ಸಿನಿಮಾದಲ್ಲಿ ಬಿಟ್ರೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಜನಿಕಾಂತ್ ಡ್ಯಾನ್ಸ್ ಮಾಡುವುದಿಲ್ಲ. ಮುಖೇಶ್ ಅಂಬಾನಿ ಮಗನ ಮದುವೆಯಲ್ಲಿ ತಲೈವಾ ಡ್ಯಾನ್ಸ್ ಮಾಡಿದ್ದು ವೈರಲ್ ಆಗಿತ್ತು. ಇದೀಗ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಮದುವೆ ಸಮಾರಂಭದಲ್ಲಿ ಸಹ ಸೂಪರ್ ಸ್ಟಾರ್ ಡ್ಯಾನ್ಸ್ ಮಾಡಿದ್ದಾರೆ.

ನಿನ್ನೆ(ನವೆಂಬರ್ 11) ದೂರದ ಗ್ರೀಸ್‌ನಲ್ಲಿ ಅನಿ- ಕಾವ್ಯಾ ಮದುವೆ ನೆರವೇರಿದೆ. ಕೆಲವೇ ಆಪ್ತರ ಸಮ್ಮುಖದಲ್ಲಿ ಕಲ್ಯಾಣೋತ್ಸವ ನಡೆದಿದೆ. ಸೂಪರ್ ಸ್ಟಾರ್ ರಜನಿಕಾಂತ್ ಫ್ಯಾಮಿಲಿ ಸಮೇತ ಈ ಸಂಭ್ರಮಾಚರಣೆಯಲ್ಲಿ ಭಾಗಿ ಆಗಿದ್ದರು. ತಮಿಳುನಾಡು ಮಾಜಿ ಸಿಎಂ ಎಂ.ಕೆ ಸ್ಟಾಲಿನ್ ಹಾಗೂ ಪುತ್ರ ಉದಯನಿಧಿ ಸ್ಟಾಲಿನ್ ಸಹ ಭಾಗ ಆಗಿದ್ದರು.

ನವೆಂಬರ್ 21ರಂದು ಚೆನ್ನೈನಲ್ಲಿ ಅನಿ-ಕಾವ್ಯಾ ರಿಸೆಪ್ಷನ್ ಪಾರ್ಟಿಯಿದೆ. ಹಾಗಾಗಿ ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ಶಾಸ್ತ್ರಗಳು ನಡೆದಿದೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗ್ತಿದೆ. ಇನ್ನು ಮದುವೆ ಸಂಭ್ರಮದಲ್ಲಿ ಸಂಗೀತ್ ಪಾರ್ಟಿ ಕೂಡ ನಡೆದಿದ್ದಾರೆ. ಕಾವ್ಯಾ ತಂದೆ ಕಲಾನಿಧಿ ಮಾರನ್ ಸೇರಿ ಇಡೀ ಕುಟುಂಬ ಸದಸ್ಯರು ನವ ವಧು ವರರ ಜೊತೆ ಕುಣಿದು ಸಂಭ್ರಮಿಸಿದ್ದಾರೆ. ಅಲ್ಲೇ ಇದ್ದ ರಜನಿಕಾಂತ್ ಕೂಡ ಮೈಕುಲುಕಿದ್ದಾರೆ. ಆ ವೀಡಿಯೋ ವೈರಲ್ ಆಗ್ತಿದೆ.

ಅಂಬಾನಿ ಮನೆ ಕಾರ್ಯಕ್ರಮದಲ್ಲಿ ರಜನಿಕಾಂತ್ ಡ್ಯಾನ್ಸ್ ಮಾಡಿದ್ದು ಟ್ರೋಲ್ ಆಗಿತ್ತು. ಸಾಮಾನ್ಯವಾಗಿ ಖಾಸಗಿ ಕಾರ್ಯಕ್ರಮದಲ್ಲಿ ಅವರು ಡ್ಯಾನ್ಸ್ ಮಾಡಲ್ಲ. ಅಂಬಾನಿ ಮನೆ ಮದುವೆ ನಮ್ಮದೇ ಮನೆ ಕಾರ್ಯಕ್ರಮ ಎನ್ನುವಂತೆ ಡ್ಯಾನ್ಸ್ ಮಾಡಿದ್ದಾರೆ. ಅದಕ್ಕೆ ಅಂಬಾನಿ ಎಷ್ಟು ಹಣ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದು ಕೆಲವರು ವ್ಯಂಗ್ಯವಾಡಿದ್ದರು.

ಸಂಗೀತ ನಿರ್ದೇಶಕ ಅನಿರುದ್ಧ್ ಹಾಗೂ ರಜನಿಕಾಂತ್ ಸಂಬಂಧಿಕರು. ಲತಾ ರಜನಿಕಾಂತ್ ಸಹೋದರಿ ಮಗ ಅನಿರುದ್ಧ್. ಹಾಗಾಗಿ ತಮ್ಮದೇ ಮನೆ ಮದುವೆ ಎನ್ನುವಂತೆ ಸೂಪರ್ ಸ್ಟಾರ್ ಸಂಭ್ರಮಿಸಿದ್ದಾರೆ. ತಲೈವಾ ನಟನೆಯ ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿ ಅನಿರುದ್ಧ್ ಸಕ್ಸಸ್ ಕಂಡಿದ್ದಾರೆ. ಇತ್ತೀಚೆಗೆ ಬಂದ 'ಜೈಲರ್- 2' ಚಿತ್ರದಲ್ಲಿ ಅನಿ ಮ್ಯೂಸಿಕ್ ಸದ್ದು ಮಾಡಿತ್ತು.