ವಿವಾದಗಳೇ ರಶ್ಮಿಕಾ ಮಂದಣ್ಣ ಅವರನ್ನು ಹುಡುಕಿ ಬರುತ್ತೋ, ಇವರೇ ಹುಡುಕಿ ಹೋಗ್ತಾರೋ ಗೊತ್ತಿಲ್ಲ. ಆದರೆ ಒಂದಲ್ಲ ಒಂದು ಕಾರಣಕ್ಕೆ ಕೊಡಗಿನ ಚೆಲುವೆ ಟ್ರೋಲ್ ಆಗುತ್ತಿರುತ್ತಾರೆ. ಕರ್ನಾಟಕ ಸಂಗೀತದ ದಂತಕಥೆ ಹಾಗೂ ಗಾಯಕಿ ಎಂ. ಎಸ್ ಸುಬ್ಬುಲಕ್ಷ್ಮಿ ಜೀವನಾಧರಿತ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಸಿನಿಮಾ ಸೆಟ್ಟೇರಿದೆ. ಮೊದಲ ದೃಶ್ಯಕ್ಕೆ ಕಮಲ್ ಹಾಸನ್ ಕ್ಲ್ಯಾಪ್ ಮಾಡಿ ಚಾಲನೆ ಕೊಟ್ಟಿದ್ದಾರೆ.
'ಎಂಎಸ್' ಟೈಟಲ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ರಾಕ್‌ಲೈನ್ ವೆಂಕಟೇಶ್ ಹಾಗೂ ಅಲ್ಲು ಅರವಿಂದ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಎಂ. ಎಸ್ ಸುಬ್ಬುಲಕ್ಷ್ಮಿ ಪಾತ್ರದಲ್ಲಿ ನಟಿಸೋಕೆ ಸಾಯಿ ಪಲ್ಲವಿ, ವಿದ್ಯಾಬಾಲನ್, ರುಕ್ಮಿಣಿ ವಸಂತ್, ನಿತ್ಯಾ ಮೆನನ್ ಸೇರಿ ಸಾಕಷ್ಟು ನಟಿಯರ ಹೆಸರು ಕೇಳಿಬಂದಿತ್ತು. ಕೊನೆಗೆ ಆ ಅವಕಾಶ ರಶ್ಮಿಕಾ ಪಾಲಾಗಿದೆ. ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಚೆನ್ನೈನ ಮ್ಯೂಸಿಕ್ ಅಕಾಡೆಮಿಯಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ವೇದಿಕೆಯಲ್ಲಿ ರಶ್ಮಿಕಾ ತಮಿಳಿನಲ್ಲೇ ಮಾತನಾಡಿದ್ದರು. ಆದರೆ ಈಗ ಅದು ಟ್ರೋಲ್ ಆಗ್ತಿದೆ.
ರಶ್ಮಿಕಾ ತಮ್ಮ ಕ್ಯೂಟ್ ಕ್ಯೂಟ್ ಮಾತುಗಳಿಂದ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಆಕೆಯ ಮಾತನಾಡುವ ಶೈಲಿ ಕೆಲವರಿಗೆ ಇರಿಸುಮುರಿಸು ತರಿಸುತ್ತದೆ. ಅಷ್ಟು ದೊಡ್ಡ ವೇದಿಕೆಯಲ್ಲಿ ಎಂ. ಎಸ್ ಸುಬ್ಬುಲಕ್ಷ್ಮಿ ಅವರ ಬಗ್ಗೆ ಗಂಭೀರವಾಗಿ ಮಾತನಾಡಬೇಕಿದ್ದ ರಶ್ಮಿಕಾ ನಗು ನಗುತ್ತಾ ಅಭಿಮಾನಿಗಳ ಅರಚಾಟಕ್ಕೆ ಪ್ರತಿಕ್ರಿಯಿಸುತ್ತಾ ಭಾಷಣ ಮಾಡಿದ್ದರು. ಇದನ್ನು ನೋಡಿ ಕೆಲವರು ಟ್ರೋಲ್ ಮಾಡ್ತಿದ್ದಾರೆ. ಎಲ್ಲಿ ಯಾವ ರೀತಿ ಮಾತನಾಡಬೇಕು ಗೊತ್ತಿಲ್ವಾ? ಅಂತಹ ವೇದಿಕೆಯಲ್ಲಿ ಕೊಂಚ ಮೆಚ್ಯೂರ್ಡ್ ಆಗಿ ಆಕೆ ವರ್ತಿಸಬೇಕಿತ್ತು. ಆಕೆಯ ಮಾತಿನ ಶೈಲಿಗೆ ಕಮಲ್ ಹಾಸನ್ ಕೂಡ ಬೇಸರಗೊಂಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ದೊಡ್ಡ ವೇದಿಕೆ, ಅಷ್ಟು ಜನರನ್ನು ನೋಡಿ ರಶ್ಮಿಕಾ ನರ್ವಸ್ ಆಗಿದ್ದರು. ಆಕೆಗೆ ತಮಿಳು ಸ್ಪಷ್ಟವಾಗಿ ಮಾತನಾಡಲು ಬರಲ್ಲ. ಹಾಗಾಗಿ ಭಾಷಣವನ್ನು ಬರೆದುಕೊಂಡು ಬಂದು ಓದಿ ಹೇಳಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲ. ಅಭಿಮಾನಿಗಳು ಹರ್ಷೋದ್ಘಾರ ಮಾಡಿದಾಗ ಆಕೆ ಪ್ರತಿಕ್ರಿಯಿಸಿದ್ದಾರೆ ಅಷ್ಟೆ ಎಂದು ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್ ಸಿನಿಮಾ ತೆರೆಗೆ ಬರಲಿದೆ. ಗೌತಮ್ ತಿನ್ನನೂರಿ ಚಿತ್ರ ನಿರ್ದೇಶನ ಮಾಡ್ತಿದ್ದು ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ.
ಮದುವೆ ಬಳಿಕ ಕೂಡ ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪತಿ ವಿಜಯ್ ದೇವರಕೊಂಡ ಜೊತೆ ಆಕೆ ನಟಿಸಿರುವ 'ರಣಬಾಲಿ' ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ. 'ಮೈಸಾ' ಸೇರಿ ಒಂದಷ್ಟು ಸಿನಿಮಾಗಳು ಆಕೆಯ ಕೈಯಲ್ಲಿವೆ. ಅದೇ ಸಾಲಿಗೆ 'ಎಂಎಸ್' ಸಿನಿಮಾ ಕೂಡ ಸೇರಿಕೊಳ್ತಿದೆ.
Thanks, Amma, for choosing me to be a small part of your life. For that, I will always be grateful to you, Amma. ❤️
— cinee worldd (@Cinee_Worldd) September 16, 2026
— #RashmikaMandanna pic.twitter.com/Lhb2pjS2er