'ರಾಮಾಯಣ- 1' ಸಿನಿಮಾ ಬಾಕ್ಸಾಫೀಸ್ ದಂಡಯಾತ್ರೆ ಮುಂದುವರೆದಿದೆ. ಅತಿಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ಮುನ್ನುಗ್ಗುತ್ತಿದೆ. 2000 ಕೋಟಿ ಕ್ಲಬ್ ಕೂಡ ಕಷ್ಟ ಅಲ್ಲ ಎನ್ನುವಂತೆ ಸಿನಿಯಾ ವಿಜಯಯಾತ್ರೆ ನಡೀತಿದೆ. ಮೂರನೇ ಭಾನುವಾರ ಕೂಡ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.
ನವೆಂಬರ್ 5ರಂದು ಈ ಪೌರಾಣಿಕ ಸಿನಿಮಾ ಗ್ಲೋಬಲ್ ಮಟ್ಟದಲ್ಲಿ ತೆರೆಗಪ್ಪಳಿಸಿತ್ತು. ಅದಕ್ಕೂ ಮುನ್ನ ವಿದೇಶಗಳಲ್ಲಿ ಪ್ರೀಮಿಯರ್ ಶೋಗಳು ಆರಂಭವಾಗಿತ್ತು. ಭಾರತದಲ್ಲಿ ಸಿನಿಮಾ ಗಳಿಕೆ 1000 ಕೋಟಿ ರೂ. ಗಡಿ ದಾಟಿದ್ದರೆ ವಿದೇಶಗಳಿಂದ 500 ಕೋಟಿ ಪಾಲು ಬಂದಿದೆ. ಆ ಮೂಲಕ ಸಿನಿಮಾ ಗಳಿಗೆ 1600 ಕೋಟಿ ರೂ. ದಾಟಿದೆ. ಅದು ಕೂಡ ಕೇವಲ 18 ದಿನಗಳಲ್ಲಿ.
ಮೂರನೇ ಭಾನುವಾರ
ನಿನ್ನೆ ಅಂದ್ರೆ 'ರಾಮಾಯಣ- 1' ಸಿನಿಮಾ ತೆರೆಕಂಡು ಮೂರನೇ ಭಾನುವಾರ 35.60 ಕೋಟಿ ರೂ. ಗಳಿಕೆ ಕಂಡಿದೆ. ಕಳೆದೊಂದು ವಾರದಲ್ಲಿ ಇದು ಅಧಿಕ. ವಾರದ ರಜೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಚಿತ್ರಮಂದಿರದತ್ತ ಬರುವಂತೆ ಮಾಡಿದೆ. ಈ ಮೂಲಕ 'ಧುರಂಧರ್' ಹಾಗೂ 'ಪುಷ್ಪ-2' ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಿ ನಿತೇಶ್ ತಿವಾರಿ ಸಿನಿಮಾ ಸಂಚಲನ ಸೃಷ್ಟಿಸಿದೆ. ಶನಿವಾರದಂದು 27.65 ಕೋಟಿ ರೂ. ವಸೂಲಿ ಆಗಿತ್ತು. ಆ ಮೂಲಕ ವೀಕೆಂಡ್ 63 ಕೋಟಿ ಗಳಿಸಿದಂತಾಗಿದೆ.
4ನೇ ಸ್ಥಾನ
ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ 'ರಾಮಾಯಣ- 1' ಈಗ ನಾಲ್ಕನೇ ಸ್ಥಾನದಲ್ಲಿದೆ. ಚೀನಾ ಬಾಕ್ಸಾಫೀಸ್ ಗಳಿಕೆ ಸೇರಿ 'ದಂಗಲ್' ಮೊದಲ ಸ್ಥಾನದಲ್ಲಿದೆ. 'ಧುರಂಧರ್'-2 ಸಿನಿಮಾ ಎರಡನೇ ಸ್ಥಾನ ಹಾಗೂ 'ಬಾಹುಬಲಿ- 2' ಸಿನಿಮಾ ಮೂರನೇ ಸ್ಥಾನದಲ್ಲಿದೆ. ಇನ್ನೆರಡು ದಿನಗಳಲ್ಲಿ ರಾಜಮೌಳಿ ಸಿನಿಮಾ ದಾಖಲೆ ಹಿಂದಿಕ್ಕಿ 'ರಾಮಾಯಣ- 1' ಮುಂದುವರೆಯಲಿದೆ.
2000 ಕೋಟಿ ರೂ. ಕ್ಲಬ್
'ರಾಮಾಯಣ- 1' ಸಿನಿಮಾ ಅಂತಿಮವಾಗಿ 2000 ಕೋಟಿ ರೂ. ಕ್ಲಬ್ ಸೇರುತ್ತಾ ಎನ್ನುವ ಚರ್ಚೆ ನಡೀತಿದೆ. ಕೇವಲ 18 ದಿನಕ್ಕೆ ಸಿನಿಮಾ 1600 ಕೋಟಿ ರೂ. ಗಡಿ ದಾಟಿದೆ. ಆ ಮೂಲಕ ಅತಿ ವೇಗವಾಗಿ ಈ ಸಾಧನೆ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಆದರೆ 2000 ಕೋಟಿ ರೂ. ಗಡಿ ದಾಟಲು ಇನ್ನು 300 ಕೋಟಿ ರೂ.ಗೂ ಹೆಚ್ಚು ಗಳಿಸಬೇಕಿದೆ. ಇದು ಸಾಧ್ಯಾನಾ ? ಎನ್ನುವುದನ್ನು ಕಾದು ನೋಡಬೇಕು.