ದೇಶವಿದೇಶಗಳಲ್ಲಿ 'ರಾಮಾಯಣ' ಕ್ರೇಜ್ ಶುರುವಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಬಹುಕೋಟಿ ವೆಚ್ಚದ ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬರ್ತಿದೆ. ಈಗಾಗಲೇ ಅಮೆರಿಕಾದಲ್ಲಿ ಪ್ರೀಮಿಯರ್ ಶೋ ನಡೆದು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಮುಂದಿನ ವಾರ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಇದೆಲ್ಲದರ ನಡುವೆ ಪಾಕಿಸ್ತಾನದಲ್ಲೂ 'ರಾಮಾಯಣ' ಕ್ರೇಜ್ ಜೋರಾಗಿದೆ.
ಹೌದು ಪಾಕಿಸ್ತಾನದ ಕರಾಚಿಯಲ್ಲಿರುವ ಹಿಂದೂಗಳು 'ರಾಮಾಯಣ' ಸಿನಿಮಾ ನೋಡಲು ಬಯಸಿದ್ದಾರೆ. ಚಿತ್ರದ ಪೋಸ್ಟರ್ಸ್ ಹಿಡಿದು ಜೈಕಾರ ಹಾಕುತ್ತಿದ್ದಾರೆ. ನಮ್ಮ ಊರಿನಲ್ಲಿ ಕೂಡ ಸಿನಿಮಾ ಬಿಡುಗಡೆ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಭಾರತದ ಸಿನಿಮಾಗಳು ಬಿಡುಗಡೆ ಆಗುವುದು ಅಷ್ಟು ಸುಲಭ ಅಲ್ಲ. ಆಗೊಮ್ಮೆ ಈಗೊಮ್ಮೆ ಅಂತಹ ಪ್ರಯತ್ನ ನಡೆಯುತ್ತದೆ. ಭಾರತದ ಚಿತ್ರಗಳನ್ನು ಅಲ್ಲಿ ವಿಶೇಷವಾಗಿ ಪ್ರದರ್ಶನ ಮಾಡುವುದು ಇದೆ.
ಕೆಲ ತಿಂಗಳ ಹಿಂದೆ 'ಮಹಾವತಾರ್ ನರಸಿಂಹ' ಆನಿಮೇಷನ್ ಚಿತ್ರವನ್ನು ಪಾಕಿಸ್ತಾನದ ದೇವಸ್ಥಾನವೊಂದರಲ್ಲಿ ವಿಶೇಷವಾಗಿ ಪ್ರದರ್ಶನ ಮಾಡಲಾಗಿತ್ತು. ಕೆಜಿಎಫ್, ಪುಷ್ಪ ಸೇರಿದಂತೆ ಕೆಲ ಸಿನಿಮಾಗಳನ್ನು ಪೈರಸಿ ಸಿಡಿ ಅಥವಾ ಓಟಿಟಿಯಲ್ಲಿ ಪಾಕಿಸ್ತಾನದ ಪ್ರೇಕ್ಷಕರು ನೋಡಿದ್ದಾರೆ. 'ಧುರಂಧರ್' ಸರಣಿ ಸಿನಿಮಾ ಅಲ್ಲಿ ಬ್ಯಾನ್ ಆಗಿತ್ತು. ಹಾಗಾಗಿ ಪೈರಸಿ ಕಾಪಿ ನೋಡಲು ಪಾಕಿಸ್ತಾನದ ಪ್ರಜೆಗಳು ಮುಗಿಬಿದ್ದಿದ್ದರು. ಓಟಿಟಿಗೆ ಬಂದಾಗ ಸರ್ವರ್ಸ್ ಕ್ರ್ಯಾಶ್ ಆಗುವ ಮಟ್ಟಕ್ಕೆ ಜನ ನೋಡಲು ಪ್ರಯತ್ನಿಸಿದ್ದರು ಎಂದು ಸುದ್ದಿ ಆಗಿತ್ತು.
'ರಾಮಾಯಣ' ಟ್ರೈಲರ್ ನೋಡಿ ಪಾಕಿಸ್ತಾನದ ಯೂಟ್ಯೂಬರ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾ ಬಿಡುಗಡೆ ಮಾಡಿ ಎಂದು ಅಲ್ಲಿನ ಹಿಂದೂಗಳು ಬೇಡಿಕೆ ಇಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಲ್ಲಿ ಸಿನಿಮಾ ಬಿಡುಗಡೆ ಆಗುತ್ತಾ ಕಾದು ನೋಡಬೇಕಿದೆ. ಇನ್ನುಳಿದಂತೆ ವಿಶ್ವದಾದ್ಯಂತ ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಈಗಾಗಲೇ 40 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿರುವ ಅಂದಾಜಿದೆ. ನವೆಂಬರ್ 5ರಂದು ದೊಡ್ಡದಾಗಿ ಸಿನಿಮಾ ತೆರೆಗಪ್ಪಳಿಸಲಿದೆ.
🚩 పాకిస్థాన్లోనూ రామాయణం క్రేజ్.. కరాచీలో జై శ్రీరామ్ నినాదాలు! 🔥
— Tupaki (@tupaki_official) October 29, 2026
భారతీయ ఇతిహాసం 'రామాయణం' సినిమాపై పాకిస్థాన్ హిందువులు ఆసక్తి చూపుతున్నట్లు సోషల్ మీడియాలో ప్రచారం!
కరాచీలో జై శ్రీరామ్ నినాదాలతో సందడి చేస్తున్నారని, తమ దేశంలోనూ సినిమాను విడుదల చేయాలని మేకర్స్ను… pic.twitter.com/2TEfh1stnp