ಬಾಲಿವುಡ್ ನಟಿ ರಾಧಿಕಾ ಆಪ್ಟೆ ತಮ್ಮ ಬೋಲ್ಡ್ ಪಾತ್ರಗಳು, ಬೋಲ್ಡ್ ಸ್ಟೇಟ್‌ಮೆಂಟ್ ಮೂಲಕ ಪದೇ ಪದೆ ಸುದ್ದಿ ಆಗುತ್ತಾರೆ. ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಆಕೆ ನೋಡುಗರ ಹುಬ್ಬೇರಿಸಿರುವುದು ಇದೆ. ಆದರೆ ಚಿತ್ರವೊಂದರ ತಮ್ಮ ಹಾಟ್ ಸೀನ್ ಲೀಕ್ ಆಗಿ ಎದುರಿಸಿದ ಆಘಾತದ ಬಗ್ಗೆ ಆಕೆ ಮಾತನಾಡಿದ್ದಾರೆ.

ಆ ಘಟನೆ ನಡೆದ ಬಳಿಕ ನಾಲ್ಕೈದು ದಿನ ಮನೆಯಿಂದ ಹೊರಗೆ ಬರುವುದಕ್ಕೆ ಭಯವಾಗಿತ್ತು ಎಂದು ರಾಧಿಕಾ ಆಪ್ಟೆ ನೆನಪಿಸಿಕೊಂಡಿದ್ದಾರೆ. 'ಲಸ್ಟ್ ಸ್ಟೋರಿಸ್- 3' ವೆಬ್ ಸೀರಿಸ್‌ನಲ್ಲಿ ಕೂಡ ರಾಧಿಕಾ ನಟಿಸಿದ್ದಾರೆ. ಇಂಡಿಯಾ ಟುಡೇ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಆಕೆ ಕಲಾವಿದರು ಹಸಿಬಿಸಿ ದೃಶ್ಯಗಳಲ್ಲಿ ನಟಿಸುವ ಸಾಧಕ ಭಾದಕಗಳ ಬಗ್ಗೆ ಚರ್ಚಿಸಿದ್ದಾರೆ. "ನನ್ನ ಒಂದು ಹಸಿಬಿಸಿ ದೃಶ್ಯ ವೀಡಿಯೋ ಲೀಕ್ ಆಗಿತ್ತು. ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವ ಪರಿಣಾಮ ಹೇಗಿರುತ್ತದೆ ಎನ್ನುವುದು ಬಹಳ ಬೇಗ ನನಗೆ ಅರ್ಥವಾಗಿತ್ತು. ಕಾರಣ ಅಷ್ಟು ಬೇಗ ಅದು ನಮ್ಮ ಮನೆ ಬಾಗಿಲಿಗೆ ಬರಬಹುದು. ಯಾರಾದ್ರು ಬಾಗಿಲು ಬಡಿಯಬಹುದು. ಆಕ್ರೋಶದಿಂದ ಮನೆ ಮುಂದೆ ಬಂದು ನಿಲ್ಲಬಹುದು. ಇಷ್ಟು ಸುಲಭದ ವಿಷಯ ಅಲ್ಲ. ನನ್ನ ಆಪ್ತರೊಬ್ಬರ ಕಾರು ಚಾಲಕ ಆ ವೀಡಿಯೋವನ್ನು ಪದೇ ಪದೆ ನೋಡ್ತಿದ್ದನಂತೆ. ನೀವು ರಾಧಿಕಾ ಮನೆಗೆ ಹೋಗ್ತೀರಾ ಎಂದು ಕೇಳ್ತಿದ್ದನಂತೆ" ಎಂದು ವಿವರಿಸಿದ್ದಾರೆ.

ನನ್ನ ಮನೆಯ ವಾಚ್‌ಮನ್ ಕೂಡ ಆ ವೀಡಿಯೋ ನೋಡಿದ್ದ ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ. ಕೊನೆಗೆ ಕೊನೆಗೆ ನನ್ನ ಕಾಡು ಚಾಲಕ ಮತ್ತು ಸಹಾಯಕನಿಗೂ ಹೇಳ್ದೆ. ಒಂದು ವೀಡಿಯೋ ಲೀಕ್ ಆಗಿದೆ, ನೋಡಿದ್ರಾ? ಇಲ್ಲದಿದ್ದರೆ ನಾನು ಕಳಿಸ್ತೀನಿ. ನೋಡಿ.. ಪರವಾಗಿಲ್ಲ ಎನಿಸಿದರೆ ನೀವು ನನ್ನನ್ನು ರಕ್ಷಿಸಬೇಕು, ಇಲ್ಲದಿದ್ದರೆ ನನ್ನ ಬಳಿ ಕೆಲಸ ಮಾಡೋದು ಬೇಡ.. ತಗೊಳ್ಳಿ ನಿಮ್ಮ ಸಂಬಳ, ನೀವು ಕೆಲಸ ಬಿಟ್ಟು ಹೋಗಬಹುದು ಅಂದೆ. ನಾವು ನಿಮ್ಮ ಜೊತೆಗಿರ್ತೀವಿ ಅಂದ್ರು. ಆಗ ನಾನು ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಳೆ ಇದ್ದೆ. ಹಾಗಾಗಿ ಬಹಳ ಭಯವಾಗಿತ್ತು ಎಂದು ರಾಧಿಕಾ ವಿವರಿಸಿದ್ದಾರೆ.