ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್'- 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ. ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ, ಮೋಹನ್ ಲಾಲ್ ಸಹ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರತಂಡ ವಿಶೇಷ ಟಾಕ್ ಶೋ ನಡೆಸಿದೆ. ಈ ವೇಳೆ ರಜನಿಕಾಂತ್ ಸಾಕಷ್ಟು ಸಂಗತಿ ಹಂಚಿಕೊಂಡಿದ್ದಾರೆ.
ದೊಡ್ಡ ಸಿನಿಮಾಗಳಿಗೆ ಸಾಮಾನ್ಯವಾಗಿ ಆಡಿಯೋ ಲಾಂಚ್, ಪ್ರೀ ರಿಲೀಸ್ ಈವೆಂಟ್ ಮಾಡ್ತಾರೆ. ಆದರೆ 'ಜೈಲರ್'- 2 ತಂಡ ಹೊಸ ಪ್ರಯತ್ನ ಮಾಡಿದೆ. ಇಡೀ ತಂಡ ಒಂದ್ಕಡೆ ಸೇರಿ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಚರ್ಚಿಸಿದೆ. ಅದನ್ನು ಶೂಟ್ ಮಾಡಿ 'ಜೈಲರ್- 2 ಸೂಪರ್ ಶೋ' ಸನ್ ನೆಕ್ಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಮಾಡಲಾಗಿದೆ. ರಜನಿಕಾಂತ್ ಕೊಂಚ ತಮಾಷೆಯಾಗಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ
ನಟ ರಜನಿಕಾಂತ್ ಎಷ್ಟು ಹಂಬಲ್ ಎನ್ನುವುದು ಗೊತ್ತು. ಸೂಪರ್ ಸ್ಟಾರ್ ಆಗಿದ್ದರೂ ತಗ್ಗಿ ಬಗ್ಗಿ ನಡೆಯುವ ಆಸಾಮಿ. ಯಾವುದೇ ಹೀರೊಯಿಸಂ ಇಲ್ಲದೇ ಬಿಳಿ ಅಂಗಿ, ಪಂಚೆ ತಪ್ಪಿದರೆ ಶರ್ಟು- ಪ್ಯಾಂಟ್ ಧರಿಸಿ ಕಾಣಿಸಿಕೊಳ್ತಾರೆ. ತೆರೆಮೇಲೆ ಮಾತ್ರ ಹೀರೊ ರೀತಿ ಸೂಟು ಬೂಟು ಧರಿಸಿ ಕೊಳ್ಳುತ್ತಾರೆ. ತಮಿಳುನಾಡಿದಲ್ಲಿ ದೊಡ್ಡ ನಟನಾಗಿದ್ದರೂ ಇವತ್ತಿಗೂ ಹುಟ್ಟಿ ಬೆಳೆದ ಬೆಂಗಳೂರನ್ನು ಮರೆತ್ತಿಲ್ಲ. ಕಂಡೆಕ್ಟರ್ ಆಗಿದ್ದ ದಿನಗಳನ್ನು ಮೆಲುಕು ಹಾಕುತ್ತಲೇ ಇರ್ತಾರೆ. ಆಗಾಗ್ಗೆ ಇಲ್ಲಿಗೆ ಬರ್ತಾರೆ.
ರಜನಿ ಸರ್ ನೀವು ಇಷ್ಟು ಹಂಬಲ್ ಆಗಿ ಇರುವುದಕ್ಕೆ ಹೇಗೆ ಸಾಧ್ಯ ? ಎಂದು 'ಜೈಲರ್- 2 ಸೂಪರ್ ಶೋ'ನಲ್ಲಿ ನಿರ್ದೇಶಕ ನೆಲ್ಸನ್ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ತಲೈವಾ "ನೋಡಿ ನಾನು ಎಷ್ಟೆ ದೊಡ್ಡ ನಟ ಆಗಿದ್ರು, ಮೊದಲು ಕಂಡೆಕ್ಟರ್.. ಕಂಡಿತ ನಟನೆ ಅಂದ್ರೆ ಬಹಳ ಇಷ್ಟ. ಆದ್ರೆ ಅದಕ್ಕಿಂತಲೂ ಹೆಚ್ಚು ಕಂಡೆಕ್ಟರ್ ಕೆಲಸ ಇಷ್ಟಪಟ್ಟಿದ್ದೆ.. ಆ 5 ವರ್ಷ ಕಂಡೆಕ್ಟರ್ ಕೆಲ್ಸ ಆ ತರ ಇತ್ತು. ಇವತ್ತಿಗೂ ಬಹಳ ಮಿಸ್ ಮಾಡಿಕೊಳ್ತೀನಿ.. ನಾನು ಕಂಡೆಕ್ಟರ್ ಎನ್ನುವುದು ಮನಸ್ಸಿನಲ್ಲಿ ಆಳವಾಗಿ ಕೂತುಬಿಟ್ಟಿದೆ" ಎಂದಿದ್ದಾರೆ.
ಅಯ್ಯೋ ಕಂಡೆಕ್ಟರ್ ಆಗಿ ನಾನೂರು ಐನೂರು ರೂಪಾಯಿ ಸಂಪಾದಿಸುತ್ತಿದ್ದೆ. ಈ ಹಣ, ಯಶಸ್ಸು ಎಲ್ಲಾ ಬಂದು ಹೋಗುವಂತದ್ದು ಎಂದುಕೊಂಡಿದ್ದೀನಿ.. ಹಾಗಾಗಿ ರಜನಿಕಾಂತ್, ಸೂಪರ್ ಸ್ಟಾರ್ ಎನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗ್ಲಿಲ್ಲ.. ಹಾಗಾಗಿ ಪದೇ ಪದೆ ಬೆಂಗಳೂರಿಗೆ ಹೋಗ್ತೀನಿ.. ಆ ಬಸ್‌ಗಳನ್ನು ನೋಡ್ತಿದ್ರೆ ಏನೋ ಸಂತೋಷ.. ಮೊನ್ನೆ ಮೊನ್ನೆ ಅಲ್ಲಿಗೆ ಹೋಗಿ ಬಂದೆ.. ಈಗ್ಲೂ ಆ ಖಾಕಿ ಬಟ್ಟೆ ನೋಡಿದ್ರೆ, ಪ್ರೀತಿ ಬರುತ್ತೆ.. ಹಂಗಾಗಿ ಮನಸ್ಸಿನಲ್ಲಿ ನಾನು ಬಸ್ ಕಂಡೆಕ್ಟರ್ ಎಂದುಕೊಂಡಿದ್ದೀನಿ.. ಬಸ್ ಕಂಡೆಕ್ಟರ್ ನಿಮ್ಮಂತಹ ದೊಡ್ಡ ವ್ಯಕ್ತಿಗಳ ಜೊತೆ ಹೇಗಿರ್ತಾರೆ ಹೇಳಿ ತಮ್ಮದೇ ಶೈಲಿಯಲ್ಲಿ ರಜನಿಕಾಂತ್ ನಕ್ಕಿದ್ದಾರೆ.
Rajini likes Conductor job more then an acting and suddenly Nelson asked sir if you till now ready to work Conductor job ?
— 𝑀𝑜𝓃𝓀𝑒𝓎`𝒟`~𝐿𝓊𝒻𝒻𝓎☆°𓃮 (@KollywoodTrack3) October 9, 2026
Rajini : yes I will do
Nelson: Sir I know CM sir very well can I refer you.
Rajini: Please nelsaa I want to do job under CMVijay sir gov💥#Jailer2 pic.twitter.com/wv2fKLTYE8