ಕನ್ನಡದಲ್ಲಿ ಗೆದ್ದ 'ಪ್ರೇಮದ ಊರಲಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ತಯಾರಿ ನಡೆದಿದೆ. ಈಗಾಗಲೇ ತೆಲುಗಿಗೆ ಡಬ್ ಆಗಿ 'ಪ್ರೇಮನೆ ಊರಿಲೊ' ಹೆಸರಿನಲ್ಲಿ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ತಪ್ಪದೇ ಎಲ್ಲರೂ ಸಿನಿಮಾ ನೋಡಿ ಮಿಸ್ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ.
ತೆಲುಗು ಮಾಧ್ಯಮಗಳಲ್ಲಿ ಕೂಡ ಚಿತ್ರದ ಬಗ್ಗೆ ಒಳ್ಳೆ ಮಾತುಗಳು ಕೇಳಿಬರ್ತಿದೆ. ಅಲ್ಲಿನ ವಿಮರ್ಶಕರು ಮೆಚ್ಚಿ ಸಿನಿಮಾ ನೋಡುವಂತೆ ಸಲಹೆ ನೀಡುತ್ತಿದ್ದಾರೆ. ಆದರೆ ದೊಡ್ಡಮಟ್ಟದಲ್ಲಿ ಶೋಗಳು ಸಿಗುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಆಂಧ್ರ ತೆಲಂಗಾಣದಲ್ಲಿ ಸಿನಿಮಾ ಪ್ರೇಕ್ಷಕರನ್ನು ತಲುಪುತ್ತಿಲ್ಲ ಎನ್ನುವುದು ಬೇಸರ ಸಂಗತಿ. ಕೆಲ ಶೋಗಳು ಹೌಸ್‌ಫುಲ್ ಕೂಡ ಆಗ್ತಿದೆ. ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಎಂದು ಎಲ್ಲರೂ ಹೇಳ್ತಿದ್ದಾರೆ.
ಸಿಂಪ್ಲಿ ಸೂಪರ್
ಇದು ಗುರೂ ಪರ್ಫೆಕ್ಟ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಅಂದ್ರೆ.. ರಿಲೇಷನ್‌ಶಿಪ್ ನಡುವೆ ಎಮೋಷನ್ ಬಹಳ ಚೆನ್ನಾಗಿ ತೋರಿಸಿದ್ದಾರೆ. ತಂದೆ ಹಾಗೂ ಮಗನ ಬಾಂಧವ್ಯ, ಅತ್ತೆ ಮಗಳ ಜೊತೆ ನಾಯಕನ ಕಾಮಿಡಿ ಸೂಪರ್ ಎಂದು ತೆಲುಗು ಪ್ರೇಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.
ಸಂತು-ವಸಂತಾ ಮೋಡಿ
'ಪ್ರೇಮನೆ ಊರಿಲೊ' ಪಕ್ಕಾ ಹಳ್ಳಿ ಹಿನ್ನಲೆ ಕಥೆ. ಅಲ್ಲಿನ ಚಿತ್ರಣವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ತಂದೆ, ಮಗನ ಬಾಂಧವ್ಯ ಚಿತ್ರದ ಬೆನ್ನೆಲುಬು, ಕೆಲವೆಡೆ ಅಳಿಸಿಬಿಡ್ತಾರೆ. ಸಂತೋಷ ಹಾಗೂ ವಸಂತ ನಡುವಿನ ಸನ್ನಿವೇಶಗಳು ಮಜವಾಗಿದೆ ಎನ್ನುವುದು ಮತ್ತೊಬ್ಬರ ಅಭಿಪ್ರಾಯ..
ಬಹಳ ನ್ಯಾಚುರಲ್ ಆಗಿದೆ
ಲಾಂಗ್ ವೀಕೆಂಡ್ ಅಂತ ಮನೆ ಬಳಿ ಇದ್ದ ಚಿತ್ರಮಂದಿರದಲ್ಲಿ 'ಪ್ರೇಮನೆ ಊರಿಲೊ' ಸಿನಿಮಾ ನೋಡ್ದೆ. ಬಹಳ ದಿನಗಳ ಬಳಿಕ ಹಳ್ಳಿ ಹಿನ್ನಲೆಯ ಸಿನಿಮಾ. ಬಹಳ ನ್ಯಾಚುರಲ್ ಆಗಿ ಮಾಡಿದ್ದಾರೆ. ಎಮೋಷನ್ ಸೀನ್ಸ್, ಲವ್ ಟ್ರ್ಯಾಕ್ ಸೊಗಸಾಗಿ ಮೂಡಿಬಂದಿದೆ ಎಂದು ಚಂದು ಎಂಬುವವರು ಟ್ವೀಟಿಸಿದ್ದಾರೆ.
ತಂದೆ-ಮಗನ ಬಾಂಧವ್ಯ ಸೊಗಸು
'ಪ್ರೇಮನೆ ಊರಿಲೊ' ಚಿತ್ರ ನೋಡ್ದೆ. ಬಹಳ ಸರಳವಾದ ಫ್ಯಾಮಿಲಿ ಡ್ರಾಮಾ. ತಂದೆ-ಮಗನ ಬಾಂಧವ್ಯ.. ಭಾವನಾತ್ಮಕ ಸನ್ನಿವೇಶಗಳು ಹೈಲೈಟ್ ಆಗಿದ್ದು, ಸತಿ-ಪತಿಯ ಕೆಲ ಸುಂದರ ಸನ್ನಿವೇಶಗಳು ಇವೆ. ಸಂತು, ವಸಂತಾ ಟ್ರ್ಯಾಕ್ ಮಜವಾಗಿದೆ. ಕ್ರಿಕೆಟ್ ಆಟದ ಸನ್ನಿವೇಶಗಳು ನಗಿಸುತ್ತವೆ ಎಂದು ಕಾರ್ತಿಕ್ ಎಂಬುವವರು ಬೆರೆದುಕೊಂಡಿದ್ದಾರೆ.
Watched #PremaneOorilo and the film has a very simple, old-school family drama feel to it.
— Karthikuuu (@Anchor_Karthik_) October 3, 2026
Father-son bonding is the major emotional highlight, with some good husband-wife moments too. The bava-mardhal track brings fun and the cricket match was hilarious.
The village portions… pic.twitter.com/cMwnw33UXR
Father son bonding connect ayyipotaru literally❤️
— Pradeep_NTR🐉❤️🔥 (@Dragon_2027) October 3, 2026
Bava maradhal comedy, cricket match scene ki manchi fun generate chesindhi👌👌👌
Overall ga families chudalisena movie edi chala bagundhi😍🤌#PremaneOorilo pic.twitter.com/GiDfRDLnvz