ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ರಾಮಾಯಣ' ಸಿನಿಮಾ ಐದನೇ ಸ್ಥಾನಕ್ಕೇರಿದೆ. ಆದಿತ್ಯಧರ್ ಹಾಗೂ ರಣ್ವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ದಾಖಲೆ ಧೂಳಿಪಟ ಮಾಡಿ ನಮಿತ್ ಮಲ್ಹೋತ್ರಾ ಸಿನಿಮಾ ಮುನ್ನುಗ್ಗುತ್ತಿದೆ. 'ಪುಷ್ಪ'- 2 ಸಿನಿಮಾ ದಾಖಲೆ ಮುರಿಯೋಕೆ ಸಾಧ್ಯಾನಾ ಎನ್ನುವ ಚರ್ಚೆ ಶುರುವಾಗಿದೆ.
ಎರಡನೇ ಸೋಮವಾರ(ನವೆಂಬರ್ 16) ಭಾರತದಲ್ಲಿ ಮಾತ್ರ ಸಿನಿಮಾ 32 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ವಿದೇಶಗಳಲ್ಲಿ ಕೂಡ 'ರಾಮಾಯಣ' ಸಿನಿಮಾ ಕಾರುಬಾರು ಜೋರಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಸೋಮವಾರ ಗಳಿಕೆ ಕಮ್ಮಿಯಾಗಿದೆ ಅದು ಸಹಜ ಕೂಡ. ಆದರೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಎರಡನೇ ಬಾರಿ ಮೂರನೇ ಸಿನಿಮಾ ನೋಡುವವರ ಸಂಖ್ಯೆ ಕೂಡ ಹೆಚ್ಚಾಗ್ತಿದೆ.
12 ದಿನದ ಕಲೆಕ್ಷನ್
ಒಟ್ಟಾರೆ ವಿಶ್ವದಾದ್ಯಂತ 12 ದಿನಕ್ಕೆ ಒಟ್ಟು 1,437.25 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. 947.25 ಕೋಟಿ ರೂ. ಗ್ರಾಸ್ ಜೊತೆಗೆ 792.60 ನೆಟ್ ಕಲೆಕ್ಷನ್ ಆಗಿದೆ ಎಂದು ಅಂದಾಜಿಸಲಾಗ್ತಿದೆ. ಇನ್ನು ಓವರ್ಸೀಸ್ ಮಾರ್ಕೆಟ್ ಪಾಲು 490.00 ಕೋಟಿ ರೂ. ಎನ್ನಲಾಗ್ತಿದೆ. ಸೋಮವಾರ ಕನ್ನಡ ವರ್ಷನ್ ಸಿನಿಮಾ 2 ಕೋಟಿ ರೂ. ಬಾಚಿಕೊಂಡಿರುವುದಾಗಿ ಲೆಕ್ಕ ಹಾಕ್ತಿದ್ದಾರೆ.
'ಧುರಂಧರ್' ದಾಖಲೆ ಉಡೀಸ್
ಆದಿತ್ಯಧರ್ ನಿರ್ದೇಶನದಲ್ಲಿ ರಣ್ವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿತ್ತು. 1,350.83 ಕೋಟಿ ರೂ. ಕೊಳ್ಳೆ ಹೊಡೆದು ಅಚ್ಚರಿ ಮೂಡಿಸಿತ್ತು. ಬಳಿಕ ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಿಸಿತ್ತು. ನಾಲ್ಕು ತಿಂಗಳ ಅಂತರದಲ್ಲಿ ಬಂದಿದ್ದ 'ಧುರಂಧರ್'-2 ಸಿನಿಮಾ 1,852.44 ಕೋಟಿ ರೂ. ಬಾಚಿತ್ತು. ಇದೀಗ 'ಧುರಂಧರ್' ದಾಖಲೆ ಹಿಂದಿಕ್ಕಿ 'ರಾಮಾಯಣ' ಸದ್ದು ಮಾಡ್ತಿದೆ.
ಮುಂದಿನ ಗುರಿ 'ಪುಷ್ಪ'-2
ಎರಡು ವರ್ಷಗಳ ಹಿಂದೆ ಬಂದಿದ್ದ ತೆಲುಗಿನ 'ಪುಷ್ಪ'-2 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಸೀಕ್ವೆಲ್ ಲಾಭ ಪಡೆದಿದ್ದ ಸಿನಿಮಾ ಭರ್ಜರಿ ಓಪನಿಂಗ್ ಪಡೆದು ಮುನ್ನುಗ್ಗಿತ್ತು. ನೋಡ ನೋಡುತ್ತಲೇ 1,800 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು. ಸದ್ಯ 1,437 ಕೋಟಿ ರೂ. ಗಳಿಸಿರುವ 'ರಾಮಾಯಣ', ಅಲ್ಲು ಅರ್ಜುನ್ ಸಿನಿಮಾ ದಾಖಲೆ ಮುರಿಯುತ್ತಾ ಕಾದು ನೋಡಬೇಕಿದೆ.