'ರಾಮಾಯಣ' ಚಿತ್ರದ ಅಸಲಿ ತಾಖತ್ತು ಈಗ ಪ್ರದರ್ಶನವಾಗ್ತಿದೆ. ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ದೀಪಾವಳಿ ಸಂಭ್ರಮದಲ್ಲಿ ಜನ ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಪರಿಣಾಮ ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೀತಿದೆ. ಸದ್ಯ 'ಧುರಂಧರ್- 2' ಹಾಗೂ 'ಪುಷ್ಪ- 2' ದಾಖಲೆ ಹಿಂದಿಕ್ಕಿದೆ.

ಸೋಮವಾರದ ರಜಾ ದಿನ 'ರಾಮಾಯಣ' ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ ಎನ್ನುವುದು ಈಗ ಗೊತ್ತಾಗ್ತಿದೆ. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಗಂಟೆಗೆ ಲಕ್ಷ ಲಕ್ಷ ಟಿಕೆಟ್ ಹಾಟ್ ಕೇಕ್ ರೀತಿ ಸೇಲ್ ಆಗಿತ್ತಿದೆ. ಈವರೆಗೆ ಗಂಟೆಗೆ ಅತಿಹೆಚ್ಚು ಟಿಕೆಟ್ ಬುಕ್ ಆಗಿದ್ದ ದಾಖಲೆ 'ಧುರಂಧರ್-2' ಚಿತ್ರದ ಹೆಸರಿನಲ್ಲಿತ್ತು. ಹೌದು ಇದೇ ವರ್ಷ ತೆರೆಗೆ ಬಂದಿದ್ದ ಸೀಕ್ವೆಲ್ ಚಿತ್ರಕ್ಕೆ ಒಂದು ಹಂತದಲ್ಲಿ ಗಂಟೆಗೆ 1.09 ಲಕ್ಷ ಟಿಕೆಟ್ ಬುಕ್ ಆಗಿತ್ತು. ಆದರೆ ರಾಮಾಯಣ ಚಿತ್ರಕ್ಕೆ ಇವತ್ತು ಒಂದು ಗಂಟೆಯಲ್ಲಿ 1.35 ಲಕ್ಷ ಟಿಕೆಟ್ ಬುಕ್ ಆಗಿದೆ.

ಗಂಟೆಗೆ 1.07 ಲಕ್ಷ ಟಿಕೆಟ್ ಬುಕ್ ಆಗಿ ಕಳೆದ ವರ್ಷ 'ಪುಷ್ಪ'-2 ಸಿನಿಮಾ ಸಂಚಲನ ಸೃಷ್ಟಿಸಿತ್ತು. ಆ ದಾಖಲೆಯನ್ನು 'ಧುರಂಧರ್-2' ಮುರಿದಿತ್ತು. ಈಗ ಎಲ್ಲಾ ದಾಖಲೆ ಹಿಂದಿಕ್ಕಿ 'ರಾಮಾಯಣ' ಸಂಚಲನ ಸೃಷ್ಟಿಸಿದೆ.

ಅದ್ಧೂರಿ ದೃಶ್ಯಕಾವ್ಯ

ಹೇಳಿಕೇಳಿ 'ರಾಮಾಯಣ' ಕಾವ್ಯಾ ಆಧರಿಸಿದ ಸಿನಿಮಾ ಇದು. ಭಾರತದಲ್ಲಿ ಬಹುತೇಕರಿಗೆ ಗೊತ್ತಿರುವ ಕಥೆ, ಪಾತ್ರಗಳು. ಹಾಗಾಗಿ ಅಬಾಲವೃದ್ಧರಾಗಿ ಎಲ್ಲರೂ ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ದೀಪಾವಳಿ ಹಬ್ಬ ರಜೆ ಪ್ರೇಕ್ಷಕರು ಚಿತ್ರಮಂದಿರಗಳ ಕಡೆ ಮುಖ ಮಾಡುವಂತೆ ಮಾಡಿದೆ. ನೋಡಿದವರೆಲ್ಲಾ ಹಾಡಿ ಕೊಂಡಾಡುತ್ತಿದ್ದಾರೆ. ಹಾಗಾಗಿ ನಾಲ್ಕು ದಿನಗಳ ಬಳಿಕ ಮೌತ್ ಟಾಕ್ ಮೂಲಕ ಸಿನಿಮಾ ಹೆಚ್ಚು ಜನರನ್ನು ಸೆಳೆಯುತ್ತಿದೆ

500 ಕೋಟಿ ರೂ. ಕಲೆಕ್ಷನ್

ಈಗಾಗಲೇ ಮೊದಲ ನಾಲ್ಕು ದಿನಕ್ಕೆ 'ರಾಮಾಯಣ' ಸಿನಿಮಾ 500 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಸಿನಿಮಾ ಬಜೆಟ್ 1500 ಕೋಟಿ ರೂ. ಎನ್ನಲಾಗ್ತಿದೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸಾಕಷ್ಟು ದೂರ ಕ್ರಮಿಸಬೇಕಿದೆ. ಸೋಮವಾರದ ಈ ಟ್ರೆಂಡ್ ಸಿನಿಮಾ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸುಳಿವು ಕೊಡ್ತಿದೆ. ಇವತ್ತು(ನವೆಂಬರ್ 9) ಒಂದೇ ದಿನ ಸಿನಿಮಾ 100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಸುಳಿವು ಸಿಕ್ತಿದೆ.