ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಉದ್ಯಮಿ ಕಾವ್ಯಾ ಮಾರನ್ ಕಲ್ಯಾಣೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ದೂರದ ಗ್ರೀಸ್ ದೇಶದಲ್ಲಿ ಇವತ್ತು(ನವೆಂಬರ್ 11), ನಾಳೆ(ನವೆಂಬರ್ 12) ಡೆಸ್ಟಿನೇಷನ್ ವೆಡ್ಡಿಂಗ್ ನಡೀತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತಮಿಳುನಾಡು ಮಾಜಿ ಸಿಎಂ ಎಂ. ಕೆ ಸ್ಟಾಲಿನ್ ಸೇರಿದಂತೆ ಸಾಕಷ್ಟು ಗಣ್ಯರು ಸಂಭ್ರಮದಲ್ಲಿ ಭಾಗಿ ಆಗುತ್ತಿದ್ದಾರೆ.
ಈಗಾಗಲೇ ಪತ್ನಿ ಹಾಗೂ ಇಬ್ಬರು ಮಕ್ಕಳ ಸಮೇತ ನಟ ರಜನಿಕಾಂತ್ ಗ್ರೀಸ್ ದೇಶ ತಲುಪಿದ್ದಾರೆ. ತಲೈವಾ ವಿಮಾನ ನಿಲ್ದಾಣದಿಂದ ಹೊರಟ ವೀಡಿಯೋ ಹಾಗೂ ಗ್ರೀಸ್ನಲ್ಲಿ ಪತ್ನಿ ಜೊತೆ ಕ್ಲಿಕ್ಕಿಸಿಕೊಂಡ ಫೋಟೊ ವೈರಲ್ ಆಗ್ತಿದೆ. 4 ಖಾಸಗಿ ವಿಮಾನಗಳಲ್ಲಿ ಅತಿಥಿಗಳು ಅನಿರುದ್ಧ್ ಹಾಗೂ ಕಾವ್ಯಾ ಮದುವೆ ಸಮಾರಂಭಕ್ಕೆ ಗ್ರೀಸ್ ತಲುಪಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರಗಳು ಆರಂಭವಾಗಿದೆ.
ಲತಾ ರಜನಿಕಾಂತ್ ಸಹೋದರಿ ಮಗ ಅನಿರುದ್ಧ್ ರವಿಚಂದರ್. ರಜನಿಕಾಂತ್ ಅವರನ್ನು ಅಂಕಲ್ ಎಂದೇ ಅನಿರುದ್ಧ್ ಕರೆಯುತ್ತಾರೆ. ಇನ್ನು ಕರುಣಾನಿಧಿ ಫ್ಯಾಮಿಲಿ ಕುಡಿ ಕಾವ್ಯಾ ಮಾರನ್. ಹಾಗಾಗಿ ಮಾಜಿ ಸಿಎಂ ಎಂಕೆ ಸ್ಟಾಲಿನ್ ಕೂಡ ಮದುವೆ ಸಮಾರಂಭಕ್ಕೆ ಸಾಕ್ಷಿ ಆಗುತ್ತಿದ್ದಾರೆ. ನವೆಂಬರ್ 21ರಂದು ಚೆನ್ನೈನಲ್ಲಿ ಅನಿರುದ್ಧ್ ಹಾಗೂ ಕಾವ್ಯಾ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿದೆ. ರಿಸೆಪ್ಷನ್ ಪಾರ್ಟಿಗೆ ಪ್ರಧಾನಿ ಮೋದಿ, ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಸೇರಿ ಸಾಕಷ್ಟು ಗಣ್ಯರಿಗೆ ಆಮಂತ್ರಣ ನೀಡಲಾಗಿದೆ.
ಬಹಳ ಹಿಂದೆ ಅನಿರುದ್ಧ್ ಹಾಗೂ ಕಾವ್ಯಾ ನಡುವೆ ಲವ್ವಿ ಡವ್ವಿ ನಡೀತಿದೆ ಎಂದು ಗುಲ್ಲಾಗಿತ್ತು. ಆದರೆ ಇಬ್ಬರೂ ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಮದುವೆ ಅನ್ನೋದೆಲ್ಲಾ ಸುಳ್ಳು ಎಂದು ಅನಿ ಟ್ವೀಟ್ ಮಾಡಿದ್ದರು. ಆದರೆ ವಿದೇಶದಲ್ಲಿ ಇಬ್ಬರೂ ಕದ್ದು ಮುಚ್ಚಿ ಓಡಾಡುತ್ತಿದ್ದ ಫೋಟೊಗಳು ವೈರಲ್ ಆಗಿತ್ತು. ಬಳಿಕ ಇಬ್ಬರೂ ಮದುವೆ ಆಗುವುದು ಖಚಿತ ಎನ್ನುವ ಚರ್ಚೆ ಶುರುವಾಗಿತ್ತು. ಆದರೂ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಗಲಿಲ್ಲ. ಇತ್ತೀಚೆಗೆ ಕಾವ್ಯಾ ಪೋಷಕರು ಗಣ್ಯರಿಗೆ ಆಮಂತ್ರಣ ಕೊಟ್ಟಮೇಲೆ ಮದುವೆ ವಿಚಾರ ಬಹಿರಂಗವಾಗಿತ್ತು.
ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕನಾಗಿ ಅನಿರುದ್ಧ್ ಗುರ್ತಿಸಿಕೊಂಡಿದ್ದಾರೆ. 'ಪೆಟ್ಟಾ', 'ದರ್ಬಾರ್', 'ಜೈಲರ್', 'ವೆಟ್ಟೈಯಾನ್' ಮತ್ತು 'ಜೈಲರ್- 2' ಚಿತ್ರಗಳಿಗೆ ಟ್ಯೂನ್ ಹಾಕಿ ಸಕ್ಸಸ್ ಕಂಡಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆಯ ಕಲಾನಿಧಿ ಮಾರನ್ ಮಗಳು ಕಾವ್ಯಾ ಐಪಿಎಲ್ ಟೂರ್ನಿಯಲ್ಲಿ ಗುರ್ತಿಸಿಕೊಂಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿಗಾಗಿ ಗಮನ ಸೆಳೆದಿದ್ದಾರೆ.
Super Star #RajiniKanth On The Way to #Anirudh - #Kavyamaran's Wedding ✈️#Jailer2 | #Dharman pic.twitter.com/aWhUhEo3mz
— Journalist Ramesh Pammy (@rameshpammy) November 9, 2026