ಬಾಕ್ಸಾಫೀಸ್ ಶೇಕ್ ಮಾಡ್ತಿರೋ 'ರಾಮಾಯಣ' ಸಿನಿಮಾ ಓಟಿಟಿಗೆ ಬರೋದು ಯಾವಾಗ ಎನ್ನುವ ಚರ್ಚೆ ಜೋರಾಗಿದೆ. ಬಾಲಿವುಡ್ ಸಿನಿಮಾಗಳು ತೆರೆಕಂಡ 60 ದಿನಗಳ ಬಳಿಕ ಓಟಿಟಿಗೆ ಬರಬೇಕು ಎನ್ನುವ ನಿಯಮ ಇದೆ. ಹಾಗಾಗಿ ಜನವರಿಯಲ್ಲಿ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸುವ ಸಾಧ್ಯತೆಯಿದೆ.
450 ಕೋಟಿ ರೂ.ಗೆ ಸ್ಟಾರ್ ಗ್ರೂಪ್ಸ್ 'ರಾಮಾಯಣ' ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ಖರೀದಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಭಾರೀ ಡೀಲ್ ನಡೆದಿದೆ ಎಂದು ಕೆಲ ದಿನಗಳ ಹಿಂದೆ ಸುದ್ದಿ ಆಗಿತ್ತು. ಆದರೆ ಸಿನಿಮಾ ಓಟಿಟಿ ವ್ಯವಹಾರ ಇನ್ನು ಫೈನಲ್ ಆಗಿಲ್ಲ ಎಂದು 'ರಾಮಾಯಣ' ಚಿತ್ರದ ತೆಲುಗು ವಿತರಕ ದಿಲ್ ರಾಜು ಹೇಳಿದ್ದಾರೆ. ತೆಲುಗು ಮಾಧ್ಯಮಗಳ ಜೊತೆ ಮಾತನಾಡುತ್ತಾ ಅವರು ಈ ವಿಚಾರ ಬಹಿರಂಗ ಪಡಿಸಿದ್ದಾರೆ.
ಬಿಡುಗಡೆಗೂ ಮುನ್ನ ಕೆಲ ಸಿನಿಮಾಗಳ ಓಟಿಟಿ ವ್ಯವಹಾರ ಕುದುರಿಸಲಾಗುತ್ತದೆ. ಸಿನಿಮಾ ತೆರೆಕಂಡು ಯಾವ ರೀತಿ ಸದ್ದು ಮಾಡುತ್ತದೆ ಎನ್ನುವುದನ್ನು ಆಧರಿಸಿ ಬಳಿಕ ಓಟಿಟಿ ಮಾತುಕತೆ ನಡೆಸುವವರು ಇದ್ದಾರೆ. ಸದ್ಯಕ್ಕೆ 'ರಾಮಾಯಣ' ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ರೈಟ್ಸ್ ವ್ಯಾಪಾರ ನಡೆದಿಲ್ಲ. ಸಿನಿಮಾ 1000 ಕೋಟಿ ರೂ. ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಹಾಗಾಗಿ ಭಾರೀ ಓಟಿಟಿ ರೈಟ್ಸ್ ಖರೀದಿಸಲು ಭಾರೀ ಪೈಪೋಟಿ ಏರ್ಪಡಲಿದೆ. ಇದು ಸಹಜವಾಗಿಯೇ ನಿರ್ಮಾಪಕರಿಗೆ ಸಂತಸದ ವಿಷಯ.
ದಿಲ್ ರಾಜು ಮಾತನಾಡಿ "'ರಾಮಾಯಣ' ಚಿತ್ರದ ಓಟಿಟಿ, ಟಿವಿ ರೈಟ್ಸ್ ಇನ್ನು ಮಾರಾಟ ಮಾಡಲಾಗಿಲ್ಲ. ಆದ್ದರಿಂದ, ಸದ್ಯಕ್ಕೆ ಸಿನಿಮಾ ಒಟಿಟಿ ಅಥವಾ ಟಿವಿಗೆ ಬರಲ್ಲ. ಪ್ರೇಕ್ಷಕರು 'ರಾಮಾಯಣ' ಚಿತ್ರವನ್ನು ಚಿತ್ರಮಂದಿರಗಳಲ್ಲಿಯೇ ವೀಕ್ಷಿಸಬೇಕು. ನಿರ್ಮಾಪಕರು ನಿರ್ಧರಿಸಿದಾಗ ಆನ್ಲೈನ್ನಲ್ಲಿ ನೋಡಬಹುದು. ಇದೆಲ್ಲವೂ ನಿರ್ಮಾಪಕ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ.
ಸದ್ಯ 1200 ಕೋಟಿ ರೂ. ಕಲೆಕ್ಷನ್ ಮಾಡಿ 'ರಾಮಾಯಣ' ಸಿನಿಮಾ ಮುನ್ನುಗ್ಗುತ್ತಿದೆ. 'ಕೆಜಿಎಫ್- 2' ದಾಖಲೆ ಅಳಿಸಿ ಸದ್ದು ಮಾಡ್ತಿದೆ. ಶೀಘ್ರದಲ್ಲೇ 'RRR' ಸಿನಿಮಾ ದಾಖಲೆಯನ್ನು ಹಿಂದಿಕ್ಕಿ ಸಿನಿಮಾ ಸದ್ದು ಮಾಡಲಿದೆ. ಕೇವಲ 10 ದಿನಕ್ಕೆ ಸಿನಿಮಾ ಗಳಿಕೆ 1200 ಕೋಟಿ ರೂ. ದಾಟಿರುವುದು ವಿಶೇಷ. ಆಂಧ್ರ, ತೆಲಂಗಾಣದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಸದ್ದು ಮಾಡ್ತಿಲ್ಲ. ಆದರೂ ವಿತರಕ ದಿಲ್ ರಾಜು ಖುಷಿಯಾಗಿದ್ದಾರೆ.
ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಆಂಧ್ರ, ತೆಲಂಗಾಣ ರೈಟ್ಸ್ ಕೂಡ ದಿಲ್ ರಾಜು ಖರೀದಿಸಿದ್ದರು. ಆ ಚಿತ್ರದಿಂದ ಕೂಡ ನನಗೆ ನಷ್ಟವಾಗ್ಲಿಲ್ಲ. ಈಗ ರಾಮಾಯಣದಿಂದ ಲಾಭವೇ ಆಗ್ತಿದೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದ್ದರು.