'ಪ್ರೇಮದ ಊರಲಿ' ಚಿತ್ರದ ಪ್ರತಿಯೊಂದು ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಶ್ರೀರಾಮ್, ರಂಗಾಯಣ ರಘು, ತಪಸ್ವಿನಿ ಪೂಣಚ್ಚ, ರಮಿಕಾ ಶಿವು ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಸಂತ ಆಗಿ ರಮಿಕಾ ಹೆಚ್ಚು ಅಂಕ ಗಿಟ್ಟಿಸಿದ್ದಾರೆ. ಇನ್ನು ಕೊಡಗಿನ ತಪಸ್ವಿನಿ ಪೂಣಚ್ಚ ಬಗ್ಗೆ ರಶ್ಮಿಕಾ ಮಂದಣ್ಣ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
"ತಪಸ್ವಿನಿ ನೀವು ಕೊಡಗಿನಿಂದ ಬಂದು ಸಿನಿಮಾ ಮಾಡಿ, ಆ ಸಿನಿಮಾ ಸಖತ್ ಆಗಿರುವುದು ಖುಷಿ ವಿಚಾರ. ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನ್ನಿಸ್ತಿದೆ. ನಿಮಗೆ ಮಾತ್ರ ನನ್ನ ಪ್ರೀತಿ ಮತ್ತು ಅಪ್ಪುಗೆ. ಇದು ಆರಂಭ ಮಾತ್ರ. ನಿಮ್ಮ ಎಲ್ಲಾ ಕನಸುಗಳು ನನಸಾಗಲಿ ಎಂದು ಮನಸಾರೆ ಹಾರೈಸುತ್ತೇನೆ. ಈ ಬಗ್ಗೆ ನನಗೆ ತಿಳಿಸಿದ್ದಕ್ಕೆ, ಮಾತನಾಡುವಂತೆ ಮಾಡಿದ್ದಕ್ಕೆ ಅನುಶ್ರೀ ಅವರೇ ಥ್ಯಾಂಕ್ಯೂ ಸೋ ಮಚ್" ಎಂದು ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿದ್ದರು.
ತಪಸ್ವಿನಿ ಅವರ ಬಗ್ಗೆ ಮೆಚ್ಚಿ ರಶ್ಮಿಕಾ ಪೋಸ್ಟ್ ಮಾಡಿದ್ದು ಸರಿ. ಆದರೆ ಚಿತ್ರತಂಡದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ.. ಕೊನೆ ಪಕ್ಷ 'ಪ್ರೇಮದ ಊರಲಿ' ಚಿತ್ರವನ್ನು ತಮ್ಮ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿಲ್ಲ. ಇದೆಲ್ಲಾ ತಮ್ಮ ಊರಿನ ಹುಡುಗಿ ಎನ್ನುವ ಕಾರಣಕ್ಕೆ ಮಾತ್ರ ರಶ್ಮಿಕಾ ಪೋಸ್ಟ್ ಮಾಡಿದ್ದಾ? ಎನ್ನುವ ಚರ್ಚೆ ಹುಟ್ಟುಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ.
ರಶ್ಮಿಕಾ ಮಂದಣ್ಣ ಪೋಸ್ಟ್‌ಗಳು, ಹೇಳಿಕೆಗಳು ಕೆಲವೊಮ್ಮೆ ಚರ್ಚೆಗೆ ಗ್ರಾಸವಾಗಿರುವುದು ನೋಡಿದ್ದೇವೆ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಕೆಲವರು ಆಕೆಯನ್ನು ವಿರೋಧಿಸುವುದು ಇದೆ. ಆಕೆಯನ್ನು ಕನ್ನಡ ಚಿತ್ರರಂಗದಿಂದಲೇ ಬ್ಯಾನ್ ಮಾಡಿಬಿಡಬೇಕು ಎಂದು ಕೆಲ ವರ್ಷಗಳ ಹಿಂದೆ ಪೋಸ್ಟ್‌ವೊಂದು ವೈರಲ್ ಆಗಿತ್ತು. ಇದೀಗ ತಪಸ್ವಿನಿ ಬಗ್ಗೆ ಮಾಡಿರುವ ಪೋಸ್ಟ್ ಕೂಡ ಟೀಕೆಗೆ ಗುರಿಯಾಗಿದೆ.
