'ಕಳ್ಳನಿಗೊಂದು ಪಿಳ್ಳೆ ನೆವ' ಎನ್ನುವಂತೆ ಯಾವುದಾದರೂ ಕೆಲಸದಿಂದ ನುಣುಚಿಕೊಳ್ಳಲು ಕೆಲವರು ಏನೋ ಒಂದು ಕಾರಣ ಕೊಡುತ್ತಾರೆ. ಆದರೆ ಮನಸ್ಸಿದ್ದರೆ ಎಲ್ಲವೂ ಸಾಧ್ಯ ಎನ್ನುವುದನ್ನು ಸಾಕಷ್ಟು ಜನ ಸಾಬೀತು ಮಾಡಿದ್ದಾರೆ. ಚಿತ್ರರಂಗದಲ್ಲಿ ಕೂಡ ತಮ್ಮ ನ್ಯೂನ್ಯತೆಗಳನ್ನು ಮೆಟ್ಟಿ ತೆರೆಮೇಲೆ ಜಾದೂ ಮಾಡಿದವರ ದೊಡ್ಡ ಪಟ್ಟಿಯಿದೆ. 40 ವರ್ಷಗಳ ಹಿಂದೆ ಬಿದ್ದು ಕಾಲು ಮುರಿದುಕೊಂಡಿದ್ದ ನಟಿ ರಮ್ಯಾಕೃಷ್ಣ ಇವತ್ತಿಗೂ ಸಿನಿಮಾಗಳಲ್ಲಿ ರಾಣಿಯಂತೆ ಮೆರೆಯುತ್ತಿದ್ದಾರೆ.
ಅದ್ಭುತ ಪಾತ್ರಗಳ ಮೂಲಕ ರಮ್ಯಾಕೃಷ್ಣ ತೆರೆಮೇಲೆ ಮೋಡಿ ಮಾಡಿದಾಕೆ. ಇನ್ನು ಡ್ಯಾನ್ಸ್ ವಿಚಾರದಲ್ಲೂ ಸದಾ ಮುಂದು. ಆಕೆ ಎಂತಹ ಅದ್ಭುತ ಡ್ಯಾನ್ಸರ್ ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಿಲ್ಲ. ಕೆಲ ಸಿನಿಮಾಗಳಲ್ಲಿ ಭರತನಾಟ್ಯ ಮಾಡಿ ಕಮಾಲ್ ಮಾಡಿರುವುದನ್ನು ನೋಡಿದ್ದೇವೆ. ನಾಯಕಿಯಾಗಿ ನಾಯಕರ ಜೊತೆ ಮರ ಸುತ್ತುವುದು, ಸಿಂಪಲ್ ಸ್ಟೆಪ್ಸ್ ಮಾಡುವುದು ಮಾತ್ರವಲ್ಲ, ಬಿಂದಾಸ್ ಐಟಂ ಸಾಂಗ್‌ಗಳಲ್ಲಿ ಕೂಡ ಮೈಚಳಿ ಬಿಟ್ಟು ಕುಣಿದಿದ್ದಾರೆ.
ನಿಮಗೆ ಗೊತ್ತಾ ಚಿತ್ರರಂಗಕ್ಕೆ ಬಂದ ಆರಂಭದಲ್ಲೇ ಸೆಟ್‌ನಲ್ಲಿ ಬಿದ್ದು ನಟಿ ರಮ್ಯಾಕೃಷ್ಣ ಬಲಗಾಲು ಮುರಿದುಕೊಂಡಿದ್ದರು. ಬಲಗಾಲಿನ ಪಾದ ಹಾಗೂ ಕಾಲಿಗೆ ಲಿಂಕ್ ಇಲ್ಲದಂತಾಗಿತ್ತು. ನೀನು ನಡೆಯುವುದೇ ಕಷ್ಟ ಎಂದು ವೈದ್ಯರು ಹೇಳಿಬಿಟ್ಟಿದ್ದರು. ಆದರೆ ರಮ್ಯಾಕೃಷ್ಣ ಕುಗ್ಗಲಿಲ್ಲ. ವೈದ್ಯಕೀಯ ಕ್ಷೇತ್ರಕ್ಕೆ ಸವಾಲು ಹಾಕಿ ಇವತ್ತಿಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆಕೆಯ ಕಾಲು ಮುರಿದಿರುವ ಬಗ್ಗೆ ಸಾಕಷ್ಟು ಜನರಿಗೆ ಗೊತ್ತೇಯಿಲ್ಲ. Raw Talks With VK ಪಾಡ್‌ಕಾಸ್ಟ್‌ನಲ್ಲಿ ಈ ಬಗ್ಗೆ ರಮ್ಯಾಕೃಷ್ಣ ಮಾತನಾಡಿದ್ದಾರೆ.
