ವಿಶ್ವದಾದ್ಯಂತ ಗಣೇಶ ಹಬ್ಬದ ಸಂಭ್ರಮ ಮುಂದುವರೆದಿದೆ. ಬಾಲಿವುಡ್ ತಾರೆಯರು ಕೂಡ ವಿಘ್ನ ನಿವಾರಕನನ್ನು ಪೂಜಿಸಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಕೂಡ ಮತ ಭೇದ ಮರೆತು ಗಣಪನಿಗೆ ನಮಿಸಿದ್ದಾರೆ. ಇದೆಲ್ಲದರ ನಡುವೆ ಗಣೇಶ ಪ್ರಸಾದ ಬೇಡ ಎಂದು ರಣ್‌ಬೀರ್ ಕಪೂರ್ ಹೇಳಿರುವ ವೀಡಿಯೋವೊಂದು ವೈರಲ್ ಆಗಿ ಸದ್ದು ಮಾಡ್ತಿದೆ.
ದೇವರ ಪ್ರಸಾದವನ್ನು ಯಾರಾದರೂ ಬೇಡ ಎನ್ನುವುದು ಉಂಟೇ. ತಿನ್ನೋಕೆ ಆಗುತ್ತೋ ಬಿಡುತ್ತೋ ತೆಗೆದುಕೊಂಡು ಮನೆಗೆ ಹೋಗಬಹುದಲ್ಲ. ಆದರೆ ರಣ್‌ಬೀರ್ ನಾನು ಡಯೆಟ್‌ನಲ್ಲಿ ಇದ್ದೀನಿ ಬೇಡ, ಎಂದು ಕೊಟ್ಟ ಸಿಹಿ ಪದಾರ್ಥವನ್ನು ಅಲ್ಲಿ ನೆರೆದಿದ್ದ ಛಾಯಾಗ್ರಾಹಕರಿಗೆ ಕೊಟ್ಟು ಹೊರಟುಬಿಟ್ಟಿದ್ದಾರೆ. ಇದೇ ಈಗ ಕೆಲವರ ಕಣ್ಣು ಕೆಂಪಗಾಗಿಸಿದೆ. ಅಂದಹಾಗೆ ಇದು ಈ ವರ್ಷ ಗಣೇಶ ಹಬ್ಬದ ಸಂಭ್ರಮದಲ್ಲಿ ನಡೆದಿರುವ ಘಟನೆ ಅಲ್ಲ. ಮೂರು ವರ್ಷಗಳ ಹಿಂದಿನ ವೀಡಿಯೋ ಇದು. ಆದರೆ ಮತ್ತೊಮ್ಮೆ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.
'ರಾಮಾಯಣ' ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್ ನಟಿಸುತ್ತಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ನನಗೆ ಗೋಮಾಂಸ ಇಷ್ಟ ಎಂದು ರಣ್‌ಬೀರ್ ಕಪೂರ್ ಹೇಳಿದ್ದರು. ಗೋಮಾಂಸ ತಿನ್ನುವವನು ರಾಮನ ಪಾತ್ರ ಮಾಡುವುದು ಎಷ್ಟು ಸರಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಗಣೇಶ ಪ್ರಸಾದ ಬೇಡ ಎಂದಿರುವ ವೀಡಿಯೋ ನೋಡಿ ಟ್ರೋಲ್ ಮಾಡುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವವರ ಮೈಯೆಲ್ಲಾ ಕಣ್ಣಾಗಿ ಇರಬೇಕು. ತಮ್ಮ ಪ್ರತಿ ನಡೆಯನ್ನು ಜನ ಗಮನಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲವೂ ಕ್ಯಾಮರಾ ಕಣ್ಣಲ್ಲಿ ಸೆರೆಯಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ ಎನ್ನುವ ಅರಿವು ಇರಬೇಕು.
ಯಾವತ್ತೋ ಆಡಿದ್ದ ಮಾತು, ನಡೆದುಕೊಂಡ ರೀತಿ ಕ್ಯಾಮರಾದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಮತ್ತೆ ನೆನಪಾಗಿ ಕಾಡುತ್ತದೆ. ಅದೇ ರೀತಿ ಗಣೇಶನ ಪ್ರಸಾದ ಬೇಡ ಎಂದು ರಣ್‌ಬೀರ್ ಕೊಟ್ಟು ಹೋಗಿರುವ ವೀಡಿಯೋ ಈಗ ಮತ್ತೆ ಸುದ್ದಿಗೆ ಕಾರಣವಾಗಿದೆ. ರಣ್‌ಬೀರ್ ಮಾಡಿದ್ದು ತಪ್ಪು ಎಂದು ನಟಿ ಅಂಜಲಿ ಅರೋರ ಹೇಳಿದ್ದಾರೆ. ಸ್ವಲ್ಪ ಪ್ರಸಾದ ತಿಂದುಬಿಟ್ಟಿದ್ರೆ ಏನು ಆಗ್ತಿರಲಿಲ್ಲ, ಅದರಿಂದಲೇ ದಪ್ಪ ಆಗಿಬಿಡಲ್ಲ ಎಂದು ಹೇಳಿದ್ದಾರೆ. 'ಮಹಾಕಾವ್ಯ ಶ್ರೀ ರಾಮಾಯಣ ಕಥಾ' ಚಿತ್ರದಲ್ಲಿ ಸೀತೆಯ ಪಾತ್ರದಲ್ಲಿ ಅಂಜಲಿ ನಟಿಸಿದ್ದಾರೆ. ಮುಂದಿನ ವಾರ ಈ ಸಿನಿಮಾ ತೆರೆಗೆ ಬರಲಿದೆ.
ಗೋಮಾಂಸ ತಿನ್ನುವವನಿಗೆ ಗಣೇಶನ ಪ್ರಸಾದ ಯಾಕೆ ? ಕೆಲವರು ರಣ್‌ಬೀರ್ ಕಪೂರ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಸಿನಿಮಾ ಮೊದಲ ಭಾಗ ತೆರೆಗೆ ಬರಲಿದೆ. ಸೀತೆಯಾಗಿ ಸಾಯಿಪಲ್ಲವಿ, ರಾವಣನಾಗಿ ಯಶ್ ಚಿತ್ರದಲ್ಲಿ ನಟಿಸಿದ್ದಾರೆ.
Bollywood actor Ranbir Kapoor refused Ganpati prasad saying he was on dieting & handed it to paparazzi present there.
— Himanshu Jain (@HemanNamo) September 17, 2026
These people happily go to dargahs & avoid taking Ganpati prasad. pic.twitter.com/VdpSALbNmN