ಯಾವುದೇ ನಿರೀಕ್ಷೆ ಇಲ್ಲದೇ ಬಂದು ಬಾಕ್ಸಾಫೀಸ್ ಶೇಕ್ ಮಾಡಿದ 'ಇರುಮುಡಿ' ಸಿನಿಮಾ ಈಗ ಸಿನಿರಸಿಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಖಚಿತವಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ವೀಕ್ಷಣೆಗೆ ಸಿಗಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಶಿವನಿರ್ವಾಣ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಇರುಮುಡಿ' ಫ್ಯಾಮಿಲಿ ಆಡಿಯನ್ಸ್ ಮನಗೆದ್ದಿತ್ತು. ತಂದೆ ಮಗಳ ಬಾಂಧವ್ಯ, ಸ್ತ್ರೀ ಶೋಷಣೆ ವಿರುದ್ಧ ಹೋರಾಟದ ಸಂದೇಶ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಅಂದಾಜು 40 ಕೋಟಿ ರೂ. ಬಜೆಟ್ ಸಿನಿಮಾ ಬರೋಬ್ಬರಿ 200 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಯಶ್ ನಟನೆಯ 'ಟಾಕ್ಸಿಕ್' ಎದುರು ರವಿತೇಜಾ ಸಿನಿಮಾ ಧೂಳೆಬ್ಬಿಸಿತ್ತು.
ಆಗಸ್ಟ್ 21ರಂದು ತೆರೆಗೆ ಬಂದಿದ್ದ 'ಇರುಮುಡಿ' ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿದೆ. ಸೆಪ್ಟೆಂಬರ್ 18ರಂದು ತೆಲುಗು ಜೊತೆಗೆ ತಮಿಳು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ರವಿತೇಜಾ ಜೊತೆಗೆ ಪ್ರಿಯಾ ಭವಾನಿ ಶಂಕರ್, ಸಾಯಿ ಕುಮಾರ್ ಹಾಗೂ ಬಾಲನಟಿ ನಕ್ಷತ್ರ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಕೂಡ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು. 'ಮಲ್ಲೆಪೂಲ ಪಲ್ಲಕ್ಕಿ' ಸಾಂಗ್ ಸೆನ್ಸೇಷನ್ ಅಷ್ಟಿಷ್ಟಲ್ಲ.
ಸತತರ ಸೋಲುಗಳಿಂದ ಕಂಗೆಟ್ಟಿದ್ದ ರವಿತೇಜಾ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಕರ್ನಾಟಕದಲ್ಲಿ ಸಿನಿಮಾ 16 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಆಗಸ್ಟ್ 21ರಂದು 'ಇರುಮುಡಿ' ಸಿನಿಮಾ ಬಿಡುಗಡೆ ಆಗಿತ್ತು. ಆಗಸ್ಟ್ 26ರಂದು ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ತೆರೆಗಪ್ಪಳಿಸಿತ್ತು. ರಾಯನ ಆರ್ಭಟದ ಎದುರು ರವಿತೇಜಾ ಸಿನಿಮಾ ನಿಲ್ಲುವುದಿಲ್ಲ ಎಂದೇ ಕೆಲವರು ಭಾವಿಸಿದ್ದರು. ಆದರೆ 'ಟಾಕ್ಸಿಕ್' ಮಿಶ್ರಪ್ರತಿಕ್ರಿಯೆ ಪಡೆದುಕೊಂಡು ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿತ್ತು.
Mass Maharaja eesari class ga osthunnadu 😍❤️ pic.twitter.com/mINkzpIW0y
— Netflix India South (@Netflix_INSouth) September 14, 2026