ಯಶ್ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಮೊದಲ ಎರಡು ದಿನದಲ್ಲಿ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸಂಚಲನ ಸೃಷ್ಟಿಸಿದೆ. ವಾರದ ದಿನದಲ್ಲಿ ಕೂಡ ಸಿನಿಮಾ ಗಳಿಕೆ ಭರ್ಜರಿಯಾಗಿದ್ದು ದೀಪಾವಳಿ ವೀಕೆಂಡ್ ವರವಾಗುವ ಸುಳಿವು ಸಿಕ್ತಿದೆ.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಮೊದಲ ಭಾಗ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಒಳ್ಳೆ ಅಂಕ ಗಿಟ್ಟಿಸಿಕೊಂಡಿದೆ. ಒಂದಷ್ಟು ತಪ್ಪುಗಳ ನಡುವೆಯೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಿನಿಮಾ ಗೆದ್ದಿದೆ. ತ್ರಿಡಿಯಲ್ಲಿ ವಿಷ್ಯುವಲ್ಸ್ ಅದ್ಭುತವಾಗಿದೆ. ರಾವಣನಾಗಿ ಯಶ್ ನಟನೆಗೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದಾರೆ. ಕರ್ನಾಟಕದಲ್ಲೂ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
2 ದಿನಕ್ಕೆ 221 ಕೋಟಿ ಕಲೆಕ್ಷನ್
ಮೊದಲ ದಿನ 'ರಾಮಾಯಣ' 155 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡವೇ ಮಾಹಿತಿ ನೀಡಿದೆ. ಎರಡೇ ದಿನವೂ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಚಿತ್ರ ಸೆಳೆದಿತ್ತು. ನಿಧಾನವಾಗಿ ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಬರ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಕಲೆಕ್ಷನ್ ಹೆಚ್ಚಾಗಿತ್ತು. ಬಾಕ್ಸಾಫೀಸ್ ಪಂಡಿತರ ಪ್ರಕಾರ 2ನೇ ದಿನ 70 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಹೇಳಲಾಗ್ತಿದೆ. ಆ ಲೆಕ್ಕದಲ್ಲಿ ಎರಡು ದಿನಕ್ಕೆ ಸಿನಿಮಾ 221 ಕೋಟಿ ರೂ. ಕೊಳ್ಳೆ ಹೊಡೆದಂತೆ ಆಗಿದೆ.
ಕರ್ನಾಟಕದಲ್ಲಿ ಕಲೆಕ್ಷನ್
ಕನ್ನಡ ಡಬ್ಬಿಂಗ್ ಗುಣಮಟ್ಟ ಚೆನ್ನಾಗಿದೆ. ಲಿಪ್ ಸಿಂಕ್ ಪರ್ಫೆಕ್ಟ್ ಆಗಿದ್ದು ಕನ್ನಡ ಸಿನಿಮಾ ಎನ್ನುವಂತೆ 'ರಾಮಾಯಣ' ಭಾಸವಾಗುತ್ತದೆ. ಇನ್ನು ಯಶ್ ಸ್ವತಃ ಕನ್ನಡದಲ್ಲಿ ಡಬ್ ಮಾಡಿರುವುದು ಪ್ಲಸ್ ಆಗಿದೆ. ಮೊದಲ ದಿನ ಕರ್ನಾಟಕದಲ್ಲಿ ಸಿನಿಮಾ 15 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. 2ನೇ ದಿನ ರಾಜ್ಯದಲ್ಲಿ ಗಳಿಕೆ 10 ಕೋಟಿ ದಾಟಿರುವ ಸುಳಿವು ಸಿಕ್ಕಿದೆ. ಇನ್ನು ಬುಕ್ಮೈ ಶೋನಲ್ಲಿ ರೆಸ್ಪಾನ್ಸ್ ಚೆನ್ನಾಗಿದೆ. ಗಂಟೆಗೆ 40 ಸಾವಿರ ಟಿಕೆಟ್ ಮಾರಾಟವಾಗ್ತಿದೆ. ಹಾಗಾಗಿ ಸಿನಿಮಾ ಮುಂದೆ ದೊಡ್ಡದಾಗಿ ಗಲ್ಲಾಪೆಟ್ಟಿಗೆ ತುಂಬಿಸುವ ಲಕ್ಷಣಗಳು ಕಾಣ್ತಿದೆ.
3ನೇ ದಿನ
ಗುರುವಾರ ಹಾಗೂ ಶುಕ್ರವಾರ ವಾರದ ದಿನಗಳು. ಹಾಗಾಗಿ ನಿರೀಕ್ಷಿತ ಮಟ್ಟದಲ್ಲಿ 'ರಾಮಾಯಣ' ಸಿನಿಮಾ ಗಳಿಕೆ ಕಂಡಿಲ್ಲ. ಆದರೆ 3ನೇ ದಿನವಾದ ಇಂದು ಶನಿವಾರ. ದೊಡ್ಡಸಂಖ್ಯೆಯಲ್ಲಿ ಪ್ರೇಕ್ಷಕರು ಇವತ್ತು ಸಿನಿಮಾ ನೋಡಲು ಮುಂದಾಗಿದ್ದಾರೆ. ಹಾಗಾಗಿ ಕಲೆಕ್ಷನ್ ಕೂಡ ಹೆಚ್ಚುವ ಸುಳಿವು ಸಿಕ್ತಿದೆ. ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದ್ದು ಬಾಕ್ಸಾಫೀಸ್ ಶೇಕ್ ಆಗುವ ನಿರೀಕ್ಷೆಯಿದೆ.