"1987ರಲ್ಲಿ ನನ್ನ ಬಲಗಾಲಿಗೆ ಪೆಟ್ಟಾಗಿತ್ತು.. ಈ ಪ್ರ್ಯಾಕ್ಚರ್ ನೋಡಿ ಇವತ್ತಿಗೂ ಆರ್ಥೋಪ್ರಿಡಿಸ್ಟ್ ಹೇಳ್ತಾರೆ, ನೀವು ನಡೆಯುವುದು ಕೂಡ ಕಷ್ಟ ಅಂತ.. ಕಾಲು ಹಾಗೂ ಪಾದಕ್ಕೆ ಜಾಯಿಂಟೇ ಇಲ್ಲ.. ಡಾಕ್ಟರ್ ಎಕ್ಸ್‌ರೇ ನೋಡಿ ಇದು ವಿಜ್ಞಾನಕ್ಕೆ ಸವಾಲು.. ಇದು ಶರೀರಕ್ಕಿಂತ ಮನಸ್ಸು ಮೇಲು ಎನ್ನುವುದಕ್ಕೆ ಉದಾಹರಣೆ ಅಂತಾರೆ.. ಈ ಪೆಟ್ಟಾದ ಬಳಿಕ ನನ್ನ ವೃತ್ತಿ ಜೀವನ ಶುರುವಾಯ್ತು. ನನ್ನ ಎಲ್ಲಾ ಸಾಂಗ್ಸ್, ಡ್ಯಾನ್ಸ್ ಆ ಬಳಿಕವೇ ಮಾಡಿದ್ದು" ಎಂದು ರಮ್ಯಾಕೃಷ್ಣ ತಿಳಿಸಿದ್ದಾರೆ.
ಚಿತ್ರರಂಗಕ್ಕೆ ಬಂದ ಆರಂಭದ ದಿನಗಳು.. ನನಗೆ ಆಗ 14 ಸತತ ಚಿತ್ರೀಕರಣ ಎನ್ನುವುದೆಲ್ಲಾ ಗೊತ್ತಿರಲಿಲ್ಲ. ಕೊಂಚ ಎಲ್ಲರ ಕಣ್ತಪ್ಪಿಸಿ ಪಕ್ಕದ ಸೆಟ್‌ಗೆ ಹೋಗಿ ನಿದ್ದೆ ಮಾಡೋಣ ಎಂದು ಮೆಟ್ಟಿಲು ಹತ್ತಿದೆ. ಅದು ನಿಜವಾದ ಮಾಳಿಗೆ ಆಗಿರಲಿಲ್ಲ. ನಾನು ಬಿದ್ದು ಬಲಗಾಲು ಮುರಿದಿತ್ತು.. ಪಾದ ಮುರಿದು ಹಿಂದಕ್ಕೆ ತಿರುಗಿಬಿಟ್ಟಿತ್ತು ಎಂದು ಆ ಘಟನೆಯನ್ನು ರಮ್ಯಾಕೃಷ್ಣ ನೆನಪಿಸಿಕೊಂಡಿದ್ದಾರೆ.
THIS IS THE POWER OF MIND OVER BODY! 🔥
— Sundar Vijay (@ItsSundarVJ) November 17, 2026
Even though she had a problem with her leg, she still achieved all of this. Her determination is beyond words. What an inspiration! 🙌❤️ pic.twitter.com/LtYrDGavEK