ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ ಪಾರ್ಟ್ 1' ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ವಾಲ್ಮೀಕಿ ರಾಮಾಯಣಕ್ಕಿಂತ ಬಹಳ ಭಿನ್ನವಾಗಿ ಸಿನಿಮಾ ಮೂಡಿ ಬಂದಿದೆ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಟೀಕೆಗಳ ನಡುವೆ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ.
ಸದ್ಯ 'ರಾಮಾಯಣ' ಚಿತ್ರದ ಡಿಲೀಟೆಡ್ ಸೀನ್ ಒಂದು ವೈರಲ್ ಆಗ್ತಿದೆ. ಇಂಗ್ಲೀಷ್ ವರ್ಷನ್‌ನಲ್ಲಿ ಈ ದೃಶ್ಯ ಇದೆ. ಭಾರತದಲ್ಲಿ ಬಿಡುಗಡೆ ಆಗಿರುವ ಚಿತ್ರದಲ್ಲಿ ಇದನ್ನು ಕಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಸಣ್ಣ ಜಲಪಾತದ ಬಳಿ ತೋಳಗಳ ರೀತಿಯ ಮೂರು ವಿಚಿತ್ರ ಜೀವಿಗಳು ಲಕ್ಷ್ಮಣ ಹಾಗೂ ಸೀತೆ ಮೇಲೆ ದಾಳಿಗೆ ಮುಂದಾಗುತ್ತವೆ. ಇಬ್ಬರೂ ಅದನ್ನು ತಡೆಯಲು ಸಿದ್ಧರಾಗುತ್ತಾರೆ. ಅಷ್ಟರಲ್ಲಿ ರಾಮ ಬಾಣ ಬಿಟ್ಟು ಆ ಜೀವಿಗಳನ್ನು ಸಂಹರಿಸುವಂತಹ ದೃಶ್ಯ ಇದು.
ವಿದೇಶಗಳಲ್ಲಿ ಪ್ರದರ್ಶನ ಆಗುತ್ತಿರುವ 'ರಾಮಾಯಣ' ಚಿತ್ರದಲ್ಲಿ ಈ ದೃಶ್ಯವನ್ನು ಯಾರೋ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಇಂತಹ ಒಳ್ಳೆ ದೃಶ್ಯ ಯಾಕೆ ಕಟ್ ಮಾಡಿಬಿಟ್ರಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ರಾಮ ಹಾಗೂ ಸೀತೆ ಮೇಲೆ ದೈತ್ಯ ರಾಕ್ಷಸ ದಾಳಿಗೆ ಮುಂದಾಗುವಾಗ ಲಕ್ಷ್ಮಣ ಸಹಾಯಕ್ಕೆ ಬರುವಂತಹ ಸನ್ನಿವೇಶ ಚಿತ್ರದಲ್ಲಿದೆ. ಅದೇ ರೀತಿ ಈ ದೃಶ್ಯವನ್ನು ಕಾಣಬಹುದು.
ಇಂಗ್ಲೀಷ್ ವರ್ಷನ್ ಚಿತ್ರದಲ್ಲಿ ಸಾಕಷ್ಟು ದೃಶ್ಯಗಳಿಗೆ ಕತ್ತರಿ ಬಿದ್ದಿದೆ. ಭಾರತದಲ್ಲಿ 3 ಗಂಟೆ 15 ನಿಮಿಷಗಳ ಸಿನಿಮಾ ಪ್ರದರ್ಶನವಾಗ್ತಿದೆ. ಆದರೆ ಇಂಗ್ಲೀಷ್‌ನಲ್ಲಿ ಅದನ್ನು 2 ಗಂಟೆ 46 ನಿಮಿಷಕ್ಕೆ ಇಳಿಸಲಾಗಿದೆ. ಇದೇ ಕಾರಣಕ್ಕೆ ಇಂಗ್ಲೀಷ್ ವರ್ಷನ್ ನೋಡುಗರಿಗೆ ಅಷ್ಟಾಗಿ ಕನೆಕ್ಟ್ ಆಗ್ತಿಲ್ಲ ಎನ್ನುವವರು ಇದ್ದಾರೆ. ಆದರೆ ಇಂಗ್ಲೀಷ್ ವರ್ಷನ್‌ನಲ್ಲಿ ಈ ದೃಶ್ಯವನ್ನು ಸೇರಿಸಲಾಗಿದೆ. 'ರಾಮಾಯಣ' ಸಿನಿಮಾ 300 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಶೀಘ್ರದಲ್ಲೇ ಗಳಿಕೆ 500 ಕೋಟಿ ರೂ. ಗಡಿ ದಾಟಲಿದೆ.
Why did @malhotra_namit and @niteshtiwari22 cut this beautifully executed scene from #Ramayana ? pic.twitter.com/Krn3a7CPrk
— dabbakachori (@Chakrabort16372) November 7, 2026