ರಶ್ಮಿಕಾ ನಡೆಗೆ ಕಾರಣ ಏನು?
'ಪ್ರೇಮದ ಊರಲಿ' ಸಿನಿಮಾ ಬಗ್ಗೆ ಮಾತನಾಡದೇ ರಶ್ಮಿಕಾ ಬರೀ ತಪಸ್ವಿನಿ ಬಗ್ಗೆ ಕಾಮೆಂಟ್ ಮಾಡಿದ್ದೇವೆ. ಈ ವಾರ ಆಕೆ ನಟಿಸುತ್ತಿರುವ 'ರಣಬಾಲಿ' ಸಿನಿಮಾ ಬಿಡುಗಡೆ ಆಗ್ತಿದೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಅಭಿಮಾನಿಗಳನ್ನು ಸೆಳೆಯುವ ಪ್ರಯತ್ನ ಮಾಡಿದ್ರಾ? ಎಂದು ಕೆಲವರು ಕಾಮೆಂಟ್ ಮಾಡ್ತಿದ್ಧಾರೆ. 'ರಣಬಾಲಿ' ಸಿನಿಮಾ ಬರದೇ ಇದ್ದಿದ್ರೆ ರಶ್ಮಿಕಾ ಕಂಡಿತ ಈ ಪೋಸ್ಟ್ ಮಾಡ್ತಿರಲಿಲ್ಲ ಎನ್ನುತ್ತಿದ್ದಾರೆ.
ರಂಗಾಯಣ ರಘು ಹೇಳಿಕೆ
ಸಕ್ಸಸ್ ಸಂಭ್ರಮದಲ್ಲಿ ಹಿರಿಯ ನಟ ರಂಗಾಯಣ ರಘು ಚಿತ್ರದ ನಾಯಕಿಯರಿಂದ ವೇದಿಕೆಯಲ್ಲೇ ಪ್ರಮಾಣ ಮಾಡಿಸಿದ್ದರು. ಬೇರೆ ಭಾಷೆಗಳಿಗೆ ಹೋದ್ರು ಕನ್ನಡ ಮಾತ್ರ ಮರೀಬೇಡಿ ಎಂದು ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಬಳಿ ಆಣೆ ಮಾಡಿಸಿಕೊಂಡಿಕೊಂಡಿದ್ದರು. ರಶ್ಮಿಕಾಗೆ ಪರೋಕ್ಷವಾಗಿ ರಂಗಾಯಣ ರಘು ಟಾಂಗ್ ಕೊಟ್ಟಿದ್ದಾರೆ ಎಂದು ಈ ವೀಡಿಯೋ ವೈರಲ್ ಆಗಿತ್ತು. ಇದು ರಶ್ಮಿಕಾ ಗಮನಕ್ಕೂ ಬಂದಿರಬಹುದು. ಅದೇ ಕಾರಣಕ್ಕೆ ಆಕೆ ಸಿನಿಮಾ ಬಗ್ಗೆ ಮಾತನಾಡದೇ ತಪಸ್ವಿನಿಗೆ ಮಾತ್ರ ಶಹಬ್ಬಾಶ್‌ಗಿರಿ ಕೊಟ್ಟಿದ್ದಾರೆ ಎನ್ನುವವರು ಇದ್ದಾರೆ.
#Rashmika’s double standards 🤡 She couldn’t even mention #Kannada in this post(even movie name) , yet expects Kannada audiences to support her and avoid negative reviews.
— Metaphor Movies (@Metaphor_Movies) October 12, 2026
Let’s see how Kannada audiences respond to #Ranabaali. Kannada audience’s self-respect > #Rashmika’s ego. pic.twitter.com/KxzZdOXMEU