ರಮುಖ ಸಾಕ್ಷಿಗಳ ವಿಚಾರಣೆ ವೇಳೆ ಮಾತ್ರ ದರ್ಶನ್ ಹಾಜರಿಗೆ ಅನುಮತಿ ನೀಡುವ ಸಲಹೆ ನೀಡಿತ್ತು. ಇದಕ್ಕೆ ದರ್ಶನ್ ಪರ ವಕೀಲರು ಒಪ್ಪಿದ್ದಾರೆ.

ಪಾಟೀ ಸವಾಲಿಗೆ ಒಳಪಡಿಸುವ ಮುಖ್ಯ ಸಾಕ್ಷಿಗಳ ವಿವರವನ್ನು ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಮೆಮೋ ಸಲ್ಲಿಸಿದ್ದಾರೆ. ಈ ಸಾಕ್ಷಿಗಳ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಿಗೆ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ. ವಾದ ಮಂಡನೆಗೆ ಅವಕಾಶ ಕೋರಿದ್ದು ಅರ್ಜಿ ವಿಚಾರಣೆ ಸೆಪ್ಟೆಂಬರ್ 18ಕ್ಕೆ ಮುಂದೂಡಲಾಗಿದೆ.